newsfirstkannada.com

ಬಿಜೆಪಿಗೆ ನುಂಗಲಾರದ ತುತ್ತಾದ ಇಬ್ಬರು ನಾಯಕರು.. ಹೊಸ ಸರ್ಕಾರ ರಚನೆ ನಡುವೆ ದೊಡ್ಡ ಸವಾಲುಗಳು ಇಲ್ಲಿವೆ..!

Share :

Published June 6, 2024 at 8:23am

Update June 6, 2024 at 8:25am

    ಎನ್​ಡಿಎ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ

    3ನೇ ಬಾರಿಗೆ ಪ್ರಧಾನಿ ಆಗಬೇಕಾದ್ರೆ ಇವೆ ನೂರೆಂಟ್ ಸವಾಲುಗಳು

    ಎಕ್ಸ್​ ಅಕೌಂಟ್​ನಲ್ಲಿ ನರೇಂದ್ರ ಮೋದಿ ಜನರಿಗೆ ಹೇಳಿದ್ದು ಏನು?

ಲೋಕ ಕದನದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಕಾರಣ ಎನ್​ಡಿಎ ಮಿತ್ರಪಕ್ಷಗಳ ಜೊತೆ ಸೇರಿ ಅಧಿಕಾರಕ್ಕೇರಲು ಮೋದಿ ಸಜ್ಜಾಗಿದ್ದಾರೆ. ಮೋದಿ 3ನೇ ಬಾರಿ ಪ್ರಧಾನಿಯಾಗೋದು ಕನ್ಫರ್ಮ್​ ಆಗಿದ್ದು, ಎನ್​ಡಿಎ ನಾಯಕರಾಗಿ ಆಯ್ಕೆ ಆಗಿದ್ದಾರೆ. ಜೂನ್​ 8ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೊಸ ಸರ್ಕಾರ ರಚನೆ ನಡುವೆ ಬಿಜೆಪಿಗೆ ಹೊಸ ಸವಾಲುಗಳು ಎದುರಾಗಿವೆ.

ಜೂ.8 ರಂದು 3ನೇ ಅವಧಿಗೆ ಪ್ರಧಾನಿಯಾಗಿ ಪದಗ್ರಹಣಕ್ಕೆ ಸಿದ್ಧತೆ

ಲೋಕಸಭೆಯ ಗದ್ದುಗೆ ಗುದ್ದಾಟದಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದ ಗೆಲವು ಸಿಗದಿದ್ದರೂ, ಮೋದಿ 3ನೇ ಬಾರಿಗೆ ಪ್ರಧಾನಿ ಆಗೋದು ಪಕ್ಕಾ ಆಗಿದೆ. ನಂಬರ್​ ಗೇಮ್​ ಆಟದಲ್ಲಿ ಎನ್​ಡಿಎ ಮೈಲುಗೈ ಸಾಧಿಸಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಎನ್​ಡಿಎ ಮೈತ್ರಿ ಕೂಟದ ನಾಯಕರಾಗಿ ಮೋದಿಯನ್ನು ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮೋದಿ ಜೂನ್​ 8ರಂದು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಒನ್​ಲೈನ್​ ನಿರ್ಣಯ ಕೈಗೊಂಡ ಎನ್​ಡಿಎ ನಾಯಕರು

ದೆಹಲಿಯಲ್ಲಿ ನಡೆದ ಎನ್​​ಡಿಎ ನಾಯಕ ಸಭೆಯಲ್ಲಿ ಸರ್ಕಾರ ರಚನೆ ಬಗ್ಗೆ ಚರ್ಚಿಸಲಾಯಿತು. ಮೋದಿ ಅಧ್ಯಕ್ಷತೆಯಲ್ಲಿ ನಡೆದ ಎನ್​ಡಿಎ ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಜೆಡಿಎಸ್​ನ ಹೆಚ್​ಡಿ ಕುಮಾರಸ್ವಾಮಿ. ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಎನ್‌ಡಿಎ ನಾಯಕರು ಔಪಚಾರಿಕವಾಗಿ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದ್ದು, ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ಪತ್ರ ನೀಡಿವೆ ಎಂದು ತಿಳಿದು ಬಂದಿದೆ. ಹಾಗೂ ಬಡವರು, ಮಹಿಳೆಯರು, ಯುವಕರು, ರೈತರು ಮತ್ತು ಸಮಾಜದ ವಂಚಿತ ವರ್ಗಗಳ ಸೇವೆಗೆ ಮೈತ್ರಿ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುವ ನಿರ್ಣಯವನ್ನು ಎನ್‌ಡಿಎ ನಾಯಕರು ಅಂಗೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟದ ಸಭೆ ಆಯ್ತು. ಶಿವಸೇನೆ ಪಕ್ಷವು ಬಿಜೆಪಿ ಜೊತೆಗೆ ಇರುತ್ತೆ. ಆದಷ್ಟು ಬೇಗ ಪ್ರಮಾಣವಚನ ಸ್ವೀಕಾರ ಮಾಡ್ತಾರೆ. ಭಾರತದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗ್ತಾರೆ. ಎಲ್ಲ ಎನ್​ಡಿಎ ಪಕ್ಷಗಳು ಅಲ್ಲಿದ್ದವು. ಇದೊಂದು ಐತಿಹಾಸಿಕ ದಿನವಾಗಿತ್ತು. ಬಹುಮತಕ್ಕಿಂತ ಹೆಚ್ಚು ಸ್ಥಾನ ಎನ್​ಡಿಎ ಬಳಿ ಇದೆ.

ಏಕನಾಥ್​ ಶಿಂಧೆ, ಮಹಾರಾಷ್ಟ್ರ ಸಿಎಂ

ಇನ್ನು ಸಭೆ ಬಳಿಕ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ನಮ್ಮದು ಮೌಲ್ಯಯುತವಾದ ಮೈತ್ರಿ. ವಿಕ್ಷಿತ್​ ಭಾರತವನ್ನು ನಿರ್ಮಿಸಲು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸ್ಥಾನಗಳಿಗೆ ಎನ್​ಡಿಎ ಮಿತ್ರಪಕ್ಷಗಳ ಪಟ್ಟು

ಬಿಜೆಪಿಗೆ ಏಕಾಂಗಿಯಾಗಿ ಬಹುಮತ ಬಾರದ ಹಿನ್ನೆಲೆ ಈಗ ಎನ್‌ಡಿಎ ಮೈತ್ರಿಕೂಟದ ಇತರೆ ಪಕ್ಷಗಳನ್ನು ಅವಲಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿಜೆಪಿಗೆ ಕಳೆದ 2 ಸಲ ಸರ್ಕಾರ ರಚಿಸಿದಾಗ ಎದುರಾಗದ ಸವಾಲುಗಳು ಈ ಬಾರಿ ಎದುರಾಗಿವೆ. ಸರ್ಕಾರ ರಚನೆಗೂ ಮುನ್ನ ಬಿಜೆಪಿಯ ಮಿತ್ರಪಕ್ಷಗಳು ಷರತ್ತು, ಬೇಡಿಕೆಗಳನ್ನು ಇಟ್ಟಿದ್ದು, ನಮಗೆ ಇಷ್ಟಿಷ್ಟೇ ಸಚಿವ ಸ್ಥಾನಗಳು ಬೇಕು ಎಂದು ಪಟ್ಟು ಹಿಡಿದಿವ್ಯಂತೆ.

ಎನ್​ಡಿಎ ಮಿತ್ರಪಕ್ಷಗಳ ಡಿಮ್ಯಾಂಡ್

  • ಟಿಡಿಪಿ- ಸ್ಪೀಕರ್‌ ಸ್ಥಾನ, 5 ಪ್ರಮುಖ ಕ್ಯಾಬಿನೆಟ್‌ ಸಚಿವ ಸ್ಥಾನಕ್ಕೆ ಬೇಡಿಕೆ
  • ಜೆಡಿಯು- ಮೂರರಿಂದ ನಾಲ್ಕು ಕ್ಯಾಬಿನೆಟ್‌ ಸ್ಥಾನಗಳಿಗೆ ಬಿಗಿಪಟ್ಟು
  • ಶಿಂಧೆ ಶಿವಸೇನೆ- ಒಂದು ಕ್ಯಾಬಿನೆಟ್‌, ಒಂದು ರಾಜ್ಯ ಖಾತೆಗೆ ಬೇಡಿಕೆ
  • ಜೆಡಿಎಸ್​- ಕೃಷಿ ಖಾತೆ ಮೇಲೆ ಕಣ್ಣಿಟ್ಟು 1 ಕ್ಯಾಬಿನೆಟ್‌ ಸ್ಥಾನಕ್ಕೆ ಡಿಮ್ಯಾಂಡ್
  • ಆರ್‌ಎಲ್‌ಡಿ, ಜನಸೇನಾ – ತಲಾ ಒಂದೊಂದು ಕ್ಯಾಬಿನೆಟ್‌ ಖಾತೆಗೆ ಪಟ್ಟು

ಉತ್ತರದಲ್ಲಿ ನಿತೀಶ್​ ಆದ್ರೆ ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅದೇನೆ ಇರಲಿ.. ಬಿಜೆಪಿಗೆ ಸ್ಪಷ್ಟ ಬಹುಮತ ಬರದಿದ್ದರೂ, ಮಿತ್ರ ಪಕ್ಷಗಳ ಸಹಾಯದಿಂದ ಇತಿಹಾಸ ನಿರ್ಮಿಸಲು ಮೋದಿ ಸಜ್ಜಾಗಿದ್ದಾರೆ. ಜೂನ್​ 8ರಂದು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಮೈತ್ರಿ ಸರ್ಕಾರದಲ್ಲಿ ಮೋದಿ ಮತ್ತು ಅಮಿತ್‌ ಶಾ ಹೊಸ ಸವಾಲನ್ನು ಹೇಗೆ ನಿಭಾಯಿಸಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗೆ ನುಂಗಲಾರದ ತುತ್ತಾದ ಇಬ್ಬರು ನಾಯಕರು.. ಹೊಸ ಸರ್ಕಾರ ರಚನೆ ನಡುವೆ ದೊಡ್ಡ ಸವಾಲುಗಳು ಇಲ್ಲಿವೆ..!

https://newsfirstlive.com/wp-content/uploads/2024/06/MODI_SHAH_1.jpg

Load More