/newsfirstlive-kannada/media/post_attachments/wp-content/uploads/2024/10/Team-India-2.jpg)
ಇತ್ತೀಚೆಗೆ ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 290ಕ್ಕೂ ಹೆಚ್ಚು ರನ್​​ಗಳಿಂದ ಗೆದ್ದು ವಿಶ್ವದಾಖಲೆ ಬರೆದಿದ್ದ ಟೀಮ್​​ ಇಂಡಿಯಾ 2ನೇ ಮ್ಯಾಚ್​​ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಗ್ಗರಿಸಿದೆ. ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಬರೋಬ್ಬರಿ 20 ವರ್ಷಗಳ ನಂತರ ತವರಿನಲ್ಲೇ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ವಿರುದ್ಧ 3-0 ಅಂತರದಿಂದ ಟೆಸ್ಟ್​ ಸೀರೀಸ್​ನಲ್ಲಿ ವೈಟ್​ ವಾಶ್​ ಆಗಿದೆ.
ಇನ್ನು, ಈ ಸೋಲಿನೊಂದಿಗೆ ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 4 ಪಂದ್ಯ ಗೆಲ್ಲಲೇಬೇಕಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಗೆದ್ದರಷ್ಟೇ ಫೈನಲ್​ಗೆ ಸುಗಮವಾಗಿ ಅರ್ಹತೆ ಪಡೆಯಲ್ಲಿದೆ. ಇಲ್ಲದಿದ್ದರೆ, ಮೂರನೇ ಬಾರಿಗೆ ಫೈನಲ್ ಆಡುವ ಟೀಮ್​ ಇಂಡಿಯಾ ಕನಸು ಭಗ್ನಗೊಳ್ಳಲಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಒಂದಿದೆ.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ. ಇವರು ಎದುರಾಳಿಗಳನ್ನು ಕಾಡುವ ಪೇಸರ್. ಶಮಿ ಟೀಮ್ ಇಂಡಿಯಾಗೆ ಯಾವಾಗ ಕಮ್​​ಬ್ಯಾಕ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಶಮಿ ತಂಡ ಸೇರುವುದು ಯಾವಾಗ?
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಬೌಲಿಂಗ್​ ನೋಡಲು ಅಭಿಮಾನಿಗಳು ಎದುರು ನೋಡುತ್ತಿದೆ. ಶಮಿ ಮುಂದಿನ ಎರಡು ಟೆಸ್ಟ್‌ಗಳಿಗೆ ತಂಡವನ್ನು ಸೇರುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಶಮಿಗೆ ತೂಕ ಇಳಿಸುವಂತೆ ಸೂಚಿಸಿತ್ತು. ಈ ಬಗ್ಗೆ ಸದ್ಯ ಅಪ್ಡೇಟ್​​ ಸಿಕ್ಕಿದ್ದು, ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳ ಪಡಬೇಕಿದೆ. ಇವರ ಫಿಟ್ನೆಸ್ ವರದಿಗಾಗಿ ಬಿಸಿಸಿಐ ಕಾಯುತ್ತಿದೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಿಟ್ ಈಗಾಗಲೇ ಆಸ್ಟ್ರೇಲಿಯಾಗೆ ಬಂದಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಬಳಿಕ ಇವರು ಆಸ್ಟ್ರೇಲಿಯಾ ಫ್ಲೈಟ್​​ ಹತ್ತಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ