newsfirstkannada.com

ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಕಾರ -ಫಲಿಸಲಿಲ್ಲ ಸಿದ್ದರಾಮಯ್ಯ ಸರ್ಕಾರದ ಮಾತುಕತೆ

Share :

Published June 23, 2023 at 1:34pm

Update June 23, 2023 at 2:22pm

  ಕೇಂದ್ರ ಸಚಿವರ ಭೇಟಿ ಬಳಿಕ ಮುನಿಯಪ್ಪ ಬೇಸರ

  ಕೇಂದ್ರ ಅಕ್ಕಿ ಕೊಡದಿದ್ರೆ ಬಡವರಿಗೆ 10 ಕೆಜಿ ಸಿಗಲ್ವಾ..?

  ಕೆ.ಹೆಚ್​.ಮುನಿಯಪ್ಪರಿಂದ ಬೇರೆ ಪ್ಲಾನ್ ಬಗ್ಗೆ ಮಾಹಿತಿ

ಬೆಂಗಳೂರು: ಅಕ್ಕಿ ಕೊಡಲು ಆಗೋದಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ ಅಂತಾ ಆಹಾರ ಮತ್ತು ನಾಗರಿಕ ಸಚಿವ ಕೆ.ಹೆಚ್.ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸುವ ಸಂಬಂಧ ಸಚಿವರು, ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಕಳೆದ ಎರಡ್ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಮುನಿಯಪ್ಪ ಕೇಂದ್ರ ಸರ್ಕಾರದ ಮಂತ್ರಿಗಳ ಭೇಟಿಗೆ ಕಸರತ್ತು ನಡೆಸಿದ್ದರು.

ಮುನಿಯಪ್ಪ ಬೇಸರ

ಕೊನೆಗೂ ಇವತ್ತು ಕೇಂದ್ರ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಇವತ್ತು ಭೇಟಿ ಮಾಡಿದ್ದರು. ಭೇಟಿ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಮುನಿಯಪ್ಪ, ಕೇಂದ್ರದ ನಾಯಕರು ಅಕ್ಕಿ ಕೊಡಲ್ಲ ಎಂದಿದ್ದಾರೆ. ಆದರೆ ನಾವು ನೀವು ನಿಗದಿ ಮಾಡಿರೋ ದರ ನೀಡಲು ಸಿದ್ಧರಿದ್ದೇವೆ ಎಂದೇವು. ಆದರೂ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ ಅಂತಾ ಆಕ್ರೋಶ ಹೊರಹಾಕಿದರು.

ಸ್ಟಾಕ್ ಇದ್ದರೂ ಮಂತ್ರಿಗಳು ಅಕ್ಕಿ ನೀಡಲು ಒಪ್ಪಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಗೊತ್ತಾಗುತ್ತಿದೆ. FCI ನಲ್ಲಿ ಸ್ಟಾಕ್ ಇರೋ ಬಗ್ಗೆ ಮಾಹಿತಿ ನೀಡಿದರೂ ಕೊಡಲ್ಲ ಅಂದಿದ್ದಾರೆ. ನಾನು ಇವತ್ತು ಆಶಾ ಭಾವನೆಯಲ್ಲಿದ್ದೆ. ಆದರೆ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ಬೇಸರವಾಗಿದೆ. ನಾವು ಬೇರೆ ಆಯ್ಕೆಯನ್ನು ನೋಡಬೇಕಾಗಿದೆ. ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕಾಗಿದೆ. ನಾವು ಮಾತು ಕೊಟ್ಟಿದ್ದೇವೆ, ಅದರಂತೆ ಅಕ್ಕಿ ಕೊಡ್ತೇವೆ. ಸ್ವಲ್ಪ ತಡವಾಗಬಹುದು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಕಾರ -ಫಲಿಸಲಿಲ್ಲ ಸಿದ್ದರಾಮಯ್ಯ ಸರ್ಕಾರದ ಮಾತುಕತೆ

https://newsfirstlive.com/wp-content/uploads/2023/06/SIDDARAMAIAH-11-1.jpg

Load More