/newsfirstlive-kannada/media/post_attachments/wp-content/uploads/2024/05/PANDYA_ROHIT_NEW.jpg)
ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನ ನಾಯಕ. ಈ ಕ್ರಿಕೆಟಿಗನ ಕುರಿತು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಆತಂಕಕಾರಿ ಹೇಳಿಕೆಗಳನ್ನು ನೀಡಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
ಐಪಿಎಲ್-2025 ಪ್ರಾರಂಭವಾಗುತ್ತಿದ್ದಂತೆ ಕೈಫ್, ಐಪಿಎಲ್-2024ರ ಬಗ್ಗೆ ಮಾತನಾಡಿದರು. ಕಳೆದ ಋತುವಿನಲ್ಲಿ ಪಾಂಡ್ಯ ಎದುರಿಸಿದ ದ್ವೇಷವನ್ನು ನೆನಪಿಸಿಕೊಂಡರು. ಕಳೆದ ವರ್ಷ ಪಾಂಡ್ಯ ನಿರಂತರವಾಗಿ ಕಿರುಕುಳ ಎದುರಿಸಿದರು. ದ್ವೇಷವನ್ನು ಸಹಿಸಿಕೊಂಡು ಆಟಗಾರನಾಗಿ ಬೆಳೆಯುವುದು ನಿಜಕ್ಕೂ ಕಷ್ಟ. ಕಳೆದ ಐಪಿಎಲ್ನಲ್ಲಿ ಅಭಿಮಾನಿಗಳು ಪಾಂಡ್ಯರನ್ನು ಅಪಹಾಸ್ಯ ಮಾಡಿದರು. ಇದೆಲ್ಲದರ ಮಧ್ಯೆಯೂ ಇಂದು ಪಾಂಡ್ಯ ಬಲಿಷ್ಠರಾಗಿ ನಿಂತಿದ್ದಾರೆ ಅಂತಾ ಕೊಂಡಾಡಿದರು.
ಇದನ್ನೂ ಓದಿ: KL ರಾಹುಲ್, ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾ ಕ್ಯಾಪ್ಟನ್ಸಿ ಆಫರ್; ಇಬ್ಬರಲ್ಲಿ ಯಾರು ಬೆಸ್ಟ್?
ಮುಂದುವರಿದು ಮಾತನಾಡಿದ ಅವರು.. ಪಾಂಡ್ಯ ಜೀವನದಲ್ಲಿ ಕಳೆದಿರುವ ಅವಧಿಯನ್ನು ಗಮನಿಸಿದರೆ ಜೀವನಚರಿತ್ರೆ ಅಥವಾ ಸಾಕ್ಷ್ಯಚಿತ್ರ ಮಾಡಬಹುದು. ಯಾವುದೇ ಆಟಗಾರ ತನಗೆ ಆಗಿರುವ ಅವಮಾನವನ್ನು ಎಂದಿಗೂ ಮರೆಯಲ್ಲ. ಕಳೆದ ವರ್ಷ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾಗೆ ಕೊಕ್ ನೀಡಿ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ನೀಡಿತ್ತು. ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಕೆರಳಿಸಿತ್ತು. ದುರಾದೃಷ್ಟವಶಾತ್, ಆ ಎಲ್ಲಾ ಕೋಪವನ್ನು ಪಾಂಡ್ಯ ಮೇಲೆ ಹಾಕಿದರು. ಏನೇ ತಪ್ಪು ನಡೆದರೂ ಪಾಂಡ್ಯ ಮೇಲೆ ಬೆಟ್ಟು ತೋರಿಸಿದರು. ಮುಂಬೈ ಇಂಡಿಯನ್ಸ್ ಪ್ರತಿ ಪಂದ್ಯದಲ್ಲೂ ಪಾಂಡ್ಯ ವಿರುದ್ಧ ಘೋಷಣೆಗಳು ಕೇಳಿಬಂದಿದ್ದವು.
ಇದನ್ನೂ ಓದಿ: ಈ ಸಲ ಕೊಹ್ಲಿಗೆ ಇಲ್ಲ ಟೆನ್ಶನ್.. ಆರ್ಸಿಬಿಯಲ್ಲಿ ಈ ವರ್ಷದ ಲೆಕ್ಕಾಚಾರವೇ ಬೇರೆ..!
ಒಮ್ಮೆ ಪಾಂಡ್ಯ, ರೋಹಿತ್ರನ್ನು ಫೀಲ್ಡಿಂಗ್ಗಾಗಿ ಬೌಂಡರಿ ಲೈನ್ಗೆ ಕಳುಹಿಸಿದ್ದು ಹೆಚ್ಚು ಸುದ್ದಿ ಆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ತಮ್ಮದೇ ದೇಶದ ಅಭಿಮಾನಿಗಳಿಂದ ದ್ವೇಷ ಎದುರಿಸಿದ್ದ ಪಾಂಡ್ಯ, ಪ್ರೀತಿ ಗಳಿಸಿದ್ದಾರೆ. ಟೀಮ್ ಇಂಡಿಯಾಗೆ 2 ಐಸಿಸಿ ಟ್ರೋಫಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2024ರ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ.
ಇದರಿಂದ ಅಭಿಮಾನಿಗಳಲ್ಲಿ ಅವರ ಮೇಲಿನ ಕೋಪ ಕಡಿಮೆ ಆಗಿದೆ. ಮುಂಬೈ ಇಂಡಿಯನ್ಸ್ ಕೂಡ ಪಾಂಡ್ಯ ಅವರೇ ಕ್ಯಾಪ್ಟನ್ ಅಂತಾ ದೃಢಪಡಿಸಿದೆ. ಈಗ ಪಾಂಡ್ಯರನ್ನು ಮೈದಾನದಲ್ಲಿ ಕಂಡಾಗ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಾರೆ. ಪಾಂಡ್ಯ ಕೇವಲ ಒಂದು ವರ್ಷದಲ್ಲಿ ಅವನ ಮೇಲಿನ ದ್ವೇಷವನ್ನು ಪ್ರೀತಿಯಾಗಿ ಪರಿವರ್ತಿಸಿ ಹೀರೋ ಆದರು ಅಂತಾ ಕೈಫ್ ಬಣ್ಣಿಸಿದ್ದಾರೆ.
ಇದನ್ನೂ ಓದಿ: Gold rate: ಬಂಗಾರ ಮತ್ತಷ್ಟು ದುಬಾರಿ.. ಯಾವ ರಾಜ್ಯದಲ್ಲಿ ಎಷ್ಟೆಷ್ಟು ಬೆಲೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್