/newsfirstlive-kannada/media/post_attachments/wp-content/uploads/2025/07/GILL_KOHLI-1.jpg)
ಶುಭ್ಮನ್ ಗಿಲ್ ಕ್ಯಾಪ್ಟನ್ಸಿ, ಟೀಮ್ ಇಂಡಿಯಾಗೆ ಹೊಸ ಭರವಸೆ ಹುಟ್ಟಿಹಾಕಿದೆ. ಆದ್ರೆ, ಈ ಭರವಸೆಯ ನಡುವೆ ಶುಭ್ಮನ್, ವಿರಾಟ್ ಕೊಹ್ಲಿ ಬ್ರ್ಯಾಂಡ್ ಬಿಲ್ಡ್ ಮಾಡಲು, ಅಟೆಕ್ಷನ್ ಕ್ರಿಯೇಡ್ ಮಾಡಲು ಮುಂದಾದ್ರಾ ಎಂಬ ಅನುಮಾನ ಹುಟ್ಟಿಸಿದೆ. ಇದಕ್ಕೆಲ್ಲಾ ಕಾರಣ ಲಾರ್ಡ್ಸ್ ಟೆಸ್ಟ್.
ಲಾರ್ಡ್ಸ್ ಟೆಸ್ಟ್ ಮುಗಿದಾಗಿದೆ. ಟೀಮ್ ಇಂಡಿಯಾ ಸೋಲು ಕಂಡಿದ್ದಾಗಿದೆ. ಸರಣಿಯಲ್ಲಿ ಇಂಗ್ಲೆಂಡ್, ರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ ಗೆದ್ದಾಗಿದೆ. ಆದ್ರೆ, ಲಾರ್ಡ್ಸ್ ಟೆಸ್ಟ್ನಲ್ಲಿ ನಡೆದ ವಾಗ್ವಾದಗಳು ಈಗಲೂ ಚರ್ಚೆಯಲ್ಲಿವೆ. ಕ್ಯಾಪ್ಟನ್ ಶುಭ್ಮನ್ ಗಿಲ್ ವರ್ತನೆ ಚರ್ಚೆಯ ಕೇಂದ್ರ ಬಿಂದುವಾಗಿದೆ.
ಶುಭ್ಮನ್ ಗಿಲ್ ಅಗ್ರೆಷನ್ಗೆ ಮಾಜಿ ಆಟಗಾರರು ಕೆಂಡ..!
ಲಾರ್ಡ್ಸ್ ಟೆಸ್ಟ್ನಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಸೌಂಡ್ ಮಾಡಿದ್ದಕ್ಕಿಂತ ಹೆಚ್ಚು ಸೌಂಡ್ ಮಾಡಿದ್ದು, ಅಗ್ರೆಷನ್. ಶುಭ್ಮನ್ ಗಿಲ್ ಆಕ್ರಮಣಕಾರಿ ನಾಯಕತ್ವ ವಿರಾಟ್ ಕೊಹ್ಲಿಯ ಕ್ಯಾಪ್ಟನ್ಸಿಯನ್ನೇ ನೆನಪಿಸಿತ್ತು. ಏಟಿಗೆ ಏಟು ತಿರುಗೇಟು ನೀಡುವ ಸ್ವಭಾವಕ್ಕೆ ಫ್ಯಾನ್ಸ್ ಬಹುಪರಾಕ್ ಎಂದಿದ್ರು. ಆದ್ರೆ, ಇದೇ ಟೀಮ್ ಇಂಡಿಯಾ ಲಾರ್ಡ್ಸ್ ಟೆಸ್ಟ್ ಸೋಲಿಗೂ ಕಾರಣವಾಯ್ತು. ಇದೀಗ ಇದೇ ವರ್ತನೆ ಬಗ್ಗೆ ಮಾಜಿ ಆಟಗಾರರು ಶುಭ್ಮನ್ ವಿರುದ್ಧ ಕೆಂಡಕಾರುತ್ತಿದ್ದಾರೆ.
ಗಿಲ್ ಅತಿರೇಕವೇ ಇಂಗ್ಲೆಂಡ್ ಕಮ್ಬ್ಯಾಕ್ಗೆ ಸ್ಪೂರ್ತಿ..!
ಲಾರ್ಡ್ಸ್ ಟೆಸ್ಟ್ನ 3ನೇ ದಿನದಾಟ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಟೈಮ್ ವೇಸ್ಟ್ ಮಾಡ್ತಿತ್ತು. ಇದ್ರಿಂದ ಕುಪಿತಗೊಂಡ ಶುಭ್ಮನ್, ಜಾಕ್ ಕ್ರಾವ್ಲಿ ಮೇಲೆ ಕೆಂಡ ಕಾರಿದ್ರು. ಬೆರಳು ತೋರಿಸಿ ಥೇಟ್ ಕೊಹ್ಲಿಯಂತೆಯೇ ವಾರ್ನಿಂಗ್ ನೀಡಿದರು. ಅಷ್ಟೆ ಅಲ್ಲ, ಸಬೂಬು ನೀಡಲು ಬಂದಿದ್ದ ಬೆನ್ ಡಕೆಟ್ಗೆ ಶುಭ್ಮನ್ ಗಿಲ್ಗೆ ಕಣ್ಣಲ್ಲೇ ಕಣ್ಣಿಟ್ಟು ದಿಟ್ಟ ಉತ್ತರ ನೀಡ್ತಿದರು. ಆದ್ರೆ, ಈ ಘಟನೆ ಇಂಗ್ಲೆಂಡ್ ತಂಡದ ಫೈರಿ ಪರ್ಫಮೆನ್ಸ್ಗೆ ಸ್ಪೂರ್ತಿಯಾಯ್ತು.
ಗಿಲ್ ಬಗ್ಗೆ ಕೈಫ್ ಕಿಡಿ..!
ಶುಭಮನ್ ಗಿಲ್, ಕ್ರಾವ್ಲಿ ಜಗಳ ಇಂಗ್ಲೆಂಡ್ ತಂಡವನ್ನ ಹುರಿದುಂಬಿಸಿತು. ಎಡ್ಜ್‌ಬಾಸ್ಟನ್ ನಂತರ ಇಂಗ್ಲೆಂಡ್ ಬ್ಯಾಟಿಂಗ್, ಬೌಲಿಂಗ್, ನಾಯಕತ್ವದ ಬಗ್ಗೆ ಪ್ರಶ್ನೆಗಳಿದ್ದವು. ಆದ್ರೆ, ಆ ಘಟನೆ ಸ್ಟೋಕ್ಸ್ನ ಹುರಿದುಂಬಿಸಿತು. ಸ್ಪೂರ್ತಿದಾಯಕ ಬೌಲಿಂಗ್ ಸ್ಪೆಲ್ ಮಾಡಿದರು. ನಿಮಗೆ ಸರಿಹೊಂದುವ ವರ್ತನೆಗೆ ಅಂಟಿಕೊಳ್ಳುವುದು ಬುದ್ಧಿವಂತಿಕೆ. ಇದನ್ನ ಶುಭ್ಮನ್ ಗಿಲ್ ಕಲಿಯಬೇಕಿದೆ.
ಮೊಹಮ್ಮದ್ ಕೈಫ್, ಮಾಜಿ ಕ್ರಿಕೆಟರ್
ಮೊಹಮ್ಮದ್ ಕೈಫ್ ಮಾತ್ರವೇ ಅಲ್ಲ, ಸ್ವತಃ ಎದುರಾಳಿ ತಂಡದ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಕೂಡ ಆ ಘಟನೆಯೇ ನಮ್ಮ ಕಮ್ಬ್ಯಾಕ್ಗೆ ಕಾರಣ ಅಂತಾ ಪರೋಕ್ಷವಾಗಿ ಹೇಳಿದ್ದಾರೆ.
ನಿಮ್ಮ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿದ್ದು, ಅವರ ಮೇಲೆ 11 ಮಂದಿ ಮುಗಿಬಿದ್ದರೆ, ಖಂಡಿತ ಅದು ಮತ್ತೊಂದು ರೂಪ ಹೊರತರುತ್ತೆ.
ಬೆನ್ ಸ್ಟೋಕ್ಸ್, ಇಂಗ್ಲೆಂಡ್ ತಂಡದ ಕ್ಯಾಪ್ಟನ್
ಇದನ್ನೂ ಓದಿ: ಬ್ಯುಸಿನೆಸ್ ಫೀಲ್ಡ್ಗೆ ಇಳಿದ ಟೀಮ್ ಇಂಡಿಯಾದ ಸ್ಟಾರ್.. ವಿರಾಟ್ ಕೊಹ್ಲಿ ಶಿಷ್ಯ ಹೊಸ ಇನ್ನಿಂಗ್ಸ್!
ಕೊಹ್ಲಿ ಅಂದ್ರೆ, ಅಗ್ರೆಷನ್.. ಅಗ್ರೆಷನ್ ಅಂದ್ರೆ, ಕೊಹ್ಲಿ ಅನ್ನೋ ಮಾತಿತ್ತು. ಶುಭ್ಮನ್ ಗಿಲ್ ಲಾರ್ಡ್ಸ್ನಲ್ಲಿ ತೋರಿದ ವರ್ತನೆ ನಿಜಕ್ಕೂ ಕೊಹ್ಲಿಯನ್ನೇ ಪ್ರತಿಬಿಂಬಿಸುವಂತಿತ್ತು. ಈಗಾಗಲೇ ಕೊಹ್ಲಿ ಉತ್ತರಾಧಿಕಾರಿ ಎಂದು ಗಿಲ್ ಬಿಂಬಿತವಾಗಿದ್ದಾರೆ. ಇದನ್ನೇ ಇಟ್ಟು ಕೊಂಡು ಬ್ರ್ಯಾಂಡ್ ಬ್ಯುಲ್ಡ್ ಮಾಡೋಕೆ ಮುಂದಾದ್ರಾ ಎಂಬ ಅನುಮಾನ ಹುಟ್ಟಿದೆ.
ಅದು ಏನೇ ಇರಲಿ ಶುಭ್ಮನ್, ಅಗ್ರೆಷನ್ ಹೊಸ ಚರ್ಚೆಯನ್ನಂತು ಹುಟ್ಟುಹಾಕಿದೆ. ಅಟೆನ್ಷನ್ಗಾಗಿ ಶುಭ್ಮನ್ ಗಿಲ್, ಕೊಹ್ಲಿ ಸ್ಟ್ರೈಲ್ ಅನುಸರಿಸ್ತಿದ್ದಾರೆ ಎಂಬ ಪ್ರಶ್ನೆ ತೀವ್ರ ಡಿಬೆಟ್ ಆಗ್ತಿದೆ. ಇದಕ್ಕೆ ಸ್ವತಃ ಗಿಲ್ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ