newsfirstkannada.com

ಗುಜರಾತ್​ ಟೈಟಾನ್ಸ್​​ಗೆ ಬಿಗ್​ ಶಾಕ್​​.. ಐಪಿಎಲ್​​ನಿಂದಲೇ ಹೊರಬಿದ್ದ ಸ್ಟಾರ್​ ಪ್ಲೇಯರ್​​​!

Share :

Published February 22, 2024 at 5:50pm

Update February 22, 2024 at 5:42pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ 17

    ಐಪಿಎಲ್​ ಟ್ರೋಫಿ ಗೆಲ್ಲಬೇಕು ಎಂದು ಜಿದ್ದಿಗೆ ಬಿದ್ದ ಟೀಮ್ಸ್​​!

    ಗುಜರಾತ್​ ಟೈಟಾನ್ಸ್​ ತಂಡಕ್ಕೆ ಕೈಕೊಟ್ಟ ಸ್ಟಾರ್​​ ಆಟಗಾರ

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ 17 ಇನ್ನೇನು ಶುರುವಾಗಲಿದೆ. ಹೇಗಾದ್ರೂ ಮಾಡಿ ಐಪಿಎಲ್​ ಟ್ರೋಫಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಎಲ್ಲಾ ಫ್ರಾಂಚೈಸಿಗಳು ಭಾರೀ ತಯಾರಿ ನಡೆಸಿಕೊಂಡಿವೆ. ಈ ಮಧ್ಯೆ ಗುಜರಾತ್​ ಟೈಟಾನ್ಸ್​​ಗೆ ಬಿಗ್​ ಶಾಕ್​ ಕಾದಿದೆ.

ಹೌದು, ಭಾರತ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ 2024ರ ಐಪಿಎಲ್​​ ಟೂರ್ನಿಯಿಂದಲೇ ಔಟ್​ ಆಗಿದ್ದಾರೆ. ಹೀಗಾಗಿ ಶಮಿ ಕೈಕೊಟ್ಟ ಕಾರಣ ಗುಜರಾತ್​ ಟೈಟಾನ್ಸ್​ಗೆ ಭಾರೀ ಹಿನ್ನಡೆಯಾಗಿದೆ. ಅನುಭವಿ ವೇಗಿ ಶಮಿ ಎಡಗಾಲಿಗೆ ಗಂಭೀರ ಗಾಯಗಳು ಆಗಿದ್ದು, ಇದಕ್ಕಾಗಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಆದ್ದರಿಂದ ಮುಂದಿನ ತಿಂಗಳಿನಿಂದ ನಡೆಯೋ ಐಪಿಎಲ್​​ನಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ ಅಧಿಕಾರಿ ಹೇಳಿದ್ದೇನು..?

ಶಮಿ ಎಡ ಪಾದದ ಚಿಕಿತ್ಸೆ ಪಡೆಯಲು ಜನವರಿ ಕೊನೆ ವಾರದಲ್ಲಿ ಲಂಡನ್‌ಗೆ ತೆರಳಿದ್ದಾರೆ. ಬಳಿಕ ಮೂರು ವಾರಗಳು ರೆಸ್ಟ್​ ಪಡೆದು ರನ್ನಿಂಗ್​ ಮಾಡಬಹುದು ಎಂದು ತಿಳಿಸಲಾಗಿತ್ತು. ಆದರೆ, ಇಂಜೆಕ್ಷನ್ ಕೆಲಸ ಮಾಡಲಿಲ್ಲ. ಹೀಗಾಗಿ ನಮ್ಮ ಬಳಿ ಉಳಿದಿರೋ ಏಕೈಕ ಆಯ್ಕೆ ಶಸ್ತ್ರಚಿಕಿತ್ಸೆ. ಶಸ್ತ್ರಚಿಕಿತ್ಸೆಗಾಗಿ ಮೊಹಮ್ಮದ್ ಶಮಿ ಶೀಘ್ರದಲ್ಲೇ ಯುಕೆಗೆ ತೆರಳಲಿದ್ದಾರೆ ಎಂದಿದ್ದಾರೆ ಬಿಸಿಸಿಐ ಅಧಿಕಾರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಜರಾತ್​ ಟೈಟಾನ್ಸ್​​ಗೆ ಬಿಗ್​ ಶಾಕ್​​.. ಐಪಿಎಲ್​​ನಿಂದಲೇ ಹೊರಬಿದ್ದ ಸ್ಟಾರ್​ ಪ್ಲೇಯರ್​​​!

https://newsfirstlive.com/wp-content/uploads/2024/02/Gill_Shubhman.jpg

Load More