/newsfirstlive-kannada/media/post_attachments/wp-content/uploads/2025/04/Amith-Sha-On-Pakistan.jpg)
ನವದೆಹಲಿ: ಪಹಲ್ಗಾಮ್ ಪ್ರತೀಕಾರದ ಹಿನ್ನೆಲೆ ಭಾರತ, ಪಾಕಿಸ್ತಾನದ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದೆ. ಯುದ್ಧದ ಭೀತಿಯ ನಡುವೆ ಮೇ 7 ಅಂದ್ರೆ ಇದೇ ಬುಧವಾರದಂದು ಅಣಕು ಕವಾಯತು (mock drills) ನಡೆಸುವಂತೆ ದೇಶದ ಹಲವು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಮೇ 7ರಂದು ಅಣಕು ಕವಾಯತುಗಳನ್ನು ನಡೆಸುವಂತೆ ದೇಶದ ಹಲವು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ. ಅದರಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಅಣಕು ಕವಾಯತು (mock drills) ಹೇಗೆ?
ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳೋದು ಹೇಗೆ? ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡಬೇಕು. ದೇಶದ ಪ್ರಮುಖ ಸ್ಥಾವರಗಳನ್ನ ಮರೆಮಾಚುವಿಕೆಗೆ ಅವಕಾಶ ನೀಡಬೇಕು. ಸ್ಥಳಾಂತರಿಸುವ ಯೋಜನೆಯ ನವೀಕರಣ ಮತ್ತು ಅದರ ಪೂರ್ವಾಭ್ಯಾಸ ಮಾಡಬೇಕು.
ವಾಯು ದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ ಹಾಗೂ ಅಣಕು ಪ್ರದರ್ಶನಕ್ಕೆ ಕ್ರಮಗಳನ್ನು ಒದಗಿಸುವುದು ಇದಾಗಿದೆ.
/newsfirstlive-kannada/media/post_attachments/wp-content/uploads/2023/10/Indian-Army.jpg)
54 ವರ್ಷದ ಬಳಿಕ ಮಾಕ್ ಡ್ರಿಲ್!
1971ರ ನಂತರ ಅಂದ್ರೆ 54 ವರ್ಷದ ಬಳಿಕ ದೇಶದಲ್ಲಿ ರಕ್ಷಣಾ ಮಾಕ್ ಡ್ರಿಲ್ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಿರೋದೇ ವಿಶೇಷವಾಗಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದಿಂದ ಉತ್ತರ ಭಾರತದ ರಾಜ್ಯಗಳಿಗೆ ಈ ಸೂಚನೆ ನೀಡಲಾಗಿದೆ.
1971ರಲ್ಲಿ ಭಾರತ, ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಈ ರಕ್ಷಣಾ ಮಾಕ್ ಡ್ರಿಲ್ ನಡೆಸಲಾಗಿತ್ತು. ಆದಾದ ಬಳಿಕ ಎಂದೂ ಕೂಡ ದೇಶದಲ್ಲಿ ರಕ್ಷಣಾ ಮಾಕ್ ಡ್ರಿಲ್ ನಡೆಸಿಲ್ಲ. ಕಾರ್ಗಿಲ್ ಯುದ್ಧದ ವೇಳೆಯೂ ಮಾಕ್ ಡ್ರಿಲ್ ನಡೆಸಿರಲಿಲ್ಲ.
ಪಹಲ್ಗಾಮ್ ನರಮೇಧದ ಬಳಿಕ ಭಾರತದ ಪ್ರತೀಕಾರದ ದಾಳಿಯ ಬಳಿಕ ಪಾಕ್ ಕೂಡ ಪ್ರತಿದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ರಕ್ಷಣಾ ಮಾಕ್ ಡ್ರಿಲ್‌ಗೆ ಕೇಂದ್ರದಿಂದ ಸೂಚನೆ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2025/05/Indian-Army-conducts-military-drill.jpg)
ಮಾಕ್ ಡ್ರಿಲ್ ಕಾರಣವೇನು?
ಗೃಹ ಇಲಾಖೆಯಿಂದ ಮಾಕ್ ಡ್ರಿಲ್ ಆದೇಶದ ಹಿಂದೆ ಪೂರ್ವ ತಯಾರಿ ಇದೆ. ನಿನ್ನೆ ರಾತ್ರಿ ಮೊದಲ ಬಾರಿಗೆ ಪಂಜಾಬ್‌ನ ಫಿರೋಜಪೂರ್ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸೇನೆ ಡ್ರಿಲ್ ಮಾಡಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದ ಬೆನ್ನಲ್ಲೆ ಮೇ 7ರಂದು ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಡ್ರಿಲ್ ಮಾಡಲು ತೀರ್ಮಾನಿಸಲಾಗಿದೆ.
1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಹೀಗಾಗಿ ಪಂಜಾಬ್ ಜನರಿಗೆ ಮಾಕ್ ಡ್ರಿಲ್ ಬಗ್ಗೆ ಸ್ವಲ್ಪ ಅರಿವಿದೆ. ಜನರಿಗೆ ಮೊದಲು ರಕ್ಷಣೆಯ ಬಗ್ಗೆ ಮಾಹಿತಿ ತಲುಪಿಸೋ ಕೆಲಸ ಮಾಡಲಾಗುತ್ತದೆ. ಇದರಿಂದ ಜನರಿಗೆ ಆತಂಕ ಆಗೋದಿಲ್ಲ. ಹೀಗಾಗಿ ರಕ್ಷಣಾ ಮಾಕ್ ಡ್ರಿಲ್‌ಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us