/newsfirstlive-kannada/media/post_attachments/wp-content/uploads/2025/05/Mohammad-Abdul-Hamid.jpg)
ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಮೊಹ್ಮದ್ ಅಬ್ದುಲ್ ಹಮಿದ್ (Mohammad Abdul Hamid) ಅವರು ರಾತ್ರೋರಾತ್ರಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ. ದೇಶದ ಜನರು ಘೋರ ನಿದ್ರೆಯಲ್ಲಿರುವಾಗ ಅಂದರೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಥೈಲ್ಯಾಂಡ್ ವಿಮಾನ ಹತ್ತಿ ಎಸ್ಕೇಪ್ ಆಗಿದ್ದಾರೆ.
ಮಧ್ಯರಾತ್ರಿ ಲುಂಗಿಯಲ್ಲಿ ಥೈಲ್ಯಾಂಡ್ಗೆ ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣಕ್ಕೆ ವೀಲ್ ಚೇರ್ ಸಹಾಯದಿಂದ ಬಂದಿರೋ ಫೋಟೋ ವಿಡಿಯೋ ವೈರಲ್ ಆಗಿದೆ. ವರದಿಗಳ ಪ್ರಕಾರ, ತನ್ನ ಕುಟುಂಬದ ಸದಸ್ಯರ ಜೊತೆಗೆ ಥೈಲ್ಯಾಂಡ್ಗೆ ಪ್ರಯಾಣ ಬೆಳೆಸಿದ್ದಾರೆ. ಮೊಹ್ಮದ್ ಅಬ್ದುಲ್ ಹಮಿದ್ 2014-2023 ರವರೆಗೆ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದರು. ಶೇಖ್ ಹಸೀನಾ ಕಾಲದಲ್ಲಿ ಬಾಂಗ್ಲಾದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಟರ್ಕಿ ಆ್ಯಪಲ್, ಮಾರ್ಬಲ್ ಬ್ಯಾನ್.. ಭಾರತದ ಬಾಯ್ಕಾಟ್‌ನಿಂದ ಪಾಕ್ ಪ್ರೇಮಿಗೆ ಎಷ್ಟು ಸಾವಿರ ಕೋಟಿ ನಷ್ಟ?
ಯಾಕೆ ಪರಾರಿ..?
ಎರಡು ಬಾರಿ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದ ಹಮೀದ್, ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. 2024ರಲ್ಲಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಹಸೀನಾ ಅವರ ಆಪ್ತ ಸಹಾಯಕನೊಬ್ಬ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಮಾಡಿದ್ದ. ಇದರಿಂದ ಸಾವು, ನೋವು ಸಂಭವಿಸಿತ್ತು. ಈ ಪ್ರಕರಣದಲ್ಲಿ ಹಮಿದ್ ವಿರುದ್ಧವೂ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಥೈಲ್ಯಾಂಡ್ಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ಇನ್ನು ದೇಶ ಬಿಟ್ಟು ಹೋದ ನಂತರ ಬಾಂಗ್ಲಾದೇಶದ ಸರ್ಕಾರಕ್ಕೆ ವಿಚಾರ ಗೊತ್ತಾಗಿದೆ. ಸೂಕ್ತ ತನಿಖೆ ನಡೆಸುವಂತೆ ಈಗಿನ ಬಾಂಗ್ಲಾದೇಶದ ಸರ್ಕಾರ ಆದೇಶ ನೀಡಿದೆ.
ಇದನ್ನೂ ಓದಿ: ಪೂರ್ಣಮ್ ಕುಮಾರ್ ಶಾ ಯಾರು..? 1030 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ಯೋಧ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ