/newsfirstlive-kannada/media/post_attachments/wp-content/uploads/2025/05/mock-drill-4.jpg)
ಉಗ್ರರ ಅಡಗುತಾಣಗಳ ಮೇಲೆ "ಆಪರೇಷನ್ ಸಿಂಧೂರ" ಯಶಸ್ವಿಯಾಗಿದೆ. ಯುದ್ಧದ ಕಾರ್ಮೋಡ ಆವರಿಸಿದ್ದು ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಮಾಕ್​​ಡ್ರಿಲ್ ಯಜ್ಞ ನೆರವೇರಿದೆ. ಒಂದ್ವೇಳೆ ಯುದ್ಧ ಪ್ರಾರಂಭವಾದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಹಾಗೂ ವಾಯುದಾಳಿ ವೇಳೆ ಸ್ವಯಂ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಜನಜಾಗೃತಿ ಮೂಡಿಸಲಾಗ್ತಿದೆ.
ಕೆಣಕಿದ್ರೆ ಸುಮ್ನಿರಲ್ಲ.. ತಂಟೆಗೆ ಬಂದ್ರೆ ಬಿಡೋ ಮಾತೇ ಇಲ್ಲ.. ಆಪರೇಷನ್ ಸಿಂಧೂರ ಉಗ್ರರ ಹುಟ್ಟಡಗಿಸಿದೆ. ಇದು ಮಾಕ್​ಡ್ರಿಲ್.. ಯುದ್ಧಕ್ಕೆ ತಯಾರಿ ಮಾಡಿಕೊಳ್ಳೋ ತಂತ್ರ.. ವಾಯುದಾಳಿ ಅಥವಾ ನೈಸರ್ಗಿಕ ವಿಕೋಪದಂತಹ ತುರ್ತು ಪರಿಸ್ಥಿತಿಗಳ ಸಮಯದಲ್ಲಿ, ತೆಗೆದುಕೊಳ್ಳಬಹುದಾದ ಮುಂಜಾಗೃತಾ ಕ್ರಮಗಳ ಕುರಿತು ಮೂಡಿಸುವ ಜಾಗೃತಿ ಅಭಿಯಾನ.
ಇದನ್ನೂ ಓದಿ: ಆಪರೇಷನ್ ಸಿಂಧೂರ 2.O? ಪೀಸ್, ಪೀಸ್ ಆದ ಉಗ್ರರ 9 ಅಡಗುತಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
/newsfirstlive-kannada/media/post_attachments/wp-content/uploads/2025/05/mock-drill-5.jpg)
ಮೊಳಗಿತು ಸೈರನ್.. ಗಡಿಯಲ್ಲಿ ಹೈಅಲರ್ಟ್!
ಭಾರತ-ಪಾಕ್​ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಭಾರತದ ಮೇಲೆ ಪಾಕ್​ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ. ಒಂದ್ವೇಳೆ ಯುದ್ಧದ ಪರಿಸ್ಥಿತಿ ಎದುರಾದ್ರೆ.. ದೇಶವಾಸಿಗಳು ಹೇಗೆಲ್ಲ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು.. ತುರ್ತು ಸಂಧರ್ಭದಲ್ಲಿ ಮಾಡಬೇಕಾದ ಕ್ರಮಗಳ ಬಗ್ಗೆ ಜನರಿಗೆ ಅಣಕು ಪ್ರದರ್ಶನ ನೀಡಲಾಯ್ತು. ಗೃಹಸಚಿವಾಲಯದ ನಿರ್ದೇಶನದಂತೆ ವಿವಿಧ ರಾಜ್ಯಗಳಲ್ಲಿ ವಾಯುದಾಳಿ, ಭೂಕಂಪ, ಇತರೆ ತುರ್ತುಪರಿಸ್ಥಿತಿಗಳಿಗೆ ಸಿದ್ಧತೆ ಬಗ್ಗೆ ಪರೀಕ್ಷಿಸಿಕೊಳ್ಳಲಾಯ್ತು.. ಮುಂಬೈ, ದೆಹಲಿ, ಲಕ್ನೋ ಸೇರಿ ಪ್ರಮುಖ ನಗರಗಳಲ್ಲಿ ಅಣುಕು ಮಾಕ್​ಡ್ರಿಲ್ ನಡೀತು.
ಇದನ್ನೂ ಓದಿ: ಪಾಕಿಸ್ತಾನದ ಪರಮ ಪಾಪಿಗಳಿಗೆ ಈಗ ಕಣ್ಣೀರು.. ನರಕ ತೋರಿಸಿದ ಭಾರತದ ವೈಮಾನಿಕ ದಾಳಿ!
/newsfirstlive-kannada/media/post_attachments/wp-content/uploads/2025/05/mock-drill-7.jpg)
ದೇಶದ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ದೀಪ ಬಂದ್!
ನವದೆಹಲಿಯ ರಾಷ್ಟ್ರಪತಿ ಭವನದ ಎಲ್ಲಾ ವಿದ್ಯುತ್‌ಗಳನ್ನು ಬಂದ್ ಮಾಡುವ ಮೂಲಕ ತುರ್ತು ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಾಲೀಮು ನಡೆಸಲಾಯಿತು. ಅದೇ ರೀತಿ ದೇಶದ ಪ್ರಮುಖ ಸ್ಥಳಗಳಾದ ಪಂಜಾಬ್​ನ ಗೋಲ್ಡನ್​ ಟೆಂಪಲ್​.. ರಾಜಸ್ಥಾನದ ಜೈಸ್ಮಲಾರ್​ ಕೋಟೆ.. ಹೀಗೆ ಪ್ರಮುಖ ಐತಿಹಾಸಿ ಸ್ಥಳಗಳಲ್ಲಿ ವಿದ್ಯುತ್​ ದೀಪ ಆಫ್​ ಮಾಡುವ ಮೂಲಕ ತಾಲೀಮು ನಡೆಸಲಾಯ್ತು..
ಇದನ್ನೂ ಓದಿ: ಉಗ್ರರ ನೆಲೆಗಳ ಮೇಲೆ ಭಾರತ ಮಿಸೈಲ್ ಅಟ್ಯಾಕ್.. ಆದರೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ..?
/newsfirstlive-kannada/media/post_attachments/wp-content/uploads/2025/05/mock-drill-6.jpg)
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಣಕು ಡ್ರಿಲ್ ನಡೀತು. ಮಾಕ್​​ಡ್ರಿಲ್​ನ ಭಾಗವಾಗಿ ನಗರದಾದ್ಯಂತ ವಿದ್ಯುತ್ ಕಡಿತಗೊಳಿಸಲಾಯ್ತು.. ಉತ್ತರ ಪ್ರದೇಶದ ಲಕ್ನೋದಲ್ಲೂ ಮಾಕ್​ಡ್ರಿಲ್​ ನಡೀತು.. ಲಕ್ನೋ ರಿಸರ್ವ್ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಮಾಕ್​ ಡ್ರಿಲ್​ ಅನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವೀಕ್ಷಿಸಿದ್ರು.. ಇನ್ನು ಕಡಲ ನಗರಿ ಗೋವಾದ ಪಣಜಿಯ ಸಮುದ್ರದಲ್ಲಿ ಮಾಕ್​ ಡ್ರಿಲ್​ ನಡೆಯಿತು. ಕರಾವಳಿ ಪಡೆ ಸಾರ್ವಜನಿಕರ ರಕ್ಷಣೆಗಾಗಿ ಯಾವ ರೀತಿ ಸನ್ನದ್ಧವಾಗಿದೆ ಎಂದು ತೋರಿಸಿತು.
ಬೆಂಗಳೂರಲ್ಲಿ ಮೊಳಗಿದ ಸೈರನ್, ರಕ್ಷಣೆಗಿಳಿದ ಸಿಬ್ಬಂದಿ!
ರಾಜಧಾನಿ ಬೆಂಗಳೂರಲ್ಲೂ ಮಾಕ್​ಡ್ರಿಲ್ ನಡೀತು. ಸಿವಿಲ್ ಡಿಫೆನ್ಸ್ ಮುಖ್ಯ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಬ್ಲಾಸ್ಟ್ ಮಾಡಿಸುವ ಅಣಕು ಪ್ರದರ್ಶನ ಮಾಡಲಾಯ್ತು.. ಬಳಿಕ ಲ್ಯಾಡರ್ ಬಳಸಿ ಜನರನ್ನ ರಕ್ಷಣೆ ಮಾಡೋದು ಹೇಗೆ ಅನ್ನೋದನ್ನ ಅಣುಕು ಪ್ರದರ್ಶನದಲ್ಲಿ ತೋರಿಸಿಕೊಟ್ರು. ಖುದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಸೇರಿದಂತೆ ಹಲವರು ರಕ್ಷಣಾ ತಾಲೀಮನ್ನು ವೀಕ್ಷಣೆ ಮಾಡಿದ್ರು.
ಇದನ್ನೂ ಓದಿ: ಪಾಕಿಸ್ತಾನದ ಪರಮ ಪಾಪಿಗಳಿಗೆ ಈಗ ಕಣ್ಣೀರು.. ನರಕ ತೋರಿಸಿದ ಭಾರತದ ವೈಮಾನಿಕ ದಾಳಿ!
/newsfirstlive-kannada/media/post_attachments/wp-content/uploads/2025/05/mock-drill-4.jpg)
ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಶತ್ರು ದಾಳಿ ಸಮಯದಲ್ಲಿ ಹೇಗೆ ಸನ್ನದ್ದರಾಗ್ಬೇಕು ಅನ್ನೋ ಬಗ್ಗೆ ಮಾಕ್ ಡ್ರಿಲ್ ಮಾಡಲಾಯ್ತು. ಮರಳು ಮೂಟೆ ಮೂಲಕ ಮೂರು ಚೌಕಿಗಳ ನಿರ್ಮಾಣ ಮಾಡಿ ಮಾಕ್ ಡ್ರಿಲ್ ನಡೆಸಿದ್ರು. ಒಟ್ಟಾರೆ, ‘ಆಪರೇಷನ್ ಅಭ್ಯಾಸ್' ಹೆಸರಿನಲ್ಲಿ ದೇಶಾದ್ಯಂತ ಮಾಕ್ ಡ್ರಿಲ್ ನಡೆಸಿ ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ಸಾರಲಾಗಿದೆ.
ಇದನ್ನೂ ಓದಿ: ಆಪರೇಷನ್​ ಸಿಂಧೂರ 2.0ಗೆ ಭಾರತ ಪ್ಲಾನ್.. ದೊಡ್ಡ ಸುಳಿವು ಕೊಟ್ಟ 6 ಬೆಳವಣಿಗೆಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us