newsfirstkannada.com

ಲೋಕಸಭಾ ಚುನಾವಣೆಗೆ ಮಾಸ್ಟರ್​​ ಪ್ಲಾನ್​​; ಕರ್ನಾಟಕದ 15 ವಿಮಾನ ನಿಲ್ದಾಣಗಳ ಯೋಜನೆಗೆ ಮೋದಿ ಚಾಲನೆ!

Share :

Published March 10, 2024 at 10:25pm

    ಸತೀಶ್ ಜಾರಕಿಹೊಳಿಗೆ ಆಹ್ವಾನ ನೀಡಿರುವ ಬಿಜೆಪಿ

    15 ವಿಮಾನ ನಿಲ್ದಾಣಗಳ ಯೋಜನೆಗೆ ಮೋದಿ ಚಾಲನೆ

    2 ವರ್ಷಗಳಲ್ಲಿ ಟರ್ಮಿನಲ್ ಪೂರ್ಣಗೊಳ್ಳುವ ವಿಶ್ವಾಸ

ಬೆಳಗಾವಿ: ಯಾವಾಗ ಬೇಕಾದ್ರೂ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಧಾನಿ ಮೋದಿ ದೇಶಾದ್ಯಂತ ನೂರಾರು ಕಾಮಗಾರಿಗಳಿಗೆ ಏಕಕಾಲದಲ್ಲಿ ಚಾಲನೆ ನೀಡುತ್ತಿದ್ದಾರೆ. ಇಂದು ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ಮೋದಿ ಮಿಂಚಿನಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಲಕ್ಷಾಂತರ ಕೋಟಿ ಮೊತ್ತದ ಯೋಜನೆಗಳನ್ನು ದೇಶದ ಜನರಿಗೆ ನೀಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿಯೇ ರಾಜ್ಯಕ್ಕೂ ಗಿಫ್ಟ್​ ನೀಡಿದ್ದಾರೆ.

ಬೆಳಗಾವಿ, ಹುಬ್ಬಳ್ಳಿ ಹೊಸ ಟರ್ಮಿನಲ್ ಕಾಮಗಾರಿಗೆ ಮೋದಿ ಚಾಲನೆ

ಇಂದು ಪ್ರಧಾನಿ ಮೋದಿ ದೇಶಾದ್ಯಂತ 15 ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ಕಟ್ಟಡಗಳ ಕಾಮಗಾರಿಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಪೈಕಿ ಬೆಳಗಾವಿ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಹೊಸ ಟರ್ಮಿನಲ್​ಗೂ ಚಾಲನೆ ನೀಡಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ 357 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿಮಾನ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಆಗಮಿಸಿದ್ರು. ಇನ್ನು 340 ಕೋಟಿ ರೂಪಾಯಿ ವೆಚ್ಚದಲ್ಲಿ ವಾಣಿಜ್ಯ ನಗರಿ ಹುಬ್ಬಳಿ ವಿಮಾನ ನಿಲ್ದಾಣದಲ್ಲೂ ಹೊಸ ಟರ್ಮಿನಲ್​ಗೆ ವರ್ಚುವಲ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಿಸಲು ಚಾಲನೆ ನೀಡಿರುವ ವಾಣಿಜ್ಯ ನಗರಿ ಹುಬ್ಬಳಿ ವಿಮಾನ ನಿಲ್ದಾಣ ಕಾಮಗಾರಿ ಇನ್ನೆರೆಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್​ಗಿಲ್ಲ ಆಹ್ವಾನ.. ಶಿಷ್ಟಾಚಾರ ಉಲ್ಲಂಘನೆ ಆರೋಪ

ಇನ್ನು ಕಾರ್ಯಕ್ರಮ ಮತ್ತೊಂದು ವಿಚಾರಕ್ಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಗೆ ಆಮಂತ್ರಣ ನೀಡಿದ್ರೂ ಸ್ಥಳೀಯ ಶಾಸಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಆಮಂತ್ರಣ ನೀಡದಿರೋದು ಶಿಷ್ಟಾಚಾರ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿ ಟರ್ಮಿನಲ್

  • 357 ಕೋಟಿ ರೂ. ಅನುದಾನದಲ್ಲಿ 4 ಏರೋ ಬ್ರಿಡ್ಜ್, 8 ಎಕ್ಸಲೇಟರ್
  • ಲಿಫ್ಟ್​​ಗಳ ಅಳವಡಿಕೆ, 9 ವಿಮಾನ, 500 ಕಾರು, 200 ಬೈಕ್ ನಿಲ್ಲುವ ವ್ಯವಸ್ಥೆ
  • ರಾತ್ರಿ ಕೂಡ ವಿಮಾನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ
  • ಚಹ, ಟೀ ಮಾರಾಟ, ಸ್ಥಳೀಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶ

ಹುಬ್ಬಳ್ಳಿ ಟರ್ಮಿನಲ್

  • ₹340 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್
  • ಹೊಸ ಟರ್ಮಿನಲ್​ನಲ್ಲಿ ನಾಲ್ಕು ಏರೋಬ್ರಿಡ್ಜ್, ತಲಾ 8 ಎಕ್ಸಲೇಟರ್, ಲಿಫ್ಟ್
  • 2 ವರ್ಷಗಳ ನಂತರ ಇಲ್ಲಿ 4 ರಿಂದ 10 ವಿಮಾನಗಳ ಪಾರ್ಕಿಂಗ್ ವ್ಯವಸ್ಥೆ
  • ಏಕಕಾಲಕ್ಕೆ ಹೊರ ಹೋಗುವ, ಒಳಬರುವ 2,400 ಪ್ರಯಾಣಿಕರಿಗೆ ಅವಕಾಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಗೆ ಮಾಸ್ಟರ್​​ ಪ್ಲಾನ್​​; ಕರ್ನಾಟಕದ 15 ವಿಮಾನ ನಿಲ್ದಾಣಗಳ ಯೋಜನೆಗೆ ಮೋದಿ ಚಾಲನೆ!

https://newsfirstlive.com/wp-content/uploads/2024/03/pm-mdoi.jpg

Load More