ಬೆಂಗಳೂರಲ್ಲಿ ಸೈರನ್ ಮೊಳಗಿಸಿದ ಡಿಫೆನ್ಸ್ ಸಿಬ್ಬಂದಿ.. ನಾಳೆ ನಗರದ 2 ಕಡೆ ಮಾಕ್ ಡ್ರಿಲ್‌; ಎಲ್ಲಿ?

author-image
admin
Updated On
ಬೆಂಗಳೂರಲ್ಲಿ ಸೈರನ್ ಮೊಳಗಿಸಿದ ಡಿಫೆನ್ಸ್ ಸಿಬ್ಬಂದಿ.. ನಾಳೆ ನಗರದ 2 ಕಡೆ ಮಾಕ್ ಡ್ರಿಲ್‌; ಎಲ್ಲಿ?
Advertisment
  • ನಾಳೆ ಬೆಂಗಳೂರಿನ ಎರಡು ಕಡೆ ಮಾಕ್ ಡ್ರಿಲ್ ನಡೆಸಲು ಸಿದ್ಧತೆ
  • ಸಿವಿಲ್ ಡಿಫೆನ್ಸ್‌ ಅಧಿಕಾರಿಗಳಿಂದ ಸೈರನ್ ಮೊಳಗಿಸಿ ಪರಿಶೀಲನೆ
  • ನಾಳೆ ವಾಯುದಾಳಿ ವೇಳೆ ಜನರ ರಕ್ಷಣೆಯ ಬಗ್ಗೆ ಮಾಕ್ ಡ್ರಿಲ್

ಪಹಲ್ಗಾಮ್‌ ದಾಳಿಯ ಪ್ರತೀಕಾರದ ಹಿನ್ನೆಲೆಯಲ್ಲಿ ನಾಳೆ ದೇಶಾದ್ಯಂತ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ನಾಳೆ ದೇಶದ 259 ಕಡೆ 3 ಹಂತಗಳಲ್ಲಿ ರಕ್ಷಣಾ ಮಾಕ್ ಡ್ರಿಲ್‌ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಸಿವಿಲ್ ಡಿಫೆನ್ಸ್‌ ಅಧಿಕಾರಿಗಳು ಸೈರನ್ ಮೊಳಗಿಸಿ, ವಾಯುದಾಳಿ ವೇಳೆ ಜನರ ರಕ್ಷಣೆಯ ಬಗ್ಗೆ ಮಾಕ್ ಡ್ರಿಲ್ ಕೈಗೊಂಡಿದ್ದಾರೆ.

ನಾಳೆ ಬೆಂಗಳೂರಿನ ಎರಡು ಕಡೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಹಲಸೂರು ಕೆರೆಯ ಪಕ್ಕದಲ್ಲಿರುವ ಸಿವಿಲ್ ಡಿಫೆನ್ಸ್ ಕಚೇರಿಯ ಆವರಣ ಮತ್ತು ಬನ್ನೇರುಘಟ್ಟ ರಸ್ತೆಯ ಮುಂಡುಕೂರ್‌ನಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ.
ಸಿವಿಲ್ ಡಿಫೆನ್ಸ್ ಕಚೇರಿಯ ಆವರಣದಲ್ಲಿ ಇಂದು ಡಿಫೆನ್ಸ್ ಸಿಬ್ಬಂದಿ ಮಾಕ್ ಡ್ರಿಲ್‌ಗೆ ಸಿದ್ಧತೆ ನಡೆಸಿದ್ದಾರೆ. ಪ್ರಾಯೋಗಿಕವಾಗಿ ಸಿಬ್ಬಂದಿ ಸೈರನ್ ಮೊಳಗಿಸಿದ್ದಾರೆ.

publive-image

ನಾಳಿನ ರಕ್ಷಣಾ ಮಾಕ್ ಡ್ರಿಲ್​ಗೆ ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಹಲಸೂರು ಕೆರೆ ಪಕ್ಕದಲ್ಲಿರುವ ಸಿವಿಲ್ ಡಿಫೆನ್ಸ್ ಕಚೇರಿಯಲ್ಲಿರುವ ಆವರಣದಲ್ಲಿ ಸಿಬ್ಬಂದಿ ಪ್ರಾಯೋಗಿಕವಾಗಿ ಸೈರನ್ ಮೊಳಗಿಸಿದ್ದಾರೆ.

ಇದನ್ನೂ ಓದಿ: ಮೂರು ರೀತಿಯಲ್ಲಿ ಸೈರನ್ ಕೇಳಿಸುತ್ತೆ.. ಹೇಗಿರಲಿದೆ ಯುದ್ಧದ ಮಾಕ್ ಡ್ರಿಲ್? ಸಂಪೂರ್ಣ ಮಾಹಿತಿ ಇಲ್ಲಿದೆ! 

ಬೆಂಗಳೂರಲ್ಲಿ ಮಾಕ್ ಡ್ರಿಲ್ ನಡೆಸುವ ಕುರಿತು ಬೆಂಗಳೂರು ನಗರ & ಗ್ರಾಮಾಂತರ ಡಿಸಿಗಳು ಹಾಗೂ ಅಧಿಕಾರಿಗಳು ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ನಾಳಿನ ಮಾಕ್ ಡ್ರಿಲ್‌ಗೆ ಹಿರಿಯ ಅಧಿಕಾರಿಗಳಿಂದ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment