ಗ್ಯಾರಂಟಿ ಯೋಜನೆ ಬಗ್ಗೆ ಮೋದಿ ಟೀಕೆ​.. ಕೆರಳಿ ಕೆಂಡವಾದ ಸಿಎಂ ಸಿದ್ದರಾಮಯ್ಯ

author-image
AS Harshith
Updated On
ಗ್ಯಾರಂಟಿ ಯೋಜನೆ ಬಗ್ಗೆ ಮೋದಿ ಟೀಕೆ​.. ಕೆರಳಿ ಕೆಂಡವಾದ ಸಿಎಂ ಸಿದ್ದರಾಮಯ್ಯ
Advertisment
  • ಜನರ ಮುಂದೆ ಕಾಂಗ್ರೆಸ್ ಬಣ್ಣ ಬಯಲು ಎಂದು ಮೋದಿ ಟೀಕೆ
  • ಪ್ರಧಾನಿ ವಿರುದ್ಧ ಗುಟುರು ಹಾಕಿದ ಸಿಎಂ ಸಿದ್ದರಾಮಯ್ಯ
  • ಸುಳ್ಳು, ವಂಚನೆ ಮತ್ತು ಪ್ರಚಾರ ಮೋದಿ ಸರ್ಕಾರದ ಮೂಲಮಂತ್ರ

ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಅಧಿಕಾರ ಸಿಕ್ಕಿರೋದಕ್ಕೆ ಪ್ರಮುಖ ಕಾರಣವೇ ಗ್ಯಾರೆಂಟಿ ಘೋಷಣೆಗಳು. ಕರ್ನಾಟಕದಲ್ಲಿ ಗ್ಯಾರೆಂಟಿ ವರ್ಕೌಟ್​ ಆದ ಬಳಿಕ, ಲೋಕ ಕದನದಲ್ಲೂ ಕಾಂಗ್ರೆಸ್​ ಪಕ್ಷ ಗ್ಯಾರೆಂಟಿ ಅಸ್ತ್ರವನ್ನು ಪ್ರಯೋಗ ಮಾಡಿತ್ತು. ಆದರೆ ಅದು ವರ್ಕೌಟ್​ ಆಗಲಿಲ್ಲ. ಇದೀಗ ಮಹಾರಾಷ್ಟ್ರ ವಿಧಾನಸಭೆಗೂ ಕಾಂಗ್ರೆಸ್​ ಗ್ಯಾರೆಂಟಿ ರಣತಂತ್ರವನ್ನು ರಚಿಸುವ ಚಿಂತೆಯಲ್ಲಿದೆ. ಆದರೆ ಕರ್ನಾಟಕದ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಖುದ್ದು ಡಿಸಿಎಂ, ಡಿ.ಕೆ.ಶಿವಕುಮಾರ್​ ಅವರೇ ಹೇಳಿದ್ದು ಸಂಚಲನವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಡಿಕೆಶಿಗೆ ಬಜೆಟ್​ ಯೋಜನೆಯಂತೆ ನಡೆದುಕೊಳ್ಳಿ ಅಂತ ಸಲಹೆ ನೀಡಿದ್ದರು. ಇದನ್ನೇ ಅಸ್ತ್ರ ಮಾಡಿಕೊಂಡ ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ಸರಣಿ ಟ್ವೀಟ್​ ಮೂಲಕ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರ ಸಲಹೆಯನ್ನೇ ಅಸ್ತ್ರ ಮಾಡಿಕೊಂಡ ಮೋದಿ, ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ. ವಾಸ್ತವಕ್ಕೆ ದೂರವಾದ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಜಾರಿಗೊಳಿಸುವುದು ಕಷ್ಟ ಅಥವಾ ಅಸಾಧ್ಯ ಎಂಬ ಸತ್ಯ ಕಾಂಗ್ರೆಸ್​ಗೆ ಅರ್ಥವಾಗುತ್ತಿದೆ. ಇದು ಜನರಿಗೆ ಮಾಡಿದ ಮಹಾ ಮೋಸ. ಈಗಿರುವ ಯೋಜನೆಗಳನ್ನು ಹಿಂಪಡೆಯಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


">November 1, 2024


">November 1, 2024

ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್

ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್​​ಗೆ ಇಡೀ ಕಾಂಗ್ರೆಸ್​ ಪಡೆಯೇ ಕೆರಳಿ ಕೆಂಡವಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ವಿರುದ್ಧ ಗುಟುರು ಹಾಕಿದ್ದಾರೆ. ಪ್ರಧಾನಿ ವಿರುದ್ಧ ಕಠೋರ ಪದ ಪ್ರಯೋಗದ ಮೂಲಕ ತಿರುಗೇಟು ನೀಡಿದ್ದಾರೆ. ದೇಶದ ಪ್ರಧಾನಿ ಮೋದಿ ಅವರು ಒಬ್ಬ ರಾಜಕೀಯ ಪುಢಾರಿಯ ರೀತಿಯಲ್ಲಿ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ: 18 ವರ್ಷ ಆದವರಿಗೆ ಭರ್ಜರಿ ಗುಡ್​ನ್ಯೂಸ್​​​; ಲಕ್ಷಕ್ಕೆ 2 ಲಕ್ಷ ಲಾಭ; ಹೇಗೆ?

ಎಲ್ಲವನ್ನೂ ಪಕ್ಷ, ರಾಜಕೀಯದ ಹಳದಿ ಕನ್ನಡಕದಿಂದ ನೋಡುವ ಅಭ್ಯಾಸ ಬಿಟ್ಟು ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಬಡವರ ಕೈಗೆ ದುಡ್ಡು ಸಿಕ್ಕಿ ಅದು ಮಾರುಕಟ್ಟೆಗೆ ಹರಿದುಬಂದು, ಅದರಿಂದ ತೆರಿಗೆ ಸಂಗ್ರಹವೂ ಹೆಚ್ಚಾಗಿ ರಾಜ್ಯದ ಆರ್ಥಿಕತೆಗೆ ಬಲ ಬರಲಿದೆ ಪ್ರಾರಂಭದಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಅದು ಇಂದು ನಿಜವಾಗಿದೆ. ಇದಕ್ಕಾಗಿ ಕರ್ನಾಟಕಕ್ಕೆ ನೀವು ಶಹಾಬಾಸ್ ಗಿರಿ ಕೊಡಬೇಕಿತ್ತು. ಆದರೆ ನೀವು ಸುಳ್ಳಿನ ಬಾಣಗಳ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದ್ದೀರಿ ಇದು ಖಂಡನೀಯ, ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

publive-image

ಪ್ರಣಾಳಿಕೆ ಜೊತೆ ಬಹಿರಂಗ ಚರ್ಚೆಗೆ ಬನ್ನಿ

ಕರ್ನಾಟಕದ ಸರ್ಕಾರ ಯೋಜನೆಗಳನ್ನು ಟೀಕಿಸಿದ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಓಪನ್​ ಜಾಲೆಂಜ್​ ಒಂದನ್ನು ಹಾಕಿದ್ದಾರೆ. ನೀವು ಕಳೆದೆರಡು ಲೋಕಸಭಾ ಚುನಾವಣೆಗೆ ನೀಡಿದ್ದ ಪ್ರಣಾಳಿಕೆ ಜೊತೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಮಾನಸಿಕ ಕಿರಿಕಿರಿ, ಹಣದ ತೊಂದರೆ, ಬೇಸರ, ಸ್ನೇಹಿತರ ಮಧ್ಯ ಮನಸ್ತಾಪ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

ನಾವು ನುಡಿದಂತೆ ನಡೆದಿದ್ದೇವೆ, ನಿಮ್ಮ ಭರವಸೆಗಳೇನಾಯಿತು?. ಪ್ರತಿಯೊಬ್ಬನ ಖಾತೆಗೆ 15 ಲಕ್ಷ ರೂ.ಜಮೆ ಆಯಿತೇ? ಕಪ್ಪು ಹಣ ಮಾಯವಾಯಿತೇ?. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಯಿತೇ?. ರೈತರ ಆದಾಯ ದುಪ್ಪಟ್ಟಾಯಿತೇ? ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ ಎಲ್ಲಿದೆ. ನಿಮ್ಮ ಮೇಕ್ ಇನ್ ಇಂಡಿಯಾ? ನಿಮ್ಮ ಸಾಧನೆಗಳಾದರೂ ಏನು?. ನಾಡನ್ನು ಸಾಲದ ಕೂಪಕ್ಕೆ ತಳ್ಳಿದ್ದೆ? ಸುಳ್ಳು ಮತ್ತು ಅಪಪ್ರಚಾರದ ಮೂಲಕ ನಿಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿದ್ದೇ? ನಿಮ್ಮ ಪಕ್ಷದ ಪ್ರಣಾಳಿಕೆಯನ್ನು ಇಟ್ಟುಕೊಂಡು ಚರ್ಚೆ ಹಮ್ಮಿಕೊಳ್ಳೋಣ. ಪ್ರಣಾಳಿಕೆಯಲ್ಲಿ ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟನ್ನು ನೀವು ಈಡೇರಿಸಿದ್ದೀರಿ. ಈ ಬಗ್ಗೆ ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ. ದೇಶದ ಪ್ರಜ್ಞಾವಂತ ಜನರೇ ಯಾರದ್ದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದನ್ನು ತೀರ್ಮಾನಿಸಲಿ ಎಂದು ಸಿಎಂ ಹೇಳಿದ್ದಾರೆ

ಕಾಂಗ್ರೆಸ್​ ಸರ್ಕಾರದ ಯೋಜನೆ ಟೀಕಿಸಿದ ಮೋದಿ ವಿರುದ್ಧ ಖರ್ಗೆ ಕಿಡಿ

ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ.. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕುಟುಕಿದ್ದಾರೆ. ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ತಿರುಗೇಟು ನೀಡಿದ್ದಾರೆ. ನರೇಂದ್ರ ಮೋದಿ‌‌ಯೇ ಗ್ಯಾರಂಟಿ ಎನ್ನುವುದು ಬಿಜೆಪಿಯ ಕ್ರೂರ ಜೋಕ್ ಎಂದು ಲೇವಡಿ ಮಾಡಿದ್ದಾರೆ. ಇನ್ನು ರಣದೀಪ್ ಸುರ್ಜೇವಾಲ ಕೂಡ ಟ್ವೀಟ್ ಮಾಡಿದ್ದು ರ್ನಾಟಕದ ಜನಕಲ್ಯಾಣ ಯೋಜನೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಕುಂದನಗರಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ.. ಇಡೀ ದಿನ ಸಂಭ್ರಮದಲ್ಲಿ ಮಿಂದೆದ್ದ 5 ಲಕ್ಷ ಜನ

ಒಟ್ಟಾರೆ ಮಹಾರಾಷ್ಟ್ರ ಚುನಾವಣೆ ಹೊಸ್ತಿಲಲ್ಲೇ ಗ್ಯಾರೆಂಟಿ ಗದ್ದಲ ಶುರುವಾಗಿದ್ದು, ಇದು ಮುಂದಿನ ದಿನಗಲ್ಲಿ ಇನ್ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment