ಸೆಮಿಸ್​ಗೂ ಮೊದಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್​.. ಸ್ಟಾರ್ ಪೇಸರ್​ ಆಡೋದೇ ಡೌಟ್

author-image
Bheemappa
Updated On
ಸೆಮಿಸ್​ಗೂ ಮೊದಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್​.. ಸ್ಟಾರ್ ಪೇಸರ್​ ಆಡೋದೇ ಡೌಟ್
Advertisment
  • ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಬೌಲರ್​ಗೆ ಆಗಿದ್ದು ಏನು?
  • ಯುವ ಪೇಸ್ ಬೌಲರ್ ಇದ್ದರೂ ಇವರ ಮೇಲೆ ಏಕೆ ಒತ್ತಡ ಹೆಚ್ಚು
  • ಈ ಪ್ಲೇಯರ್​ ಬದಲಿಗೆ ಮೊಹಮ್ಮದ್ ಸಿರಾಜ್​​ಗೆ ಡೋರ್ ಓಪನ್?

ಬೂಮ್ರಾ ಇಲ್ಲದರೇನು, ಮೊಹಮ್ಮದ್ ಶಮಿ ಇದ್ದಾರೆ ಅನ್ನೋ ಸಮಾಧಾನ ಫ್ಯಾನ್ಸ್​ ವಲಯದಲ್ಲಿತ್ತು. ಆದ್ರೆ, ಪಾಕ್ ಎದುರಿನ ಪಂದ್ಯ ನೋಡಿದ ಮೇಲೆ, ಶಮಿ ಇವತ್ತೋ, ನಾಳೆ ಟೂರ್ನಿಯಿಂದಲೇ ಔಟ್​ ಆಗೋದು ಗ್ಯಾರಂಟಿ ಅನ್ನೋದು ಕನ್​​ಫರ್ಮ್​ ಆಗಿದೆ. ಟೂರ್ನಿಯಿಂದ ಮಾತ್ರವಲ್ಲ, ವೈಟ್​ಬಾಲ್ ಕರಿಯರಿಂದ ಹೊರ ನಡೆದರೂ ಅಚ್ಚರಿ ಪಡಬೇಕಿಲ್ಲ.

ಚಾಂಪಿಯನ್ಸ್​​ ಟ್ರೋಫಿಯ ಫಸ್ಟ್​ ಮ್ಯಾಚ್. ಒಂದಲ್ಲ, ಎರಡಲ್ಲ ಬರೋಬ್ಬರಿ 5 ವಿಕೆಟ್ ಉರುಳಿಸಿದ್ದ ಮೊಹಮ್ಮದ್ ಶಮಿ ಸೆನ್ಸೇಷನ್ ಸೃಷ್ಟಿಸಿದ್ದರು. ಬೂಮ್ರಾ ಇಲ್ಲದೇ ಬಡವಾಗಿದ್ದ ಬೌಲಿಂಗ್ ವಿಭಾಗಕ್ಕೆ ನಾನೇ ಬಲ ಎಂದು ಸಂದೇಶ ರವಾನಿಸಿದರು. ಇದನ್ನ ನೋಡಿದ್ದ ಫ್ಯಾನ್ಸ್​ ಖುಷಿಯಲ್ಲೇ ತೇಲಾಡಿದ್ದರು. ಆದ್ರೆ, 2ನೇ ಮ್ಯಾಚ್​​ನಲ್ಲಿ ಎಲ್ಲವೂ ಬದಲಾಯಿತು.

publive-image

ಪಾಕ್​ ವಿರುದ್ಧ ಮೊದಲ ಓವರ್​ನಲ್ಲೇ 5 ವೈಡ್​..!

ಬಾಂಗ್ಲಾ ಎದುರು 5 ವಿಕೆಟ್ ಬೇಟೆಯಾಡಿ ಗಮನ ಸೆಳೆದಿದ್ದ ಮೊಹಮ್ಮದ್ ಶಮಿ ಮೇಲೆ ಪಾಕ್​ ವಿರುದ್ಧದ ಹೈವೋಲ್ಟೇಜ್​ ಕದನದಲ್ಲಿ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಹೊಸ ಬಾಲ್​ ಹಿಡಿದು ದಾಳಿಗಿಳಿದ ಶಮಿ ಮೊದಲ ಓವರ್​​​​​​​​​​​​​​​​​​​ ಓವರ್​ನಲ್ಲೇ ಬರೋಬ್ಬರಿ 5 ವೈಡ್​​ ಬಾಲ್​​ ಎಸೆದರು. ಮೊದಲ ಓವರ್​ನ ಈ 5 ವೈಡ್​ಗಳೇ​ ಶಮಿ ಫಿಟ್​​ನೆಸ್ ಕತೆ ಹೇಳುತ್ತಿವೆ.

ಪಂದ್ಯದಲ್ಲಿ ತನ್ನ ಕೋಟಾದ ಮೊದಲ ಎರಡು ಓವರ್​​​ ಮುಗಿಸಿದ್ದ ಶಮಿ, 3ನೇ ಓವರ್​​ನ 4ನೇ ಎಸೆತ ಎಸೆಯುತಿದ್ದಂತೆ ಇಂಜುರಿಗೆ ತುತ್ತಾದರು. ಬೌಲ್​ ಮಾಡಿ ವಾಪಾಸ್ಸಾಗ್ತಿದ್ದಂತೆ ಫಿಸಿಯೋ ಮೈದಾನಕ್ಕೆ ಎಂಟ್ರಿ ನೀಡಿದರು. ಟ್ರೀಟ್​ಮೆಂಟ್​​ ಪಡೆದ ಶಮಿ ಮತ್ತೆರೆಡು ಎಸೆತ ಎಸೆದು ಡ್ರೆಸ್ಸಿಂಗ್​ ರೂಮ್​ನತ್ತ ಹೆಜ್ಜೆ ಹಾಕಿದರು. ಕೆಲ ಕಾಲ ವಿಶ್ರಾಂತಿ ಪಡೆದು ಬಂದ ಶಮಿ ಬಳಿಕ ಮತ್ತೆ ಬೌಲಿಂಗ್​ ಮಾಡಿದರು. ಆದ್ರೆ, ಸ್ಪೆಲ್​​ ಮುಗಿದ ಬೆನ್ನಲ್ಲೇ ಮತ್ತೆ ಡ್ರೆಸ್ಸಿಂಗ್​ ರೂಮ್​ ಸೇರಿದರು. ಶಮಿ ಹೀಗೆ ಪದೇ ಪದೇ ವಿಶ್ರಾಂತಿಯ ಮೊರೆ ಹೋಗಿದ್ದು ಫಿಟ್​ನೆಸ್​ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.

ತರಾತುರಿಯಲ್ಲಿ ಶಮಿಯನ್ನ ಆಡಿಸಿದ್ರಾ..?

ಪಾಕ್ ಎದುರಿನ ಮ್ಯಾಚ್​ನಲ್ಲಿ ಸೆಟಲ್ಡ್​ ಆಗಿ ಬೌಲಿಂಗ್ ಮಾಡದ ಶಮಿಯನ್ನು ನೋಡಿದ ಯಾರಿಗಾದರೂ ಫಿಟ್ಟಾ, ಅನ್​ಫಿಟ್ಟಾ ಅನ್ನೋ ಸಂದೇಹ ಹುಟ್ಟದೇ ಇರಲ್ಲ. ಯಾಕಂದ್ರೆ, 2023ರ ಏಕದಿನ ವಿಶ್ವಕಪ್​ ಬಳಿಕ ಇಂಜುರಿಯಿಂದ ಚೇತರಿಸಿಕೊಳ್ಳುವುದರಲ್ಲೇ ದಿನ ದೂಡಿದ್ದ ಶಮಿ, ಕಳೆದ ತಿಂಗಳು ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುನ್ನವೂ ಕಾಲು ಊತದಿಂದ ಬಳಲಿದ್ದರು. ಇದರ ಹೊರತಾಗಿ ಇಂಗ್ಲೆಂಡ್ ಎದುರಿನ ಟಿ20, ಏಕದಿನ ಸರಣಿಯಲ್ಲಿ ಸ್ಥಾನ ನೀಡಿದ ಸೆಲೆಕ್ಷನ್ ಕಮಿಟಿ, ಚಾಂಪಿಯನ್ಸ್​ ಟ್ರೋಫಿಗೂ ಅವಕಾಶ ನೀಡಿದೆ. ಈಗ ಮತ್ತೆ ಇಂಜುರಿ ಕಾಟ ಶುರುವಾಗಿದೆ. ಇದು ಸಂಪೂರ್ಣ ಫಿಟ್​ ಆಗದ ಶಮಿಯನ್ನ ಟೀಮ್ ಮ್ಯಾನೇಜ್​ಮೆಂಟ್ ತುರಾತುರಿಯಲ್ಲಿ ಆಡಿಸ್ತಾ ಎಂಬ ಅನುಮಾನ ಹುಟ್ಟಿದೆ.

ಆರ್ಷ್​ದೀಪ್ ಸಿಂಗ್ ಇದ್ದರೂ ಶಮಿ ಮೇಲ್ಯಾಕೆ ಒತ್ತಡ..?

ಯಂಗ್ ಲೆಫ್ಟಿ ಪೇಸರ್ ಆರ್ಷ್​ದೀಪ್ ಸಿಂಗ್ ತಂಡದಲ್ಲಿದ್ದಾರೆ. ಟಿ20 ಸಿರೀಸ್​, ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದ ಆರ್ಷ್​ದೀಪ್, ಟಿ20 ವಿಶ್ವಕಪ್​ಗಳಲ್ಲಿ ಮೇನ್ ರೋಲ್​ ಪ್ಲೇ ಮಾಡಿದ್ದಾರೆ. ಇಂಥಹ ಅನುಭವಿಯನ್ನು ಟೀಮ್​​ನಲ್ಲಿರಿಸಿಕೊಂಡ ಮ್ಯಾನೇಜ್​ಮೆಂಟ್, ಶಮಿಗೆ ಬಾಂಗ್ಲಾ ಎದುರಿನ ಮೊದಲ ಪಂದ್ಯದಲ್ಲಿ ರೆಸ್ಟ್​ ನೀಡಬಹುದಿತ್ತು. ಮಹತ್ವದ ಪಂದ್ಯಗಳಲ್ಲಿ ಮಾತ್ರವೇ ಚಾನ್ಸ್​ ನೀಡಬಹುದಿತ್ತು. ಆದ್ರೆ, ಅನಾವಶ್ಯಕವಾಗಿ ಆಡಿಸಿ ಕೈ ಸುಟ್ಟುಕೊಂಡಿದೆ.

ಇದನ್ನೂ ಓದಿ: Kumbh Mela; ಗಂಗೆಯಲ್ಲಿ ಮಿಂದಿದ್ದು ಎಷ್ಟು ಕೋಟಿ ಭಕ್ತರು.. ಶಿವರಾತ್ರಿಯಂದೇ ವಿದ್ಯುಕ್ತ ತೆರೆ

publive-image

ಮೊಹಮ್ಮದ್ ಸಿರಾಜ್​​ಗೆ ಡೋರ್ ಓಪನ್ ಆಗುತ್ತಾ..?

ಪಾಕ್ ವಿರುದ್ಧ ಮೈದಾನಕ್ಕಿಂತ ಗ್ಯಾಲರಿಯಲ್ಲೇ ಹೆಚ್ಚು ಕುಳಿತಿದ್ದ ಮೊಹಮ್ಮದ್​ ಶಮಿ, ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಈ ಇಂಜುರಿ ದೊಡ್ಡ ಪ್ರಮಾಣದಲ್ಲಿಗಿರೋದ್ರಿಂದ ಟೂರ್ನಮೆಂಟ್​ನಿಂದ ಹೊರ ಬೀಳೋ ಸಾಧ್ಯತೆಯಿದೆ. ಶಮಿ ಹೊರಬಿದ್ರೆ, ಮೊಹಮ್ಮದ್ ಸಿರಾಜ್​​ಗೆ ತಂಡದ ಡೋರ್ ಓಪನ್ ಆಗಲಿದೆ. ರಿಸರ್ವ್​​ ಪ್ಲೇಯರ್ ಆಗಿ ಆಯ್ಕೆ ಆಗಿರೋ ಸಿರಾಜ್​ಗೆ ಬಿಗ್​ಸ್ಟೇಜ್​ನಲ್ಲಿ ಆಡಿರುವ ಅನುಭವವೂ ಇದೆ. ಇರೋದ್ರಲ್ಲಿ ಸದ್ಯಕ್ಕೆ ಸಿರಾಜೇ​ ಬೆಸ್ಟ್​ ಚಾಯ್ಸ್​​ ಬಿಡಿ.

ಆತಂಕದಲ್ಲಿ ಶಮಿಯ ವೈಟ್​ಬಾಲ್​ ಕರಿಯರ್..?

ಒಂದಲ್ಲ, ಎರಡಲ್ಲ ಕಳೆದ 10 ವರ್ಷಗಳಿಂದ ಬಹುಪಾಲು ಇಂಜುರಿಯಿಂದಲೇ ಶಮಿ ಕಾಲ ಕಳೆದಿದ್ದಾರೆ. 2015ರ ಏಕದಿನ ವಿಶ್ವಕಪ್​ನಲ್ಲಿ ಆ್ಯಂಕಲ್​ ಇಂಜುರಿಗೆ ತುತ್ತಾಗಿದ್ದ ಶಮಿ, ಆ ನೋವಿನಲ್ಲೇ ಆಡಿದರು. ಇನ್ನು, 2023ರ ಏಕದಿನ ವಿಶ್ವಕಪ್​ನಲ್ಲೂ ಇಂಜೆಕ್ಷನ್​ ತೆಗೆದುಕೊಂಡು ಇಂಜುರಿ ನಡುವೆ ಆಡಿದರು. ಅದಾದ ಬಳಿಕ ದೀರ್ಘಕಾಲ ಮೈದಾನದಿಂದ ಹೊರಗಿದ್ದ ಶಮಿ, ಇದೀಗ ಕಮ್​ಬ್ಯಾಕ್​ ಮಾಡಿದ್ದಾರೆ. ಮತ್ತೆ ಇಂಜುರಿ ಕಾಣಿಸಿಕೊಂಡಿದೆ. ಈ ಇಂಜುರಿ ಮೊಹಮ್ಮದ್ ಶಮಿಯ ವೈಟ್​​ಬಾಲ್​ ಕರಿಯರ್ ಅನ್ನೇ ಅಂತ್ಯಗೊಳಿಸಿದರು ಅಚ್ಚರಿಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment