/newsfirstlive-kannada/media/post_attachments/wp-content/uploads/2024/10/Modi-Laddu.jpg)
ಭಾರತೀಯರ ವಿಶೇಷ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿ ಎಂದಾಗ ಎನಾದರೊಂದು ಸ್ಪೆಷಲ್ ತಿನಿಸುಗಳು ಮಾರುಕಟ್ಟೆಗೆ ಬರುತ್ತದೆ. ಇದೀಗ ಪ್ರಧಾನಿ ಹೆಸರಿನಲ್ಲಿ ದೀಪಾವಳಿ ವಿಶೇಷವಾಗಿ ‘ಮೋದಿ ಲಡ್ಡು’ ಭಾರೀ ಜನಪ್ರಿಯತೆ ಪಡೆದಿದೆ.
ನರೇಂದ್ರ ಮೋದಿಯವರ ಅಭಿಮಾನಿಯಾದ ಬಿಹಾರದ ಸಂಜೀವ್ ಎಂಬವರು ‘ಮೋದಿ ಲಡ್ಡು’ ತಯಾರಿಸಿದ್ದಾರೆ. ಅಂದಹಾಗೆಯೇ ಇದನ್ನು ಮೋದಿ ಪ್ರಧಾನಿಯಾದ ವರ್ಷವೇ ಗೌರವಾರ್ಥವಾಗಿ ತಯಾರಿಸಿದ್ದೆವು ಎಂದು ಹೇಳಿದ್ದಾರೆ. ಮೋದಿ ಲಡ್ಡನ್ನು ಕೇಸರಿ, ದೇಸಿ ತುಪ್ಪ, ಪಿಸ್ತಾ, ಬಾದಾಮಿ, ರೋಸ್ ವಾಟರ್ ಮತ್ತು ಜ್ಯೂಸ್ ಬಳಸಿ ತಯಾರಿಸಲಾಗುತ್ತಂತೆ.
ಇದನ್ನೂ ಓದಿ: Selfie: ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಹೋಗಿ ಓರ್ವ ಸಾ*ವು.. ಇಬ್ಬರು ಪ್ರಾಣಾಪಾಯದಿಂದ ಪಾರು
ಮೋದಿಯವರ ಮೂರನೇ ಅವಧಿ ಪ್ರಧಾನಿಯಾದ ನಂತರ ಈ ಲಡ್ಡು ಭಾರೀ ಜನಪ್ರಿಯತೆ ಗಳಿಸಿದೆ. ಸದ್ಯ ಭಾರತದಾದ್ಯಂತ ಡಿಮ್ಯಾಂಡ್ ಕೂಡ ಹೆಚ್ಚಾಗಿದೆಯಂತೆ. ನನ್ನನ್ನೂ ಕೂಡ ಇದೇ ಹೆಸರಿನಲ್ಲಿ ಕರೆಯಲಾಗುತ್ತಿದೆ ಎಂದು ಸಂಜೀವ್ ಹೇಳಿದ್ದಾರೆ.
[caption id="attachment_93686" align="aligncenter" width="800"] ಸಂಜೀವ್[/caption]
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಆಫರ್.. ಗ್ಯಾಜೆಟ್ಗಳ ಮೇಲೆ ಶೇ.75%ರಷ್ಟು ರಿಯಾಯಿತಿ
ಬಳಿಕ ಮಾತನಾಡಿದ ಸಂಜೀವ್, ಮೋದಿ ಲಡ್ಡುವಿನ ಅಭಿಮಾನಿಗಳು ಭಾರತದಾದ್ಯಂತ ಹರಡಿಕೊಂಡಿದ್ದಾರೆ. ಶುದ್ಧತೆ ಮತ್ತು ರುಚಿಗೆ ಇದು ಜನಪ್ರಿಯತೆ ಪಡೆದಿದೆ. ನಾನು ವಾರಣಾಸಿಯಿಂದ ಬಂದವನಾಗಿರುವುದರಿಂದ ಮೋದಿ ಲಡ್ಡುವಿನಲ್ಲಿ ಗಂಗಾಜಲದ ಬಳಕೆಯು ಇದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ