/newsfirstlive-kannada/media/post_attachments/wp-content/uploads/2025/02/SHAMI_ROHIT.jpg)
ಬೂಮ್ರಾ ಇಲ್ಲ, ಬೂಮ್ರಾ ಇಲ್ಲ, ಬೂಮ್ರಾ ಇಲ್ಲದೆ ಟೀಮ್ ಇಂಡಿಯಾ ಬೌಲಿಂಗ್ ಬಡವಾಯಿತು ಅನ್ನೋ ಮಾತು ಸದ್ಯ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿದೆ. ಆದ್ರೆ, ಐಸಿಸಿ ಟೂರ್ನಿ ಅಂತಾ ಬಂದ್ರೆ ಬೂಮ್ರಾಗಿಂತ ಮೊಹಮ್ಮದ್ ಶಮಿಯೇ ಡೇಂಜರಸ್. ಶಮಿಯೇ ಡೆಡ್ಲಿ ಬೌಲರ್.
ಬ್ಯಾಟ್ಸ್ಮನ್ಗಳನ್ನ ಗಿರಗಿರನೇ ಆಡಿಸುವ ಈ ಅನುಭವಿ, ಆನ್ ಫೀಲ್ಡ್ನಲ್ಲಿ ಎಸೆಯೋ ಒಂದೊಂದು ಎಸೆತ ನಿಜಕ್ಕೂ ಬೆಂಕಿನೇ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಬಾಂಗ್ಲಾ ಎದುರಿನ ನಿನ್ನೆಯ ಮ್ಯಾಚ್. ಶಮಿ ಫಿಲ್ ಆಗಿದ್ದಾರೋ, ಇಲ್ವೋ, ಏನ್ ಕಥೆ ಎಂದೇ ಅನುಮಾನದ ಕಣ್ಣಿಂದ ನೋಡ್ತಿದ್ದವರಿಗೆ ಪರ್ಫಾಮೆನ್ಸ್ನ ಆನ್ಸರ್ ಕೊಟ್ಟಿದ್ದಾರೆ. 5 ವಿಕೆಟ್ ಕಬಳಿಸಿ ಶಮಿ ಶೈನ್ ಆಗಿದ್ದಾರೆ.
ಮಿಡಲ್ ಓವರ್ನಲ್ಲಿ ಮ್ಯಾಜಿಕ್.. ಡೆತ್ ಓವರ್ಗಳಲ್ಲಿ ಡೆಡ್ಲಿ.!
ಅಭಿಮಾನಿಗಳಿಂದ ಹಿಡಿದು ದಿಗ್ಗಜರ ತನಕ ಬೂಮ್ರಾ ಇಲ್ಲ. ಬೌಲಿಂಗ್ ಬಲ ಕುಸಿಯಿತು ಅಂತಾನೇ ಎಲ್ಲರು ಹೇಳ್ತಿದ್ದಾರೆ. ಆದ್ರೆ, ಜಸ್ಪ್ರೀತ್ ಬೂಮ್ರಾ ಇಲ್ಲದ ಟೀಮ್ ಇಂಡಿಯಾ ಟೆನ್ಶನ್ ಪಡಬೇಕಿಲ್ಲ. ಯಾಕಂದ್ರೆ, ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಎಂಬ ಬಿಗ್ ಮ್ಯಾಚ್ ವಿನ್ನರ್ ಇದ್ದಾನೆ.
ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಮಾಡೋ ಈತ, ಮಿಡಲ್ ಓವರ್ನಲ್ಲಿ ಮ್ಯಾಜಿಕ್ ಮಾಡ್ತಾರೆ. ಡೆತ್ ಓವರ್ಗಳಲ್ಲಿ ಡೆಡ್ಲಿ ಸ್ಪೆಲ್ಸ್ ಹಾಕುವ ಶಮಿ, ಟೀಮ್ ಇಂಡಿಯಾದ ಗೋಲ್ಡನ್ ಆರ್ಮ್ ಅಂದ್ರೆ ತಪ್ಪಿಲ್ಲ. ವಿಕೆಟ್ ಬೇಕು ಅಂದಾಗೆಲ್ಲಾ ಕ್ಯಾಪ್ಟನ್, ಶಮಿ ಕೈಗೆ ಚೆಂಡು ನೀಡಿದ್ರೆ ಸಾಕು. ಸುಲಭಕ್ಕೆ ಎದುರಾಳಿ ಬ್ಯಾಟರ್ನ ಖೆಡ್ಡಾಗೆ ಬೀಳಿಸುವ ಚತುರ. ಇದು ನಿನ್ನೆ ನಡೆದ ಬಾಂಗ್ಲಾ ಎದುರಿನ ಪರ್ಫಾಮೆನ್ಸ್ ನೋಡಿ ಹೇಳ್ತಿರುವ ಮಾತಲ್ಲ. ಐಸಿಸಿ ಟೂರ್ನಿಯಲ್ಲಿ ಶಮಿಯ ಇತಿಹಾಸವೇ ಹಾಗಿದೆ.
ಐಸಿಸಿ ಈವೆಂಟ್ಸ್ನ ರಿಯಲ್ ಗೇಮ್ ಚೇಂಜರ್..!
ಬೂಮ್ರಾ ಇಲ್ಲ ವರೀ ಆಗಬೇಡಿ ಅನ್ನೋಕೆ ಕಾರಣ. ಐಸಿಸಿ ಈವೆಂಟ್ಸ್ಗಳಲ್ಲಿ ಮೊಹಮ್ಮದ್ ಶಮಿಯ ಫೈರಿ ಪರ್ಫಾಮೆನ್ಸ್ ಇದಕ್ಕೆ ಲೆಟೇಸ್ಟ್ ಎಕ್ಸಾಂಪಲ್ 2023ರ ಏಕದಿನ ವಿಶ್ವಕಪ್ ಟೂರ್ನಿ.
2023 ಏಕದಿನ ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಶಮಿ ಬೆಂಚ್ ಕಾದಿದ್ದರು. ಆ ಬಳಿಕ ಸಿಕ್ಕ 7 ಅವಕಾಶಗಳಲ್ಲಿ ಉಗ್ರರೂಪ ತೋರಿದ್ದ ಮೊಹಮ್ಮದ್ ಶಮಿ, 3 ಬಾರಿ 5 ವಿಕೆಟ್ ಬೇಟೆಯಾಡಿ ಬರೋಬ್ಬರಿ 24 ವಿಕೆಟ್ ಉರುಳಿಸಿದ್ದರು. ಆ ಟೂರ್ನಿಯಲ್ಲಿ ಶಮಿ ಟೀಮ್ ಇಂಡಿಯಾ ಸಕ್ಸಸ್ ಹಿಂದಿನ ರಿಯಲ್ ಹೀರೋ ಆಗಿದ್ರು. ಶಮಿಯ ಈ ಪರ್ಫಾಮೆನ್ಸ್, ಒಂದೇ ಒಂದು ಐಸಿಸಿ ಈವೆಂಟ್ಗೆ ಮಾತ್ರ ಸೀಮಿತವಾಗಿಲ್ಲ.
ಏಕದಿನ ಐಸಿಸಿ ಈವೆಂಟ್ಸ್ನಲ್ಲಿ ಶಮಿ
ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಪಿ ಸೇರಿ ಐಸಿಸಿ ಈವೆಂಟ್ಸ್ನಲ್ಲಿ 18 ಪಂದ್ಯಗಳನ್ನಾಡಿರುವ ಶಮಿ, ಬರೋಬ್ಬರಿ 55 ವಿಕೆಟ್ ಉರುಳಿಸಿದ್ದಾರೆ. 13.52ರ ಬೌಲಿಂಗ್ ಅವರೇಜ್ ಹೊಂದಿರುವ ಶಮಿ, 55 ರನ್ ನೀಡಿ 7 ವಿಕೆಟ್ ಉರುಳಿಸಿರುವುದು ಬೆಸ್ಟ್ ಫರ್ಫಾಮೆನ್ಸ್. 5.13ರ ಏಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
ಇದನ್ನೂ ಓದಿ:Champions Trophy; ಭಾರತ ಶುಭಾರಂಭ, ಗಿಲ್ ಸೆಂಚುರಿ.. ಕನ್ನಡಿಗನ ವಿನ್ನಿಂಗ್ ಶಾಟ್ ಹೇಗಿತ್ತು?
ಪ್ರತಿ ಒಡಿಐ ಈವೆಂಟ್ಸ್ನಲ್ಲಿ ಪಾಕ್ಗೆ ಶಮಿ ಕಾಟ..!
ಬದ್ಧ ವೈರಿ ಪಾಕಿಸ್ತಾನ ಎದುರು ಸಹ ಮೊಹಮ್ಮದ್ ಶಮಿಯ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. 2013ರ ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಕ್ ಎದುರು ಮೊದಲ ಬಾರಿ ಕಣಕ್ಕಿಳಿದಿದ್ದ ಶಮಿ, 9 ಓವರ್ಗಳಲ್ಲಿ 4 ಮೇಡನ್ ಸಹಿತ 23 ರನ್ ನೀಡಿ 1 ವಿಕೆಟ್ ಬೇಟೆಯಾಡಿದ್ದರು.ಅಷ್ಟೇ ಅಲ್ಲ. 2015ರ ಚಾಂಪಿಯನ್ಸ್ ಟ್ರೋಫಿಯಲ್ಲಿ 2ನೇ ಬಾರಿ ಪಾಕ್ ಎದುರು ಕಣಕ್ಕಿಳಿದಿದ್ದ ಶಮಿ, 35 ರನ್ ನೀಡಿ 4 ವಿಕೆಟ್ ಬೇಟೆಯಾಡಿದ್ದರು.
ಬೂಮ್ರಾ ಅಲಭ್ಯತೆಯಲ್ಲಿ ನಾನ್ ಏನ್ ಮಾಡಬಲ್ಲೇ ಅನ್ನೋದನ್ನ ಮೊಹಮ್ಮದ್ ಶಮಿ ಮೊದಲ ಪಂದ್ಯದಲ್ಲೇ ನಿರೂಪಿಸಿದ್ದಾರೆ. ಪ್ರತಿ ಸಲ ಪಾಕ್ಗೆ ಕಾಟ ನೀಡಿರುವ ಶಮಿ, ಇದೀಗ ಮತ್ತೊಮ್ಮೆ ಅಬ್ಬರಿಸುವ ನಿರೀಕ್ಷೆಯನ್ನ ಹುಟ್ಟು ಹಾಕಿದ್ದಾರೆ. ಆದ್ರೆ, ಈ ವೇಳೆ ಅನಾನುಭವಿ ಪೇಸರ್ಗಳು ಮೊಹಮ್ಮದ್ ಶಮಿಗೆ ಸಾಥ್ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ