newsfirstkannada.com

ಬಾಗಲಕೋಟೆ ವೆಂಕಪ್ಪ ಅಂಬಾಜಿಯನ್ನು ಗುಣಗಾನ ಮಾಡಿದ ಮೋದಿ.. ಗೊಂದಲಿ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ

Share :

Published February 25, 2024 at 3:45pm

  ಮನ್ ಕಿ ಬಾತ್ ನಲ್ಲಿ ವೆಂಕಪ್ಪ ಅಂಬಾಜಿಯ ಗುಣಗಾಣ

  81 ವರ್ಷದ ವ್ಯಕ್ತಿಯ ಸೇವೆಯನ್ನು ಹೊಗಳಿದ ಪ್ರಧಾನಿ

  71 ವರ್ಷದಿಂದ ಗೊಂದಲಿ ಪದ ಸೇವೆ ಮಾಡುತ್ತಾ ಬಂದ ವೆಂಕಪ್ಪ ಅಂಬಾಜಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆ ಗೊಂದಲಿ ಪದ ಹಾಡುಗಾರನನ್ನು ಗುಣಗಾನ ಮಾಡಿದ್ದಾರೆ. ಮನ್ ಕಿ ಬಾತ್ ನಲ್ಲಿ ಮೋದಿಯವರು ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಹಾಡಿ ಹೊಗಲಿದ್ದಾರೆ.

ವೆಂಕಪ್ಪ ಅಂಬಾಜಿ ಸುಗತೇಕರ್ ಬಾಗಲಕೋಟೆಯ ನವನನಗರದ ನಿವಾಸಿಯಾಗಿದ್ದು, ಮನ್‌ ಕೀ ಬಾತ್‌ ರೇಡಿಯೊ ಸರಣಿಯ 110ನೇ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ವೆಂಕಪ್ಪ ಅವರನ್ನು ಮೋದಿ ಗುಣಗಾನ ಮಾಡಿದ್ದಾರೆ.

ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಅದರಲ್ಲಿ ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಕೂಡ ಒಬ್ಬರು. ಸಾವಿರಕ್ಕೂ ಅಧಿಕ ಜನಪದ ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಹಾಗೆಯೇ, ಸಾವಿರಾರು ಜನರಿಂದ ಇವರು ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ.

ವೆಂಕಪ್ಪ ಅಂಬಾಜಿ ಸುಗತೇಕರ್

81 ವರ್ಷದ ವೆಂಕಪ್ಪ ಸುಗತೇಕರ್ 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರೆ. ಕಳೆದ 71 ವರ್ಷದಿಂದ ಗೊಂದಲಿ ಪದ ಸೇವೆ ಮಾಡುತ್ತಾ ಬಂದಿದ್ದಾರೆ. ಕರ್ನಾಟಕ ಸರಕಾರದಿಂದ 2022 ರಲ್ಲಿ ಗೊಂದಲಿ ಪದ ಸೇವೆಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ರಾಜ್ಯ ಸರಕಾರದಿಂದ ಈ ಹಿಂದೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ವೆಂಕಪ್ಪ ಸುಗತೇಕರ್ ಪಡೆದಿದ್ದಾರೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಪರರಾಜ್ಯದಲ್ಲೂ ಸಾವಿರಾರು ಕಾರ್ಯಕ್ರಮ ವೆಂಕಪ್ಪ ಸುಗತೇಕರ್ ನೀಡಿದ್ದಾರೆ. ಶಾಲೆಗೆ ಹೋಗದೆ ಕಲಿಯದ ವೆಂಕಪ್ಪ ವಂಶಪಾರಂಪರ್ಯವಾಗಿ ಬಂದ ಗೊಂದಲಿ ಪದವನ್ನು ಸಾಕಷ್ಟು ಜನರಿಗೆ ಕಲಿಸಿಕೊಟ್ಟು ಕಲೆಯನ್ನು ಜೀವಂತ ಇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಗಲಕೋಟೆ ವೆಂಕಪ್ಪ ಅಂಬಾಜಿಯನ್ನು ಗುಣಗಾನ ಮಾಡಿದ ಮೋದಿ.. ಗೊಂದಲಿ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ

https://newsfirstlive.com/wp-content/uploads/2024/02/Venkappa-Ambaji.jpg

Load More