newsfirstkannada.com

ರಾಮನಿಗಾಗಿ ಮೋದಿ 11 ದಿನ ಉಪವಾಸ; ಕುಡಿಯೋದು ಎಳನೀರು; ಮಲಗೋದು ನೆಲದ ಮೇಲೆ!

Share :

Published January 21, 2024 at 7:16pm

    ರಾಮನೂರು ಅಯೋಧ್ಯೆಯಲ್ಲಿ ಶ್ರೀ ರಾಮ ಜಪ ಶುರು!

    ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ‘ಮುಖ್ಯ ಯಜಮಾನ’

    ಶುಭ ಮುಹೂರ್ತದಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಇವತ್ತು ಸಂಜೆ ಅಸ್ತಮಿಸಿರುವ ರವಿ ನಾಳೆ ರಾಮೋದಯವಾಗಿ ಅಯೋಧ್ಯೆಯನ್ನು ಬೆಳಗಲಿದ್ದಾನೆ. ಪ್ರಧಾನಿ ಮೋದಿ ರಾಮೋತ್ಸವದ ಭವ್ಯಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿಯಾಗಿ ನೆರವೇರಿಸಲು ವೇದಿಕೆ ಸಜ್ಜಾಗಿದೆ.

ಬಾಲರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ‘ಮುಖ್ಯ ಯಜಮಾನ’

ನಾಳೆ ಪ್ರಧಾನಿ ಮೋದಿ ಅಯೋಧ್ಯೆಯ ಪವಿತ್ರಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಖ್ಯ ಯಜಮಾನರಾಗಿ ಭಾಗಿಯಾಗಲಿದ್ದಾರೆ. ಪೂಜಾ ಕೈಂಕರ್ಯದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಆಯ್ಕೆಯಾದ 15 ಯಜಮಾನರು ಭಾಗಿಯಾಗಲಿದ್ದಾರೆ. ಹಲವು ಗಣ್ಯರು, ಧಾರ್ಮಿಕ ಮುಖಂಡರು, ಗುರುಗಳು, ವಿದ್ವಾಂಸರ ಸಮ್ಮುಖದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಕಾರ್ಯಕ್ರಮವನ್ನು ಮುಂದೆ ನಿಂತು ನಡೆಸಲಿರುವ ಪ್ರಧಾನಿ ಮೋದಿ ಕಠಿಣ ವ್ರತಾಚರಣೆಯಲ್ಲಿದ್ದಾರೆ. ಕಳೆದ 11 ದಿನಗಳಿಂದ ಆಹಾರ ಸೇವಿಸದೇ ಎಳನೀರು ಮಾತ್ರ ಸೇವಿಸುತ್ತಾ ಕಠಿಣ ಉಪವಾಸ, ಹಾಗೂ ಅನುಷ್ಠಾನ, ಶ್ರೀರಾಮನ ಜಪತಪದಲ್ಲಿ ತಲ್ಲೀನರಾಗಿದ್ದಾರೆ. ಭಗವಾನ್ ರಾಮನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ದೇಗುಲಗಳ ಪ್ರವಾಸ ಮಾಡಿದ್ದಾರೆ. ನಾಳೆ ಬೆಳಗ್ಗೆ ದೆಹಲಿಯಿಂದ ಆಗಮಿಸಲಿರುವ ಮೋದಿ 5 ಗಂಟೆಗಳ ಕಾಲ ರಾಮೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿಗಾಗಿ ನಿರ್ಮಾಣವಾಗಿದೆ ತೇಲುವ ವಿಶೇಷ ಕೊಠಡಿ

ಇನ್ನು ಪ್ರಧಾನಿ ಮೋದಿ ಶುಭ ಮುಹೂರ್ತದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ.. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮುಗಿಸಿ ಬಳಿಕ ಅಲ್ಲಿಂದ ರಾಮಮಂದಿರಕ್ಕೆ ತೆರಳಲಿದ್ದಾರೆ. ಮಂದಿರದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಸರಯೂ ನದಿಯಲ್ಲಿ ಮೋದಿ ಸ್ನಾನಕ್ಕಾಗಿಯೇ ವಿಶೇಷವಾದ ತೇಲುವ ಚೌಕಿ ನಿರ್ಮಾಣ ಮಾಡಲಾಗಿದೆ.. ಭದ್ರತೆಯ ದೃಷ್ಟಿಯಿಂದ ಯುಪಿ ಸರ್ಕಾರ ವಿಶೇಷ ಚೌಕಿಯನ್ನು ನಿರ್ಮಾಣ ಮಾಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಕೂಡ ಮೋದಿಗೆ ಸಾಥ್ ನೀಡಲಿದ್ದಾರೆ.. ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಅಯೋಧ್ಯೆ ಟ್ರಸ್ಟ್ ಹಾಗೂ ಹಿರಿಯರ ಜೊತೆ ಚರ್ಚೆ ನಡೆಸಲಿದ್ದಾರೆ.

ಅಯೋಧ್ಯೆ ಭೇಟಿಗೂ ಮುನ್ನ ಇವತ್ತು ಧನುಷ್ಕೋಟಿಗೆ ನಮೋ!

ಇನ್ನು ಇವತ್ತು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಟಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಕೋದಂಡರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.. ಶ್ರೀರಾಮಚಂದ್ರ ಲಂಕೆಯಿಂದ ಸೀತೆಯನ್ನ ಕರೆತರಲು ರಾಮಸೇತು ನಿರ್ಮಾಣ ಮಾಡಿದ್ರು ಎಂಬ ನಂಬಿಕೆ ಇದೆ.. ಹೀಗಾಗಿ ಧನುಷ್ಕೋಟಿಯ ಅರಿಚಲ್​ ಮುನೈ ಪಾಯಿಂಟ್​ಗೆ ಭೇಟಿ ನೀಡಿದ ಮೋದಿ ಸಮುದ್ರ ತೀರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಾರ್ಥನೆ ಬಳಿಕ ಸಮುದ್ರ ತೀರದಲ್ಲಿ ಕುಳಿತು ಕೆಲಕಾಲ ಧ್ಯಾನಸಕ್ತರಾದ ಮೋದಿ ಬಗೆಬಗೆಯ ಪುಷ್ಪಗಳನ್ನಿಟ್ಟು ಸೂರ್ಯನ ಕಡೆ ಮುಖಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.. ದುರ್ಬಿನಿನ ಮೂಲಕ ಸಮುದ್ರವನ್ನ ವೀಕ್ಷಿಸಿದ್ದಾರೆ.

ಒಟ್ಟಿನಲ್ಲಿ ಕಳೆದ 11 ದಿನಗಳಿಂದ ಕಠಿಣ ವ್ರತ, ಅನುಷ್ಠಾನದ ವೇಳೆ ಪ್ರಧಾನ ಮಂತ್ರಿ ಶಿಸ್ತಿನ ದಿನಚರಿ ಪಾಲಿಸಿದ್ದಾರೆ.. ಅದೂ ಅಲ್ಲದೇ ದೇಶದ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಟ್ಟು ರಾಮಾಯಣ ಪಠಣ ಮಾಡಿದ್ದಾರೆ.. ರಾಮನಾಮ ಜಪದಲ್ಲಿ ತಮ್ಮನ್ನು ತಾವು ಮಗ್ನರಾಗಿಸಿಕೊಂಡಿದ್ದು ನಾಳಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಿಗಾಗಿ ಮೋದಿ 11 ದಿನ ಉಪವಾಸ; ಕುಡಿಯೋದು ಎಳನೀರು; ಮಲಗೋದು ನೆಲದ ಮೇಲೆ!

https://newsfirstlive.com/wp-content/uploads/2024/01/mODI-1.jpg

Load More