ದಿಢೀರ್​ ಡಿಕೆಶಿ ಭೇಟಿಯಾಗಿ ಕಾರಲ್ಲಿ ಸುದೀಪ್ ಜೊತೆ ತೆರಳಿದ ನಲಪಾಡ್; ಭಾರೀ ಕುತೂಹಲ​

author-image
Bheemappa
Updated On
ದಿಢೀರ್​ ಡಿಕೆಶಿ ಭೇಟಿಯಾಗಿ ಕಾರಲ್ಲಿ ಸುದೀಪ್ ಜೊತೆ ತೆರಳಿದ ನಲಪಾಡ್; ಭಾರೀ ಕುತೂಹಲ​
Advertisment
  • ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದ ಸುದೀಪ್
  • ಸುದೀಪ್ ಅವರ ಕಾರಿನಲ್ಲೇ ತೆರಳಿದ ಮೊಹಮ್ಮದ್ ನಲಪಾಡ್
  • ಡಿ.ಕೆ ಶಿವಕುಮಾರ್ ನಿವಾಸಕ್ಕೆ ಸುದೀಪ್ ಅವರು ಬಂದಿದ್ದು ಏಕೆ?

ಬೆಂಗಳೂರು: ಫೆಬ್ರುವರಿ 8 ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ 11ರ ಪಂದ್ಯಾವಳಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ಕಿಚ್ಚ ಸುದೀಪ್ ಭೇಟಿ ಕೊಟ್ಟು, ವಾಪಸ್ ಕಾರಿನಲ್ಲಿ ತೆರಳುವಾಗ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕೂಡ ಅದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ 11ರ ಟೂರ್ನಿಯು ಇದೇ ಫೆಬ್ರುವರಿ 8 ರಿಂದ ಆರಂಭವಾಗಲಿದೆ. ಹೀಗಾಗಿ ಉದ್ಘಾಟನಾ ಸಮಾರಂಭಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಕಿಚ್ಚ ಸುದೀಪ್ ಅವರು ಆಹ್ವಾನ ಮಾಡಿ, ಕುಶಲೋಪಚಾರ ವಿಚಾರಿಸಿ ವಾಪಸ್​ ತಮ್ಮ ಕಾರಿನಲ್ಲಿ ಸುದೀಪ್ ಅವರು ತೆರಳುತ್ತಿದ್ದರು.

publive-image

ಇದನ್ನೂ ಓದಿ:ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು ಶಿಕ್ಷೆ​.. ಇವರು ಮಾಡಿದ್ದಾದ್ರೂ ಏನು ಗೊತ್ತಾ?

ಆದರೆ ಇದೇ ವೇಳೆ ಸುದೀಪ್ ಅವರ ಕಾರಿನಲ್ಲೇ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತೆರಳಿರುವುದು ಕಂಡು ಬಂದಿದೆ. ಸುದೀಪ್, ಮೊಹಮ್ಮದ್ ನಲಪಾಡ್ ಹಾಗೂ ಅನೂಪ್ ಭಂಡಾರಿ ಸೇರಿ ಒಂದೇ ಕಾರಿನಲ್ಲಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಿಂದ ಪ್ರಯಾಣ ಬೆಳೆಸಿದರು. ಮೊಹಮ್ಮದ್ ನಲಪಾಡ್ ಅವರು ಡಿ.ಕೆ ಶಿವಕುಮಾರ್ ನಿವಾಸಕ್ಕೆ ಯಾಕೆ ಬಂದಿದ್ದರು ಎನ್ನುವುದು ತಿಳಿದು ಬಂದಿಲ್ಲ.

ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಉದ್ಯಮಿ ಅಶೋಕ್ ಖೇಣಿಯವರು ತಂಡದ ಮಾಲೀಕರಾದರೆ, ಸುದೀಪ್ ಅವರು ಕ್ಯಾಪ್ಟನ್ ಆಗಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಬುಲ್ಡೋಜರ್ಸ್ ಈ ಬಾರಿ ಟ್ರೋಫಿ ಗೆಲ್ಲುವ ನಿರೀಕ್ಷೆಯಿಂದ ಅಖಾಡಕ್ಕೆ ಎಂಟ್ರಿ ಕೊಡುತ್ತಿದೆ. ಮೊದಲ ಪಂದ್ಯ ಬೆಂಗಳೂರಲ್ಲಿ ಫೆ.8 ರಂದು ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಸೆಣಸಾಡಲಿವೆ. ಇದರ ನಂತರ 2ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಪಂದ್ಯ ಆಡಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment