ರಾಜ್ಯದ 3 ಸ್ಥಳಗಳಲ್ಲಿ ಮಾಕ್ ಡ್ರಿಲ್ ಕನ್ಫರ್ಮ್​.. ಬೆಂಗಳೂರಿನಲ್ಲಿ ಎಲ್ಲಿ ನಡೆಯುತ್ತೆ ಯುದ್ಧ ಕವಾಯತು..?

author-image
Veena Gangani
Updated On
ರಾಜ್ಯದ 3 ಸ್ಥಳಗಳಲ್ಲಿ ಮಾಕ್ ಡ್ರಿಲ್ ಕನ್ಫರ್ಮ್​.. ಬೆಂಗಳೂರಿನಲ್ಲಿ ಎಲ್ಲಿ ನಡೆಯುತ್ತೆ ಯುದ್ಧ ಕವಾಯತು..?
Advertisment
  • ಕೇಂದ್ರಾಡಳಿತ ಸೇರಿ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಆದೇಶ
  • NCC, NSS ವಿದ್ಯಾರ್ಥಿಗಳು ಮಾಕ್​ ಡ್ರಿಲ್​ನಲ್ಲಿ ಭಾಗವಹಿಸುವಂತೆ ಸೂಚನೆ
  • ದೇಶಾದ್ಯಂತ ರಕ್ಷಣಾ ಮಾಕ್​ ಡ್ರಿಲ್​​ ಮಾಡಲು ಕೇಂದ್ರ ಗೃಹ ಇಲಾಖೆ ಆದೇಶ

ಭಾರತ ಹಾಗೂ ಪಾಕಿಸ್ತಾನದ​ ನಡುವೆ ಯುದ್ಧದ ಸಾಧ್ಯತೆ ಹಿನ್ನೆಲೆ ದೇಶದ ಪ್ರಮುಖ ಸೂಕ್ಷ್ಮ ಭಾಗಗಳಲ್ಲಿ ಮಾಕ್​ ಡ್ರಿಲ್​​ ಮಾಡಲು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಇದನ್ನೂ ಓದಿ:ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್.. ಈ ಯುದ್ಧ ಕವಾಯತ್​​ನ ಉದ್ದೇಶ ಏನು..?

ಹೀಗಾಗಿ ನಾಳೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಸೂಚಿಸಿದೆ. ನಾಗರಿಕರ ರಕ್ಷಣೆಗಾಗಿ ನಾಳೆ ದೇಶಾದ್ಯಂತ ಮಾಕ್​ ಡ್ರಿಲ್​ ಅಂದ್ರೆ ಅಣಕು ಪ್ರದರ್ಶನ ನಡೆಸಲು ಸೂಚಿಸಿದೆ. ಎಲ್ಲಾ ರಾಜ್ಯಗಳಲ್ಲಿ ವಾಯು ದಾಳಿಯ ಸೈರನ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ.

publive-image

ಗೃಹ ರಕ್ಷಕ ದಳ, NCC, NSS ವಿದ್ಯಾರ್ಥಿಗಳು ಮಾಕ್​ ಡ್ರಿಲ್​ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ. ಇನ್ನು, ಬೆಂಗಳೂರು ನಗರ ಎರಡು ಪ್ರದೇಶಗಳು ಹಾಗೂ ಮಲ್ಲೇಶ್ವರಂ ಮತ್ತು ರಾಯಚೂರಿನಲ್ಲಿ ಮಾಕ್​ಡ್ರಿಲ್​ ನಡೆಯಲಿದೆ. ಕರ್ನಾಟಕದ ಈ 3 ಪ್ರದೇಶಗಳಲ್ಲಿ ಮಾತ್ರ ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ. ದೇಶದ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಮೂಲವೇ ಬೆಂಗಳೂರು. ಹೀಗಾಗಿ ಬೆಂಗಳೂರು ಮತ್ತು ರಾಯಚೂರಿನಲ್ಲಿ ಮಾಕ್ ಡ್ರಿಲ್ ಮಾಡಲು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment