/newsfirstlive-kannada/media/post_attachments/wp-content/uploads/2024/02/Australia.jpg)
ಇಂಗ್ಲೆಂಡ್​ನ ಆಲ್​ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವೈಟ್​ ಬಾಲ್ ಸರಣಿಗೆ ಅವರು ಇಂಗ್ಲೆಂಡ್​ ತಂಡದಲ್ಲಿ ಆಯ್ಕೆ ಆಗಿರಲಿಲ್ಲ. ಅದೇ ಕಾರಣಕ್ಕೆ ಅವರು ದಿಢೀರ್ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದೇ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಮೂರು ಟಿ-20, ಐದು ಏಕದಿನ ಪಂದ್ಯವನ್ನು ಆಡಲಿದೆ. 37 ವರ್ಷದ ಮೊಯಿನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್​, 138 ಏಕದಿನ, 92 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡವು 2019ರಲ್ಲಿ ಏಕದಿನ ವಿಶ್ವಕಪ್​, 2022ರಕ್ಕು ಟಿ-20 ವಿಶ್ವಕಪ್​ ಗೆದ್ದುಕೊಂಡಿತ್ತು. ಮೊಯಿನ್ ಅಲಿ ಆ ತಂಡದ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರೂ, ಐಪಿಎಲ್​ನಂತ ಟೂರ್ನಿಗಳಲ್ಲಿ ಅವರು ಆಡಲಿದ್ದಾರೆ.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
/newsfirstlive-kannada/media/post_attachments/wp-content/uploads/2024/09/MOEN-ALI.jpg)
ನನಗೆ 37 ವರ್ಷ. ಆಸ್ಟ್ರೇಲಿಯಾ ವಿರುದ್ಧ ನಡೆಯುವ ಸರಣಿಗೆ ನಾನು ಆಯ್ಕೆ ಆಗಿಲ್ಲ. ನಾನು ಇಂಗ್ಲೆಂಡ್​ಗಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಈಗ ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಸಮಯ. ನಾನು ನಿವೃತ್ತಿ ಪಡೆಯಲು ಇದು ಸರಿಯಾದ ಸಮಯ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಮೊಯಿನ್ ಅಲಿ ಹೇಳಿದ್ದಾರೆ.
ಮೊಯಿನ್ ಅಲಿ ದಾಖಲೆ
68 ಟೆಸ್ಟ್ ಪಂದ್ಯಗಳಲ್ಲಿ 3094 ರನ್​ ಬಾರಿಸಿರುವ ಅವರು 204 ವಿಕೆಟ್​ಗಳನ್ನು ಕಿತ್ತಿದ್ದಾರೆ. ಅದೇ ರೀತಿ 138 ಏಕದಿನ ಪಂದ್ಯಗಳಲ್ಲಿ 2355 ರನ್​ಗಳಿಸಿ 111 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇನ್ನು 92 ಟಿ-20 ಕ್ರಿಕೆಟ್​ನಲ್ಲಿ 1229 ರನ್​ಗಳಿಸಿ 51 ವಿಕೆಟ್ ಪಡೆದುಕೊಂಡಿದ್ದಾರೆ. ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡ್ತಿದ್ದಾರೆ. ​ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿರೋದ್ರಿಂದ ಮೊಯಿನ್ ಅಲಿ, ಐಪಿಎಲ್​ನಲ್ಲಿ ಆಡೋದು ಖಚಿತವಾಗಿದೆ. ಅವರೇ ಹೇಳುವಂತೆ ಮುಂದಿನ ದಿನಗಳಲ್ಲಿ ಕೋಚ್ ಆಗಿ ಕ್ರಿಕೆಟ್​ನಲ್ಲಿ ಇರಲಿದ್ದಾರೆ.
ಇದನ್ನೂ ಓದಿ:ದ್ರಾವಿಡ್ ಎಂಟ್ರಿ ಬೆನ್ನಲ್ಲೇ ಸಂಗಕ್ಕಾರ್​ಗೆ ಕೋಪ; ಈ ಅವಕಾಶ ಬಳಸಿಕೊಳ್ಳಲು KKR ಕಿಲಾಡಿ ಐಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us