ಪ್ರಧಾನಿ ಮೋದಿ ಸರ್ಕಾರದ ‘ಮಧ್ಯಂತರ’ ಲೆಕ್ಕಾಚಾರ!
ಮೋದಿ 2.O ಸರ್ಕಾರದ ಕೊನೆಯ ಬಜೆಟ್ ಮಂಡನೆ
59 ನಿಮಿಷ 15 ಸೆಕೆಂಡ್ ನಿರರ್ಗಳ ಬಜೆಟ್ ಮಂಡನೆ
‘ಲೋಕ’ ಕದನದ ಹಾದಿಗೆ ಬಿಜೆಪಿ ಮಧ್ಯಂತರ ಬಜೆಟ್‌ನ ಭರವಸೆಗಳ ಬೆಳಕು ಚೆಲ್ಲಿದೆ.. ಇವತ್ತು ಮೋದಿ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಮಂಡನೆಯಾಗಿದೆ.. ಚಿಕ್ಕದಾಗಿ ಚೊಕ್ಕದಾಗಿ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ್ದಾರೆ.. ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ ಇಲ್ಲದಿದ್ರೂ ಬೇರೆ ವಲಯಗಳಿಗೆ ‘ಮಧ್ಯಂತರ’ ಮಹತ್ವ ನೀಡಿರೋದು ಗಮನಾರ್ಹ.
ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ.. ಹೊಸ ಯೋಜನೆಗಳು ಜಾರಿಯಾಗದೇ ಇದ್ರೂ ಹಳೇ ಯೋಜನೆಗಳಿಗೆ ಹೊಸ ಜೀವ ತುಂಬುವ ಕೆಲಸವಾಗಿದೆ.. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-2025ರ ಮಧ್ಯಂತರ ಬಜೆಟ್‌ನ ಅಚ್ಚುಕಟ್ಟಾಗಿ ಮಂಡಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ!
6ನೇ ಬಾರಿಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್!
ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರೋ ಬಿಜೆಪಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಇವತ್ತು ಮಂಡನೆಯಾಗಿದೆ.. ಲೋಕಸಭಾ ಚುನಾವಣೆ ಹೊತ್ತಲ್ಲಿ ನಮೋ ಲೆಕ್ಕಾಚಾರದ ಮೇಲೆ ದೇಶದ ಜನರ ನಿರೀಕ್ಷೆ ಹೆಚ್ಚಾಗಿತ್ತು.. ಇದೀಗ ಚುನಾವಣೆಗೂ ಮುನ್ನ ಮೂರು ತಿಂಗಳಮಟ್ಟಿಗೆ ಮಧ್ಯಂತರ ಬಜೆಟ್‌ನ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.. ನೀಲಿ ಹಾಗೂ ಆಫ್ ವೈಟ್ ಬಣ್ಣದ ಸೀರೆಯುಟ್ಟು ಕೈಯ್ಯಲ್ಲಿ ಟ್ಯಾಬ್ ಹಿಡಿದು ಬಂದ ಸೀತಾರಾಮನ್ 6ನೇ ಬಾರಿಗೆ ದಾಖಲೆಯ ಬಜೆಟ್ ಮಂಡನೆ ಮಾಡಿದ್ದಾರೆ.. ಸುಮಾರು 59 ನಿಮಿಷ 15 ಸೆಕೆಂಡ್‌ಗಳ ಕಾಲ ನಿರ್ಗಳವಾಗಿ ಬಜೆಟ್ ಮಂಡಿಸಿದ್ರು.
ಕೇಂದ್ರ ಬಜೆಟ್‌ನ ಟ್ಯಾಕ್ಸ್ ಸ್ಲ್ಯಾಬ್‌ನಲ್ಲಿ ನೋ ಚೇಂಜ್!
ಕೇಂದ್ರ ಸರ್ಕಾರದ ಬಜೆಟ್ ಮೇಲೆ ಆದಾಯ ತೆರಿಗೆ ಪಾವತಿದಾರರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ರು.. ಟ್ಯಾಕ್ಸ್ ಸ್ಲ್ಯಾಬ್‌ನಲ್ಲಿ ಏನಾದ್ರೂ ಮಹತ್ವದ ಬದಲಾವಣೆ ಆಗುತ್ತಾ ಅಂತ ಕಾದು ಕೂತಿದ್ರು.. ಆದ್ರೆ, ಮೋದಿ ಸರ್ಕಾರ ಆದಾಯ ತೆರಿಗೆ ಇಲಾಖೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತೆರಿಗೆ ಪದ್ಧತಿ ಯಥಾಸ್ಥಿತಿ
7 ಲಕ್ಷದವರೆಗೆ ಆದಾಯ ಇರೋರಿಗೆ ಯಾವುದೇ ತೆರಿಗೆ ಇರೋದಿಲ್ಲ ಎನ್ನುವ ಮೂಲಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.. ಹಾಲಿ ಇರುವ ತೆರಿಗೆ ಪದ್ಧತಿಯೇ ಮುಂದುವರಿಯಲಿದ್ದು, ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ರೇಲ್ವೇ ಇಲಾಖೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಒತ್ತು
ದೇಶದ ಪ್ರಮುಖ ಸಾರಿಗೆ ವ್ಯವಸ್ಥೆ ಅಂದ್ರೆ ಅದು ರೇಲ್ವೇ.. ಹೀಗಾಗಿ ರೇಲ್ವೇ ಇಲಾಖೆಯನ್ನ ಮತ್ತಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ.. ಬಜೆಟ್‌ನಲ್ಲಿ ರೇಲ್ವೇ ಇಲಾಖೆಯನ್ನ ಡೆವಲೆಪ್‌ಮೆಂಟ್ ಮಾಡುವ ಕೆಲ ಕಾರ್ಯಕ್ರಮಗಳನ್ನ ಜಾರಿ ಮಾಡಿದೆ.
ರೇಲ್ವೆ ಅಭಿವೃದ್ಧಿ!
ರೇಲ್ವೇ ಇಲಾಖೆಯ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್‌ನಲ್ಲಿ 3 ಪ್ರಮುಖ ರೇಲ್ವೆ ಕಾರಿಡಾರ್ ಕಾರ್ಯಕ್ರಮಗಳನ್ನ ಘೋಷಣೆ ಮಾಡಲಾಗಿದೆ.. ಶಕ್ತಿ-ಖನಿಜ ಮತ್ತು ಸಿಮೆಂಟ್ ಕಾರಿಡಾರ್, ಹೈ-ಟ್ರಾಫಿಕ್ ಡೆನ್ಸಿಟಿ ಕಾರಿಡಾರ್, ಪೋರ್ಟ್-ಕನೆಕ್ಟಿವಿಟಿ ಕಾರಿಡಾರ್ ಎಂಬ ಮೂರು ಕಾರ್ಯಕ್ರಮಗಳನ್ನ ಜಾರಿ ಮಾಡಲಾಗಿದ್ದು, ಈ ಕಾರ್ಯಕ್ರಮಗಳಿಂದ ಲಾಜಿಸ್ಟಿಕ್ಸ್ ದಕ್ಷತೆ ಸುಧಾರಣೆ ಆಗಲಿದೆ.. ಜೊತೆಗೆ ರೇಲ್ವೇ ವೆಚ್ಚವು ಕಡಿಮೆ ಮಾಡುವ ಉದ್ದೇಶದಿಂದ ಈ ಮೂರು ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೇ ಈ ಯೋಜನೆಯಿಂದ ಪ್ರಯಾಣಿಕ ರೈಲುಗಳಿಗೂ ಸುರಕ್ಷತೆ ಸಿಗಲಿದೆ.. ಅಲ್ಲದೇ 40 ಸಾವಿರ ರೈಲು ಬೋಗಿಗಳನ್ನ ವಂದೇ ಭಾರತ್‌ನಂತೆ ಮೇಲ್ದರ್ಜೆಗೆ ಏರಿಸಲು ಕೇಂದ್ರ ಮುಂದಾಗಿದೆ.
ಕೃಷಿ ವಲಯಕ್ಕೂ ನಿರ್ಮಲಾ ‘ಮಧ್ಯಂತರ’ ಬಜೆಟ್!
ಹೆಸರೇ ಸೂಚಿಸುವಂತೆ ಇದು ಪೂರ್ಣಾವಧಿ ಬಜೆಟ್ ಆಗಿರದೇ ಮಧ್ಯಂತ ಬಜೆಟ್ ಆಗಿದೆ.. ಹೀಗಾಗಿ ಕೃಷಿ ವಲಯಕ್ಕೂ ಅಂತಹ ನಿರೀಕ್ಷಿತ ಯೋಜನೆಗಳನ್ನ ಘೋಷಣೆ ಮಾಡಲಾಗಿಲ್ಲ. ಆದ್ರೆ, ಕೆಲವು ಮಾರ್ಪಾಡುಗಳನ್ನ ಮಾಡಿದ ಯೋಜನೆಗಲನ್ನ ಘೋಷಿಸಲಾಗಿದೆ.
ಕೃಷಿ ವಲಯಕ್ಕೆ ಕ್ಷೇಮದ ಬಜೆಟ್!
ಎಲ್ಲಾ ಕೃಷಿ, ಜಲವಾಯು ಕ್ಷೇತ್ರಗಳಲ್ಲಿ ವಿಭಿನ್ನ ಪ್ರಯೋಗ ಮಾಡಲು ಒತ್ತು ನೀಡಲು ನಿರ್ಧರಿಸಿದ್ದು, ಬೆಳೆಗಳ ಮೇಲೆ ನ್ಯಾನೋ ಡಿಎಪಿಯ ಪ್ರಯೋಗಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.. ಜೊತೆಗೆ ಹೈನುಗಾರಿಕೆ ಮಾಡುವವರ ನೆರವಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನ ರೂಪಿಸಲಾಗಿದೆ.. ಪಿಎಂ ಕಿಸಾನ್ ಸಂಪದಾ ಯೋಜನೆಯಡಿ 38 ಲಕ್ಷ ರೈತರಿಗೆ ಲಾಭವಾಗಲಿದ್ದು, ಫಸಲ್ ಬೀಮಾ ಯೋಜನೆಯಡಿ 4.8 ಕೃಷಿಕರಿಗೆ ವಿಮೆ ಹಣ ನೀಡೋದಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ.. ಡೈರಿ ಕೃಷಿಕರ ಅಭಿವೃದ್ಧಿಗಾಗಿ ಹೊಸ ಕಾರ್ಯಕ್ರಮ ತರಲಾಗುತ್ತೆ. ಮತ್ಸ್ಯ ಸಂಪದಾ ಯೋಜನೆಯಿಂದಾಗಿ 55 ಲಕ್ಷ ಉದ್ಯೋಗ ಸೃಷ್ಟಿಯಾಗಲಿದ್ದು, 2013-14ರಿಂದ ಸೀಫುಡ್ ರಫ್ತಿನಲ್ಲೂ ದುಪ್ಪಟ್ಟು ಹೆಚ್ಚಳವಾಗಿದೆ. ಅಲ್ಲದೇ ದೇಶದಲ್ಲಿ 5 ಹೊಸ ಸಂಯೋಜಿತ ಅಕ್ವಾ ಪಾರ್ಕ್ ಸ್ಥಾಪನೆ ಮಾಡೋದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇನ್ನೂ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ವಸತಿ ಯೋಜನೆಗೂ ಉತ್ತೇಜನ ನೀಡಲಾಗಿದೆ..
ವಸತಿ ಯೋಜನೆಗೆ ಒತ್ತು!
ಮುಂದಿನ 5 ವರ್ಷಗಳಲ್ಲಿ 2 ಕೋಟಿ ಹೆಚ್ಚುವರಿ ಮನೆ ನಿರ್ಮಾಣದ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ.. ಕೇಂದ್ರದಿಂದ ರೂಫ್ಟಾಪ್ ಸೋಲಾರ್ ಎನರ್ಜಿ ಯೋಜನೆ ಘೋಷಣೆಯಾಗಿದ್ದು, ಸುಮಾರು 1 ಕೋಟಿ ಮನೆಗಳಿಗೆ 300 ಸೋಲಾರ್ ಯೂನಿಟ್ ಉಚಿತ ವಿದ್ಯುತ್ ನೀಡಲು ಘೋಷಿಸಲಾಗಿದೆ.
ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಹಣ ಮೀಸಲು?
2024-25ರ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 6.2 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ.. ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಗೆ 2.55 ಲಕ್ಷ ಕೋಟಿ ರೂಪಾಯಿ, ರೇಲ್ವೇ ಇಲಾಖೆಗೆ 2.55 ಲಕ್ಷ ಕೋಟಿ ರೂಪಾಯಿ, ಗ್ರಾಹಕ, ಆಹಾರ ಇಲಾಖೆಗೆ 1.13 ಲಕ್ಷ ಕೋಟಿ ರೂಪಾಯಿ, ಗೃಹ ಇಲಾಖೆಗೆ 2.03 ಲಕ್ಷ ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ 1.77 ಲಕ್ಷ ಕೋಟಿ ರೂಪಾಯೀ ಮೀಸಲಿಡಲಾಗಿದೆ.
ಒಟ್ಟಾರೆ, ಮೋದಿ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳ ಘೋಷಣೆಯಾಗಿಲ್ಲ.. ಜೊತೆಗೆ ತೆರಿಗೆದಾರರಿಗೂ ಯಾವುದೇ ಸಿಹಿ ಸುದ್ದಿ ಸಿಕ್ಕಿಲ್ಲ.. ಆದ್ರೆ, ಇದು ಕೇವಲ ಮಧ್ಯಂತರ ಬಜೆಟ್ ಆಗಿದ್ದು, ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬಂದು ಭರಪೂರ ಭರವಸೆ ನೀಡೋದೆ ಮೋದಿ ಸರ್ಕಾರದ ಗುರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ