/newsfirstlive-kannada/media/post_attachments/wp-content/uploads/2024/11/TEAM-INDIA-6.jpg)
ಗಾಯದಿಂದ ಚೇತರಿಸಿಕೊಂಡು ಸುಮಾರು ಒಂದು ವರ್ಷದ ನಂತರ ವೇಗದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್​ಗೆ ಮರಳಿದ್ದಾರೆ.
ಪುನರಾಗಮನ ಪಂದ್ಯದಲ್ಲಿ ಶಮಿ 7 ವಿಕೆಟ್ ಪಡೆದು ತಂಡಕ್ಕೆ ರೋಮಾಂಚಕ ಗೆಲುವು ತಂದುಕೊಟ್ಟರು. ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡುತ್ತಿರುವ ಅವರು ಮಧ್ಯಪ್ರದೇಶದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಮೊದಲು, ಅವರು ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಮೈದಾನಕ್ಕೆ ಇಳಿದಿದ್ದರು.
ಮಧ್ಯಪ್ರದೇಶ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದರು. ಶಮಿ ಅವರ ಅದ್ಭುತ ಬೌಲಿಂಗ್​ ನೆರವಿನಿಂದ ಬಂಗಾಳ ತಂಡವು ಮಧ್ಯಪ್ರದೇಶವನ್ನು 11 ರನ್​ಳಿಂದ ಸೋಲಿಸಿತು.
ಇದನ್ನೂ ಓದಿ: ಅಭಿಮಾನಿಗಳಿಗೆ, ಬಿಸಿಸಿಐಗೆ ಕೈಮುಗಿದು ಕ್ಷಮೆ ಕೇಳಿದ ಮೊಹ್ಮದ್ ಶಮಿ; ಏನಾಯ್ತು..?
/newsfirstlive-kannada/media/post_attachments/wp-content/uploads/2023/11/SHAMI-7.jpg)
ನವೆಂಬರ್ 22ರಿಂದ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. ಕೌಟುಂಬಿಕ ಕಾರಣ ಕ್ಯಾಪ್ಟನ್ ರೋಹಿತ್ ಅವರು ಇನ್ನೂ ಪರ್ತ್​​ಗೆ ಹೋಗಿಲ್ಲ. ಮೊದಲ ಪಂದ್ಯವನ್ನು ರೋಹಿತ್ ಅವರೇ ಮುನ್ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಶೀಘ್ರದಲ್ಲಿ ಶರ್ಮಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳಸಲಿದ್ದಾರೆ. ರೋಹಿತ್ ಜೊತೆ ಶಮಿ ಕೂಡ ಆಸ್ಟ್ರೇಲಿಯಾಗೆ ಹೋಗಲಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us