/newsfirstlive-kannada/media/post_attachments/wp-content/uploads/2025/05/SHAMI.jpg)
ಪ್ರತಿಷ್ಠಿತ ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ನಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ನೇತೃತ್ವದಲ್ಲಿ ಬಲಿಷ್ಠ ತಂಡವನ್ನೇ ಪ್ರಕಟಿಸಲಾಗಿದೆ. ಆದ್ರೆ, ಇದೇ ಪ್ರವಾಸದಲ್ಲಿ ಟಿಕೆಟ್ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದ ಕೆಲವರಿಗೆ ನಿರಾಸೆ ಉಂಟಾಗಿದ್ರೆ, ಕೆಲವರಿಗೆ ಅದೃಷ್ಟ ಖುಲಾಯಿಸಿದೆ.
ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ನಯಾ ಟೀಮ್ ಇಂಡಿಯಾ ಪ್ರಕಟವಾಗಿದೆ. ಹೊಸ ನಾಯಕ, ಹೊಸ ಉಪ ನಾಯಕ ನೇಮಿಸಿರುವ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ, ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಇದರೊಂದಿಗೆ ನೂತನ ಯುಗಾರಂಭಕ್ಕೆ ನಾಂದಿಯಾಡಿದೆ. ಇದೇ ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟವಾದ ತಂಡದಲ್ಲಿ ಸ್ಥಾನ ಪಡೆಯೋ ನಿರೀಕ್ಷೆಯಲ್ಲಿದ್ದ ಆಟಗಾರರ ನಿರೀಕ್ಷೆ ಹುಸಿಯಾಗಿದೆ. ಕೆಲ ಆಟಗಾರರ ಕನಸು ನನಸಿನ ಜೊತೆಗೆ ಕೆಲವರಿಗೆ ಜಾಕ್ಪಾಟ್ ಹೊಡೆದಿದೆ.
ಸಾಯಿ ಸುದರ್ಶನ್, ಆರ್ಶ್ದೀಪ್ಗೆ ಚೊಚ್ಚಲ ಟೆಸ್ಟ್ ಟಿಕೆಟ್..!
ಸಾಯಿ ಸುದರ್ಶನ್, ಆರ್ಶ್ದೀಪ್ ಸಿಂಗ್.. ಟೆಸ್ಟ್ ತಂಡಕ್ಕೆ ಎಂಟ್ರಿ ನೀಡಿರುವ ಹೊಸ ಆಟಗಾರರು. ದೇಶಿ ಕ್ರಿಕೆಟ್ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಸಾಯಿ ಸುದರ್ಶನ್, ಕೌಂಟಿ ಕ್ರಿಕೆಟ್ನಲ್ಲಿ ಆಡಿದ 5 ಪಂದ್ಯಗಳಿಂದ 1 ಶತಕ, 1 ಅರ್ಧಶತಕ ಒಳಗೊಂಡ 281 ರನ್ ಗಳಿಸಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಕನ್ಸಿಸ್ಟೆನ್ಸಿ ಆಟಕ್ಕೆ ಕೇರ್ ಆಫ್ ಅಡ್ರೆಸ್ ಆಗಿರುವ ಸಾಯಿ ಸುದರ್ಶನ್ಗೆ ಟೆಸ್ಟ್ ತಂಡದ ಬುಲಾವ್ ಸಿಕ್ಕಿದೆ.
ಇದನ್ನೂ ಓದಿ: 6, 6, 6, 6, 6, 6, 6, 6, 6; ಸ್ಫೋಟಕ ಸೆಂಚುರಿ ಬಾರಿಸಿದ ಕ್ಲಾಸೆನ್.. ಕೆಕೆಆರ್ಗೆ 278 ರನ್ ಟಾರ್ಗೆಟ್ ಕೊಟ್ಟ SRH
ಟೀಮ್ ಇಂಡಿಯಾ ಪರ ಏಕದಿನ ಹಾಗೂ ಟಿ20 ತಂಡವನ್ನು ಪ್ರತಿನಿದಿಸಿದ್ದ ಆರ್ಶ್ದೀಪ್ಗೆ ಬಿಸಿಸಿಐ, ಇಂಗ್ಲೆಂಡ್ ಪ್ರವಾಸ ಟಿಕೆಟ್ ನೀಡಿದೆ. ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಟೇಕರ್ ಆಗಿರುವ ಆರ್ಶ್ದೀಪ್, ಪ್ರಸಕ್ತ ಐಪಿಎಲ್ನಲ್ಲೂ ಗಮನಾರ್ಹ ಪ್ರದರ್ಶನ ನೀಡಿ ಆಯ್ಕೆ ಸಮಿತಿಯ ಮನ ಗೆದ್ದಿದ್ದಾರೆ. ಇದೇ ಕಾರಣಕ್ಕೆ ವೈಟ್ ಬಾಲ್ ಟು ರೆಡ್ ಬಾಲ್ ಕ್ರಿಕೆಟ್ಗೆ ಪ್ರಮೋಷನ್ ಸಿಕ್ಕಿದೆ.
ಕರುಣ್ ನಾಯರ್, ಶಾರ್ದೂಲ್ ಠಾಕೂರ್ಗೆ ಬಂಪರ್..!
ಕರುಣ್ ನಾಯರ್ ಮತ್ತು ಶಾರ್ದೂಲ್ ಠಾಕೂರ್.. ಇಂಗ್ಲೆಂಡ್ ಪ್ರವಾಸದ ಟಿಕೆಟ್ ರೇಸ್ನಲ್ಲಿದ್ದ ಮೊದಲಿಗರು ಅನ್ನೋದ್ರಲ್ಲಿ ಡೌಟೇ ಇಲ್ಲ. ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಿಂದ 863 ರನ್ ಕೊಳ್ಳೆ ಹೊಡೆದಿದ್ದ ಕರುಣ್ ಮೇಲೆ ಸೆಲೆಕ್ಷನ್ ಕಮಿಟಿ ಕೃಪೆ ತೋರಿದೆ. ಇದರೊಂದಿಗೆ 7 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ಧಾರೆ. ಅತ್ತ ರಣಜಿಯಲ್ಲಿ 35 ವಿಕೆಟ್ ಉರುಳಿಸಿದ್ದ ಶಾರ್ದೂಲ್, ಒಂದೂವರೆ ವರ್ಷದ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಹುಸಿಯಾಯ್ತು ಶಮಿ, ಸರ್ಫರಾಜ್ ಖಾನ್ ನಿರೀಕ್ಷೆ..!
ಇಂಗ್ಲೆಂಡ್ ಪ್ರವಾಸದ ನಿರೀಕ್ಷೆಯಲ್ಲಿದ್ದ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್ ಬಿಸಿಸಿಐ ಶಾಕ್ ನೀಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಯ ಕಾರಣಕ್ಕೆ ಟೆಸ್ಟ್ ತಂಡದಲ್ಲಿ ಚಾನ್ಸ್ ಸಿಗುವ ಲೆಕ್ಕಾಚಾರದಲ್ಲಿದ್ದ ಸರ್ಫರಾಜ್ ಖಾನ್, ಇಂಗ್ಲೆಂಡ್ ಪ್ರವಾಸಕ್ಕಾಗಿಯೇ ದೇಹದ ತೂಕ ಇಳಿಸಿ, ಪ್ರತಿ ದಿನ ಸ್ಪೆಷಲ್ ಪ್ರ್ಯಾಕ್ಟೀಸ್ ಮಾಡ್ತಿದ್ದರು. ಆದ್ರೀಗ ಸರ್ಫರಾಜ್ ಖಾನ್ ಕನಸಿಗೆ ಸೆಲೆಕ್ಷನ್ ಕಮಿಟಿ ತಣ್ಣೀರು ಎರಚಿದೆ.
ಇದನ್ನೂ ಓದಿ: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್ಗೆ ಭಾರೀ ಮುಖಭಂಗ!
ಸರ್ಫರಾಜ್ ಖಾನ್ಗೆ ಮಾತ್ರವಲ್ಲ. ಸೇನಾ ರಾಷ್ಟ್ರಗಳಲ್ಲಿ ಅದ್ಬುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದ ಮೊಹಮ್ಮದ್ ಶಮಿಗೂ ಕೊಕ್ ನೀಡಿರುವ ಸೆಲೆಕ್ಷನ್ ಕಮಿಟಿ, ಯುವ ಆಟಗಾರರಿಗೆ ಮಣೆ ಹಾಕುವ ಮೂಲಕ ಟೆಸ್ಟ್ ತಂಡದಿಂದ ಗೇಟ್ ಪಾಸ್ ನೀಡಿರುವ ಸಂದೇಶ ರವಾನಿಸಿದೆ.
ಯಾಱರಿಗೆ ಕೊಕ್..?
ಆಸ್ಟ್ರೇಲಿಯಾ ಸರಣಿಯಲ್ಲಿ ಅವಕಾಶ ಪಡೆದಿದ್ದ ದೇವದತ್ ಪಡಿಕ್ಕಲ್ಗೆ ಇಂಜುರಿ ಕಾರಣಕ್ಕೆ ಕೊಕ್ ನೀಡಿರುವ ಸೆಲೆಕ್ಷನ್ ಕಮಿಟಿ, ವೈಫಲ್ಯದ ಕಾರಣಕ್ಕೆ ಹರ್ಷಿತ್ ರಾಣಾಗೆ ತಂಡದಿಂದ ಹೊಗಿಟ್ಟಿದೆ. ಇನ್ನು ಇಂಗ್ಲೆಂಡ್ ಕಂಡೀಷನ್ಸ್ನಲ್ಲಿ ಅಕ್ಷರ್ ಪಟೇಲ್ ಅವಶ್ಯಕತೆ ಇಲ್ಲದ ಕಾರಣಕ್ಕೆ ತಂಡದಿಂದ ಕೈಬಿಟ್ಟಿರುವ ಸೆಲೆಕ್ಷನ್ ಕಮಿಟಿ, ಶ್ರೇಯಸ್ ಅಯ್ಯರ್ಗೂ ಕೊಕ್ ನೀಡಿದೆ.
ಇಂಗ್ಲೆಂಡ್ ಪ್ರವಾಸದ ಕನಸಿನಲ್ಲಿದ್ದ ಕೆಲ ಆಟಗಾರರಿಗೆ ಶಾಕ್ ನೀಡಿರುವ ಸೆಲೆಕ್ಷನ್ ಕಮಿಟಿ, ದೇಶಿ ಕ್ರಿಕೆಟ್ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಆಟಗಾರರಿಗೆ ಮಣೆಹಾಕಿದೆ. ಅಷ್ಟೇ ಅಲ್ಲ.! ಈ ಹಿಂದಿನ ಸರಣಿಯಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆಯೂ ಕೆಲ ಅನುಭವಿ ಆಟಗಾರರನ್ನ ಹೊರಗಿಟ್ಟಿರುವ ಸೆಲೆಕ್ಷನ್ ಕಮಿಟಿ, ಅಳೆದು ತೂಗಿಯೇ ತಂಡವನ್ನು ಆಯ್ಕೆ ಮಾಡಿರುವುದು ಸುಳ್ಳಲ್ಲ.
ಇದನ್ನೂ ಓದಿ: ಮಳೆಯೋ ಮಳೆ.. ಕರ್ನಾಟಕದಲ್ಲಿ ನಿನ್ನೆ ಮಳೆರಾಯ ಏನೆಲ್ಲ ಅನಾಹುತ ಮಾಡಿದ್ದಾನೆ..? Photos
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ