newsfirstkannada.com

ಕಠಿಣ ವ್ರತದಲ್ಲಿ ಮೋದಿ! ನಾಳೆ 84 ಸೆಕೆಂಡ್‌ಗಳ ವಿಶೇಷ ಮುಹೂರ್ತದಲ್ಲಿ ನಡೆಯಲಿದೆ ರಾಮಲಲ್ಲಾ ಪ್ರಾಣ ಪ್ರತಿಷ್ಠೆ

Share :

Published January 21, 2024 at 6:37am

  ನಾಳೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಉತ್ಸವ

  ಇಂದೇ ಆಯೋಧ್ಯೆಗೆ ಆಗಮಿಸಲಿರೋ ಪ್ರಧಾನಿ ಮೋದಿ

  ಭರತ ಭೂಮಿಯಲ್ಲಿ ನಡೆಯುವ ಕಾರ್ಯಕ್ರಮಗಳು ಹೀಗಿವೆ

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಕೆಲವೇ ಕೆಲವು ಗಂಟೆಗಳು ಬಾಕಿ ಇದೆ. ಆ ಸಮಯ ಕಳೆದರೆ, ಶತ ಶತಮಾನಗಳಿಂದ ಕಾಯುತ್ತಿದ್ದ ರಾಮ ಭಕ್ತರ ಕನವರಿಕೆಗೆ ಫಲ ಸಿಗಲಿದೆ. 500 ವರ್ಷಗಳ ಕನಸು. ಕೋಟಿ ಕೋಟಿ ರಾಮಭಕ್ತರ ತಪಸ್ಸು ಫಲಿಸಲಿದೆ. ​84 ಸೆಕೆಂಡ್‌ಗಳ ವಿಶೇಷ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಆಗಲಿದೆ. ಅಷ್ಟಕ್ಕೂ ಏನಿದು 84 ಸೆಕೆಂಡ್​.? ಆ ವಿಶೇಷ ಮುಹೂರ್ತದಲ್ಲೇನಿದೆ..? ನಾಳೆ ಭರತ ಭೂಮಿಯಲ್ಲಿ ನಡಿಯೋ ಕಾರ್ಯಕ್ರಮ ಏನೇನೂ..? ಆ ಬಗ್ಗೆ ಡಿಟೇಲ್ಸ್​​ ಇಲ್ಲಿದೆ.

ಅಯೋಧ್ಯೆ. ರಾಮಜನ್ಮ ಭೂಮಿ. ಪ್ರಭು ಶ್ರೀರಾಮನ ಬೆಳಕು ದೇಶದ ಉದ್ದಗಲಕ್ಕೂ ಚಾಚಿದ್ದು, ಹಬ್ಬದ ವಾತಾವರಣವನ್ನೇ ಹರಡಿದೆ. ಕೋಟಿ ಕೋಟಿ ಭಕ್ತರು ಬಾಲರಾಮನಿಗೆ ಪ್ರಾಣತುಂಬುವ ಶಾಸ್ತ್ರವನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತಿದ್ದಾರೆ. ಅಸಂಖ್ಯಾತ ಹಿಂದೂಗಳು ಶ್ರೀರಾಮನ ಆ ಪುಣ್ಯ ಕ್ಷಣಕ್ಕೆ ಎದುರು ನೋಡ್ತಿದ್ದಾರೆ.

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರು

ಹೌದು, ನಾಳೆ ಕೋಟಿ ಕೋಟಿ ರಾಮ ಭಕ್ತರ ಕನಸು, ತಪಸ್ಸು ನನಸಾಗಲಿದೆ. ಶತಮಾನಗಳ ಕಾಯುವಿಕೆ ಅಂತ್ಯಗೊಳ್ಳುವ ದಿನ ಹತ್ತಿರ ಬರ್ತಾ ಇದೆ. ಜನವರಿ 22 ಅಂದ್ರೆ ನಾಳೆ ಬಾಲರಾಮನಿಗೆ ಪ್ರಾಣತುಂಬುವ ಶಾಸ್ತ್ರ ನಡೆಯಲಿದೆ.

84 ಸೆಕೆಂಡ್‌ಗಳ ಮುಹೂರ್ತದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ!

ನಾಳೆ ಭವ್ಯ, ದಿವ್ಯ, ನವ್ಯ ಮಂದಿರದಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ. ಕೇವಲ 84 ಸೆಕೆಂಡ್​ಗಳಲ್ಲಿ ಈ ಪೂಜೆ ನಡೆಯಲಿದೆ.. ಅಂದ್ರೆ ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್​ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್​ಗಳ ಮಧ್ಯೆ ಪ್ರಾಣಪ್ರತಿಷ್ಠೆ ಪೂಜೆ ನೆರವೇರಲಿದೆ.

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾರಾಜಿಸುತ್ತಿರೋ ಬಾಲರಾಮನ ಮೂರ್ತಿ ನೋಡಲು ಎರಡು ಕಣ್ಣು ಸಾಲದು ಎಂಬುವಷ್ಟು ಸುಂದರವಾಗಿದೆ. ಹಲವು ವಿಶೇಷತೆಗಳನ್ನೂ ಹೊತ್ತಿರೋ ರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬೀಳುವಂತ ತಂತ್ರಜ್ಞಾನವನ್ನ ಅಳವಡಿಕೆ ಮಾಡಲಾಗಿದೆ.

ವಿದ್ಯುತ್​ ದೀಪಗಳಿಂದ ಕಂಗೊಳಿಸ್ತಿದೆ ರಾಮನೂರು

ಸೋಮವಾರ ಪ್ರಾಣಪ್ರತಿಷ್ಠೆ ಪ್ರಯುಕ್ತ ಧಾರ್ಮಿಕ ವಿಧಿ ವಿಧಾನಗಳು ಭರದಿಂದ ಸಾಗಿವೆ. ಅದರಲ್ಲೂ ರಾಮನೂರಿನ ರಾಜವೈಭವ ಕಣ್ಮನ ಸೆಳೆಯುತ್ತಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದೇಗುಲವನ್ನು ಸಿಂಗರಿಸಲಾಗಿದೆ. ವಿವಿಧ ಬಗೆಯ ಹೂಗಳಿಂದ ಅಯೋಧ್ಯೆ ಝಗಮಗಿಸುತ್ತಿದ್ದು ಸ್ವರ್ಗವೇ ಧರೆಗಳಿದಂತೆ ಭಾಸವಾಗುತ್ತಿದೆ.

ಇವತ್ತೇ ರಾಮನೂರಿಗೆ ಆಗಮಿಸಲಿರೋ ಪ್ರಧಾನಿ ಮೋದಿ

ಇನ್ನು, ಶುಭ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅಯೋಧ್ಯೆಯ ಶ್ರೀರಾಮ ರಾಮಮಂದಿರವನ್ನ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನೆಗೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮುಗಿಸಿ ಬಳಿಕ ಅಲ್ಲಿಂದ ರಾಮ ಮಂದಿರಕ್ಕೆ ತೆರಳಲಿದ್ದಾರೆ. ಮಂದಿರದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಸರಯೂ ನದಿಯಲ್ಲಿ ಮೋದಿ ಸ್ನಾನಕ್ಕಾಗಿಯೇ ವಿಶೇಷ ಚೌಕಿ ನಿರ್ಮಾಣ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಯುಪಿ ಸರ್ಕಾರ ವಿಶೇಷ ಚೌಕಿಯನ್ನು ನಿರ್ಮಾಣ ಮಾಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಕೂಡ ಮೋದಿಗೆ ಸಾಥ್ ನೀಡಲಿದ್ದಾರೆ.

ಈಗಾಗಲೇ 11 ದಿನಗಳ ಅನುಷ್ಠಾನ ಕೈಗೊಂಡಿರುವ ಪ್ರಧಾನಿ, ಕಠಿಣ ವ್ರತ ಆಚರಿಸುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಕಾಲ ವಿಶೇಷ ಮಂತ್ರವನ್ನು ಪಠಿಸುತ್ತಿದ್ದಾರೆ. ಜನವರಿ 12 ರಂದು ಅನುಷ್ಠಾನ ಆರಂಭಿಸಿರುವ ಮೋದಿ ಇವತ್ತು ಅಯೋಧ್ಯೆಯಲ್ಲೇ ಹೆಚ್ಚಿನ ಸಮಯ ಕಳೆಯಲಿದ್ದಾರೆ. ಹಾಗಿದ್ರೆ ನಾಳೆ ಪ್ರಧಾನಿ ದಿನಚರಿ ಹೇಗಿರಲಿದೆ?.

ಪ್ರಧಾನಿ ದಿನಚರಿ

‘ನಾಳೆ ಬೆಳಗ್ಗೆ 10.55ಕ್ಕೆ ಶ್ರೀರಾಮ ಜನ್ಮಭೂಮಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.. ನಂತ್ರ ಮಧ್ಯಾಹ್ನ 12.05ರಿಂದ 12.55ಕ್ಕೆ ಪ್ರಾಣ ಪ್ರತಿಷ್ಠಾ ಕಾರ್ಯದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.. ಬಳಿಕ ಮಧ್ಯಾಹ್ನ 12.55ಕ್ಕೆ ಪೂಜಾ ಸ್ಥಳದಿಂದ ಪ್ರಧಾನಿ ಮೋದಿ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸಲಿದ್ದಾರೆ.. ನಂತ್ರ 1.02ಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿ, 2.10ಕ್ಕೆ ಕುಬೇರ್ ತಿಲಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಶಿವನಿಗೆ ಪೂಜೆ ಸಲ್ಲಿಸಲಿದ್ದಾರೆ.

ಇನ್ನು ನಾಳೆ ಶ್ರೀರಾಮಚಂದ್ರನ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದು, ಆ ದಿನವನ್ನು ದೇಶಾದ್ಯಂತ ದೀಪಾವಳಿಯಂತೆ ಆಚರಿಸ್ಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಮನೆ ಮನೆಯಲ್ಲೂ ರಾಮಜ್ಯೋತಿ ಬೆಳಗುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಭಾರತೀಯರ ಶತಶತಮಾನಗಳ ಕನಸು ಈಗ ನೆರವೇರುತ್ತಿದೆ. ಮತ್ತೊಮ್ಮೆ ಭಾರತದ ಹಿರಿಮೆ, ಗರಿಮೆ, ಧಾರ್ಮಿಕ ಸಿರಿತನದ ಅನಾವರಣ ಅಯೋಧ್ಯೆಯಲ್ಲಿ ಆಗ್ತಿದೆ.. ಬಾಲ ರಾಮನ ವಿಗ್ರಹದ ವಿಸ್ಮಯ ಭಕ್ತರನ್ನ ಮೂಕ ವಿಸ್ಮಿತರನ್ನಾಗಿ ಮಾಡಿದೆ. ಈಗ ಇಡೀ ದೇಶ ರಾಮ..ರಾಮ.. ರಾಮ ಅಂತ ರಾಮಜಪದಲ್ಲೇ ಮುಳುಗಿಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಠಿಣ ವ್ರತದಲ್ಲಿ ಮೋದಿ! ನಾಳೆ 84 ಸೆಕೆಂಡ್‌ಗಳ ವಿಶೇಷ ಮುಹೂರ್ತದಲ್ಲಿ ನಡೆಯಲಿದೆ ರಾಮಲಲ್ಲಾ ಪ್ರಾಣ ಪ್ರತಿಷ್ಠೆ

https://newsfirstlive.com/wp-content/uploads/2024/01/Rammandir-1.jpg

Load More