/newsfirstlive-kannada/media/post_attachments/wp-content/uploads/2023/10/maleesa-mooney.webp)
ಮೂವತ್ತೊಂದು ವರ್ಷದ ಮಾಡೆಲ್ವೊಬ್ಬಳ ಮೃತದೇಹ ಫ್ರಿಡ್ಜ್ನಲ್ಲಿ ಸಿಕ್ಕ ಘಟನೆ ಲಾಸ್ ಏಂಜಲೀಸ್ನಲ್ಲಿ ಬೆಳಕಿಗೆ ಬಂದಿದೆ. ಮಲೀಸಾ ಮೂಬಿಯ ಶವ ಸೆಪ್ಟೆಂಬರ್ 12ರಂದು ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.
ಮಾಡೆಲ್ ಮಲೀಸಾ ಮೂಬಿಯ ಎರಡು ತಿಂಗಳ ಗರ್ಭಿಣಿಯಾಗಿದ್ದು, ಸಾವಿಗೂ ಮುನ್ನ ಗಲಾಟೆ ನಡೆದು ಕೊನೆಗೆ ಸಾವಿಡಗೀಡಾಗಿದ್ದಾಳೆ ಎಂದು ಶವಪರೀಕ್ಷೆಯ ವರದಿ ಬಹಿರಂಗಪಡಿಸಿದೆ. ಇದಲ್ಲದೆ, ಆಕೆಯ ಮೃತದೇಹದ ಮೇಲೆ ಹಲವು ಗಾಯಗಳು ಕಾಣಿಸಿವೆ. ಮುಖ, ಬೆನ್ನು, ಎಡಗೈ ಮೇಲಿನ ಗಾಯಗಳ ಆಕೆಯ ಮೃತದೇಹದ ಮೇಲೆ ಕಾಣಿಸಿವೆ.
ಸೆಪ್ಟೆಂಬರ್ 12ರಂದು ಮಲೀಸಾ ಮೃತದೇಹ ಫ್ರಿಡ್ಜ್ನಲ್ಲಿ ಕಂಡುಬಂದಿದೆ. ಬಾಯಿಯನ್ನು ಕಟ್ಟಿಕೊಂಡು, ಕೈ, ಕಾಲುಗಳನ್ನು ಬಿಗಿಯಾಗಿ ಕಟ್ಟಿದ ರೀತಿಯಲ್ಲಿ ಕಾಣಿಸಿದೆ. ಇನ್ನು ಈ ಸಾವಿಗೆ ಕಾರಣ ಯಾರು ಎಂದು ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ