newsfirstkannada.com

ಭೀಕರ ಬಸ್​​ ದುರಂತ; 36 ಮಂದಿ ಸಾವು; ಮೃತ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಮೋದಿ

Share :

Published November 15, 2023 at 3:39pm

Update November 15, 2023 at 3:40pm

  ಜಮ್ಮು-ಕಾಶ್ಮೀರದಲ್ಲಿ ಭೀಕರ ಬಸ್​​ ಅಪಘಾತ

  ಭೀಕರ ಬಸ್​​ ದುರಂತದಲ್ಲಿ 36 ಮಂದಿ ಸಾವು

  ಮೃತ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಬಸ್​​ ದುರಂತದಲ್ಲಿ 36 ಮಂದಿ ಅಸುನೀಗಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೃತ ಕುಟುಂಬಗಳಿಗೆ ಸಾಂತ್ವನ ನೀಡಿದ್ದಾರೆ. ಜತೆಗೆ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಬಸ್​​ನಲ್ಲಿ 55 ಮಂದಿ ಪ್ರಯಾಣ ಮಾಡುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್​​ ಬಟೋಟ್​​-ಕಿಶ್ಟ್​​ವರ್​​​ ನ್ಯಾಷನಲ್​​ ಹೈವೇ ಸಮೀಪದ ಕಂದವೊಂದಕ್ಕೆ ಉರುಳಿದೆ. ಈ ಭೀಕರ ಬಸ್​ ದುರಂತದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 19 ಮಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಸದ್ಯ ಜಮ್ಮು-ಕಾಶ್ಮೀರ ಪೊಲೀಸ್ರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಸಂಬಂಧ ಪೊಲೀಸ್​ ಕೇಸ್​ ಕೂಡ ದಾಖಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಬಸ್​​ ದುರಂತ; 36 ಮಂದಿ ಸಾವು; ಮೃತ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಮೋದಿ

https://newsfirstlive.com/wp-content/uploads/2023/11/Modi_09.jpg

Load More