newsfirstkannada.com

ಮೋದಿ 9 ವರ್ಷದಲ್ಲಿ ಒಂದು ದಿನವೂ ರಜೆ ಹಾಕಿಲ್ಲ; RTI ಹಾಕಿದವರಿಗೆ PMO ಉತ್ತರ

Share :

Published September 4, 2023 at 4:11pm

  ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ 9 ವರ್ಷ

  ಇದುವರೆಗೂ ಒಂದೇ ಒಂದು ದಿನವೂ ರಜೆ ಹಾಕದ ಮೋದಿ!

  RTI ಅರ್ಜಿ ಹಾಕಿದವರಿಗೆ ಪ್ರಧಾನಿ ಕಾರ್ಯಾಲಯ ಉತ್ತರ..!

ನವದೆಹಲಿ: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ 9 ವರ್ಷಗಳು ಕಳೆದಿವೆ. ಅಂದಿನಿಂದಲೂ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಕಾರ್ಯಪ್ರವೃತ್ತರಾಗಿದ್ದಾರೆ. ಇವರ ಕಾರ್ಯಕ್ಕೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಿರುವಾಗ ಭಾರತದ ಪ್ರಧಾನಿ ಆಗಿ 9 ವರ್ಷ ಕಳೆದರೂ ಒಂದೇ ಒಂದು ದಿನವೂ ನರೇಂದ್ರ ಮೋದಿ ರಜೆ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.

ಹೌದು, ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರಫುಲ್ ಪಿ ಸರ್ದಾ ಎಂಬವರು ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಕುರಿತಾಗಿ ತಿಳಿದುಕೊಳ್ಳಲು ಆರ್​ಟಿಐ ಹಾಕಿದ್ದರು. ಆರ್​ಟಿಐ ಅರ್ಜಿಯಲ್ಲಿ ಎರಡು ಪ್ರಶ್ನೆಗಳು ಕೇಳಿದ್ದರು. ಈ ಪೈಕಿ ಮೋದಿ ಪ್ರಧಾನಿಯಾದ ಬಳಿಕ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದಾರೆ ಎಂಬ ಪ್ರಶ್ನೆ ಇತ್ತು. ಇದಕ್ಕೆ ಉತ್ತರ ನೀಡಿರೋ ಪ್ರಧಾನಿ ಕಾರ್ಯಾಲಯ, ನರೇಂದ್ರ ಮೋದಿ 9 ವರ್ಷಗಳಿಂದ ಯಾವುದೇ ರಜೆ ತೆಗೆದುಕೊಂಡಿಲ್ಲ ಎಂದಿದೆ.

ನರೇಂದ್ರ ಮೋದಿ ಅವರದ್ದು ಇದುವರೆಗೂ ಎಷ್ಟು ದಿನಗಳ ಹಾಜರಾತಿ ಇದೆ, ಎಷ್ಟು ಮೀಟಿಂಗ್ಸ್​ ಅಟೆಂಡ್​ ಮಾಡಿದ್ದಾರೆ ಎನ್ನುವುದು 2ನೇ ಪ್ರಶ್ನೆ ಆಗಿತ್ತು. ಇದಕ್ಕೆ PMO ವೆಬ್‌ಸೈಟ್ ಲಿಂಕ್ ಸಮೇತ ನೀಡಿ ಉತ್ತರಿಸಿರೋ ಪ್ರಧಾನಿ ಕಾರ್ಯಾಲಯ, ಮೋದಿ 3,000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ 9 ವರ್ಷದಲ್ಲಿ ಒಂದು ದಿನವೂ ರಜೆ ಹಾಕಿಲ್ಲ; RTI ಹಾಕಿದವರಿಗೆ PMO ಉತ್ತರ

https://newsfirstlive.com/wp-content/uploads/2023/08/narendra-modi-2.jpg

Load More