Advertisment

ವಿಶ್ವದ ಮೊದಲ ‘Miss AI’ ಸೌಂದರ್ಯ ಸ್ಪರ್ಧೆ, ಗೆದ್ದ ಸುಂದರಿಗೆ ಬಂಪರ್ ಲಾಟರಿ..!

author-image
Ganesh
Updated On
ವಿಶ್ವದ ಮೊದಲ ‘Miss AI’ ಸೌಂದರ್ಯ ಸ್ಪರ್ಧೆ, ಗೆದ್ದ ಸುಂದರಿಗೆ ಬಂಪರ್ ಲಾಟರಿ..!
Advertisment
  • ಎಲ್ಲಿಗೆ ಬಂತು ಕೃತಕ ಬುದ್ಧಿಮತ್ತೆಯ ಅಪ್ಪಿಕೊಳ್ಳುವ ಪ್ರಕ್ರಿಯೆ?
  • ವಿಶ್ವ AI ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವರಿಗೆ ಎಷ್ಟು ಹಣ ಸಿಗುತ್ತೆ?
  • ಸೌಂದರ್ಯ ಸ್ಪರ್ಧೆಗೆ ನಿಯಮ ಏನು ಹೇಳುತ್ತದೆ? ಏನು ಮಾಡಬೇಕು?

ಕ್ರಮೇಣ ಈ ಕೃತಕ ಬುದ್ಧಿಮತ್ತೆ (Artificial Intelligence) ನಮ್ಮ ದೈನಂದಿನ ಜೀವನದ ಭಾಗವಾಗುತ್ತಿದೆ. AI ಎಂಬ ಮಾಯಾವಿಯ ಸೃಷ್ಟಿ ಬೆನ್ನಲ್ಲೇ ಒಂದಷ್ಟು ಭಯ, ಆತಂಕ, ದುಗುಢ, ಕಳವಳ ಶುರುವಾಗಿತ್ತು. ಇಂಥ ವಿಷಾದಗಳ ನಡುವೆಯೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್​ ಅನ್ನು ನಿಧಾನವಾಗಿ ಅಪ್ಪಿಕೊಳ್ಳುತ್ತಿದ್ದೇವೆ. ಮುಂದೊಂದು ದಿನ ಅದು ಎಲ್ಲಿವರೆಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಲೇಟೆಸ್ಟ್ ವಿಚಾರ ಏನೆಂದರೆ AIಗಳ ಬ್ಯೂಟಿ ಸ್ಪರ್ಧೆ ಕೂಡ ಶುರುವಾಗಿದೆ.

Advertisment

ಇದನ್ನೂ ಓದಿ:ಬಾಗಿಲು ಮುಚ್ಚಿದ್ದ ಮುನೆಯಲ್ಲಿ.. ಆರು ಯುವಕರು, ಮೂವರು ಯುವತಿಯರು.. ಏನಾಯ್ತು ಅಂದರೆ..!

publive-image

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ! ‘Miss AI’ ಸ್ಪರ್ಧೆ ಆಯೋಜನೆಗೊಂಡಿದ್ದು, ನೀವು ಕೂಡ ಎಐ ರಚನಾಕಾರರಾಗಿದ್ದರೆ ಭಾಗವಹಿಸಲು ಸದಾವಕಾಶವಾಗಿದೆ. ವಿಶ್ವ AI ಕ್ರಿಯೇಟರ್ ಅವಾರ್ಡ್ಸ್ (WAICA) ಸ್ಪರ್ಧೆಯನ್ನು ಆಯೋಜನೆ ಮಾಡಿದೆ. ಕೃತಕ ಬುದ್ಧಿಮತ್ತೆಗಳ ಮೊದಲ ಸೌಂದರ್ಯ ಸ್ಪರ್ಧೆ ಇದಾಗಿದ್ದು, ಕೃತಕ ಬುದ್ಧಿಮತ್ತೆಯ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಬಹುದಾಗಿದೆ.

ಇದನ್ನೂ ಓದಿ:ಕೊಹ್ಲಿ ಪಟ್ಟದ ಮೇಲೆ ನಾಲ್ವರ ಕಣ್ಣು; ರನ್ ಮಷಿನ್ ಬೆನ್ನು ಬಿದ್ದ ಭಾರತದ ತ್ರಿಮೂರ್ತಿಗಳು..!

Advertisment

publive-image

ಗೆದ್ದರೆ ಎಷ್ಟು ರೂಪಾಯಿ ಬಹುಮಾನ..?
ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತ AIಗೆ ಬಂಪರ್ ಬಹುಮಾನ ನೀಡೋದಾಗಿ WAICA ಘೋಷಣೆ ಮಾಡಿದೆ. ಬಹುಮಾನದ ಒಟ್ಟು ಮೊತ್ತ 20 ಸಾವಿರ ಡಾಲರ್ ಆಗಿದೆ. ಅಂದರೆ 16.7 ಲಕ್ಷ ರೂಪಾಯಿ ವಿನ್ ಆಗುವ AIಗೆ ಸಿಗಲಿದೆ. ಜೊತೆಗೆ ಸ್ಪರ್ಧೆಯಲ್ಲಿ ಭಾಗಿಯಾಗೋರಿಗೆ ಕೆಲವು ಷರತ್ತುಗಳನ್ನು ಕೂಡ ವಿಧಿಸಲಾಗಿದೆ.

ಇದನ್ನೂ ಓದಿ: ಮದುವೆಗೂ ಮೊದಲೇ ಅಪ್ಪ.. ಹೈದರಾಬಾದ್ ತಂಡದ ನಾಯಕ ಕಮ್ಮಿನ್ಸ್ ಲವ್ ಸ್ಟೋರಿ ಮಜವಾಗಿದೆ..!

publive-image

ಸ್ಪರ್ಧೆಯಲ್ಲಿ ಭಾಗಿಯಾಗುವ ರಚನಾಕಾರರು ಸೋಶಿಯಲ್ ಮೀಡಿಯಾದಲ್ಲಿ ಭಾಗಿಯಾಗಬೇಕು. ಅವರಿಗೆ 18 ವರ್ಷಗಳಾಗಿರಬೇಕು. ಮಹಿಳಾ AI ಮಾದರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಬೀರುವಂತಿರಬೇಕು.

Advertisment

publive-image

ಜೊತೆಗೆ ಮೂರು ಮಾನದಂಡಗಳ ಮೇಲೆ ಗೆಲುವು ಯಾವುದೆಂದು ಘೋಷಣೆ ಮಾಡಲಾಗುತ್ತದೆ. ಒಂದು ಸೌಂದರ್ಯ, ಎರಡನೇಯದು ಸಮತೋಲನ ಹಾಗೂ ಕೇಳುವ ಪ್ರಶ್ನೆಗಳಿಗೆ ನೀಡುವ ಉತ್ತರ. ಸದ್ಯ WAICA ಮಹಿಳಾ AI ಸೌಂದರ್ಯ ಸ್ಪರ್ಧೆಗೆ ಅವಕಾಶ ನೀಡಿದೆ. ಯಾವುತ್ತು ಸಮಾರಂಭ ನಡೆಯಲಿದೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಏಪ್ರಿಲ್ 14 ರಿಂದಲೇ ಮಿಸ್ AI ಸೌಂದರ್ಯ ಸ್ಪರ್ಧೆ ನಡೆಯಲಿದೆ.

ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್​ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment