Advertisment

6 ವಿಕೆಟ್​ ಉರುಳಿಸಿ ಸಂಭ್ರಮ; ಸಿರಾಜ್, ಆಕಾಶ್​ ದೀಪ್ ಹೊಡೆತಕ್ಕೆ ನಡುಗಿದ ಬ್ರಿಟಿಷರು, ಆಲೌಟ್!

author-image
Bheemappa
Updated On
ಸ್ಟಾರ್​​​​​​​​​ ಗಿರಿ ಮುಂದೆ ಉಳಿದವ್ರು ಕಣ್ಮರೆ.. ಸಿರಾಜ್, ಜೈಸ್ವಾಲ್ ಬಗ್ಗೆ ಗಂಗೂಲಿ ಮಹತ್ವದ ಹೇಳಿಕೆ..!
Advertisment
  • ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಎಷ್ಟು ರನ್​ ಮುನ್ನಡೆ ಪಡೆದಿದೆ?
  • ಇಂಗ್ಲೆಂಡ್ ಪರ ಸೆಂಚುರಿ ಸಿಡಿಸಿರುವ ಹ್ಯಾರಿ ಬ್ರೂಕ್ ಹಾಗೂ ಜೇಮೀ ಸ್ಮಿತ್
  • ಸಿರಾಜ್, ಆಕಾಶ್​ ಬೌಲಿಂಗ್​​ಗೆ ಹೆದರಿ ಇಂಗ್ಲೆಂಡ್​ ಪೆವಿಲಿಯನ್ ಪರೇಡ್​

ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್​ ದೀಪ್​ ಮಾರಕ ಬೌಲಿಂಗ್​​ಗೆ ಇಂಗ್ಲೆಂಡ್ ಬ್ಯಾಟ್ಸ್​​ಮನ್​ಗಳು ಬೆದರಿ ಪೆವಿಲಿಯನ್ ಪರೇಡ್ ನಡೆಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ 407 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿದ್ದರಿಂದ ಟೀಮ್ ಇಂಡಿಯಾ 180 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

Advertisment

ಬರ್ಮಿಂಗ್ಹ್ಯಾಮ್​​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್​​ ಗಿಲ್ ಅವರ ದ್ವಿಶತಕದಿಂದ 587 ರನ್​ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿರುವ ಇಂಗ್ಲೆಂಡ್​ 407 ರನ್​ಗೆ ಆಲೌಟ್​ ಆಗಿದೆ. ಇದರಲ್ಲಿ ಹ್ಯಾರಿ ಬ್ರೂಕ್ 158 ಹಾಗೂ ಜೇಮೀ ಸ್ಮಿತ್ 184 ರನ್​ಗಳು ಸೇರಿವೆ.

ಇಂಗ್ಲೆಂಡ್​ ತಂಡದ ಬ್ಯಾಟರ್​ಗಳ ಮೇಲೆ ಬಿರುಸಿನ ದಾಳಿ ಮಾಡಿದ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್​ ಪರಾಕ್ರಮ ಮೆರೆದರು. ಟೀಮ್ ಇಂಡಿಯಾದಲ್ಲಿ ಜಸ್​​ಪ್ರಿತ್ ಬೂಮ್ರಾ ಅನುಪಸ್ಥಿತಿಯಲ್ಲಿ ಈ ಇಬ್ಬರು ದೊಡ್ಡ ಮಟ್ಟದಲ್ಲಿ ನೆರವಾದರು. ಇನ್ನಿಂಗ್ಸ್​ನ 2ನೇ ದಿನದಿಂದಲೇ ವಿಕೆಟ್​ ರುಚಿ ನೋಡಿದ್ದ ಸಿರಾಜ್​ ಮೂರನೇ ದಿನವೂ 5 ವಿಕೆಟ್​ಗಳನ್ನ ಉರುಳಿಸಿದರು.

ಇದನ್ನೂ ಓದಿ: ಬಾಲಕನನ್ನ 50 ಸಲ ಲೈಂಗಿಕವಾಗಿ ಬಳಸಿಕೊಂಡ ಟೀಚರ್.. ಕೋರ್ಟ್​​ನಲ್ಲಿ ಏನಾಯ್ತು?

Advertisment

publive-image

ಓಪನರ್ ಝಾಕ್ ಕ್ರಾಲಿ, ಜೋ ರೂಟ್, ಕ್ಯಾಪ್ಟನ್ ಸ್ಟೋಕ್ಸ್​, ಬ್ರೈಡನ್ ಕಾರ್ಸೆ, ಜೋಶ್​ ಟಂಗ್​​ ಹಾಗೂ ಶೋಯೆಬ್ ಬಶೀರ್​ರನ್ನ ಪೆವಿಲಿಯನ್​ಗೆ ಅಟ್ಟಿದರು. ವಿಶೇಷ ಎಂದರೆ ಬ್ರೈಡನ್ ಕಾರ್ಸೆ, ಜೋಶ್​ ಟಂಗ್​​ ಹಾಗೂ ಶೋಯೆಬ್ ಬಶೀರ್​ ಈ ಮೂವರನ್ನು ಸಿರಾಜ್ ಡಕೌಟ್​ ಮಾಡಿ ಎಲ್ಲರ ಗಮನ ಸೆಳೆದರು.

ಇನ್ನು ಮೊಹಮ್ಮದ್ ಸಿರಾಜ್​ ಉತ್ತಮ ಸಾಥ್ ಕೊಟ್ಟ ಆಕಾಶ್ ದೀಪ್ ಬೆಂಕಿ ಬೌಲಿಂಗ್ ಮಾಡಿದರು. ಇನ್ನಿಂಗ್ಸ್​ನ ಆರಂಭದಲ್ಲೇ ಇಂಗ್ಲೆಂಡ್​ಗೆ ಬಿಗ್ ಶಾಕ್ ಕೊಟ್ಟಿದ್ದರು. ಆಲಿ ಪೋಪ್ ಹಾಗೂ ಡಕೆಟ್ ಇಬ್ಬರನ್ನು ಶೂನ್ಯಕ್ಕೆ ಔಟ್​ ಮಾಡಿದ್ದರು. 158 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದ್ದ ಹ್ಯಾರಿ ಬ್ರೂಕ್​ಗೆ ಬಿಗ್​ ಬ್ರೇಕ್ ಹಾಕಿದ್ದೇ ಆಕಾಶ್ ದೀಪ್. ಕ್ರಿಸ್ ವೋಕ್ಸ್​​ರನ್ನ ಔಟ್ ಮಾಡಿ ಸಂಭ್ರಮಿಸಿದರು. ಸಿರಾಜ್, ಆಕಾಶ್​ ಬೌಲಿಂಗ್​ ನೆರವಿನಿಂದ ಟೀಮ್ ಇಂಡಿಯಾ 180 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.

2ನೇ ಇನ್ನಿಂಗ್ಸ್​ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ ಓಪನರ್ಸ್​ ಈಗಾಗಲೇ ಯಶಸ್ವಿ ಜೈಸ್ವಾಲ್​ 28 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. 64 ರನ್​ಗೆ 1 ವಿಕೆಟ್​ ಕಳೆದುಕೊಂಡ ಭಾರತದ ಪರ ಕ್ರೀಸ್​ನಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ (28) ಹಾಗೂ ಕರುಣ್ ನಾಯರ್ (07) ಇದ್ದು ಇಂದು ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನು ಟೀಮ್ ಇಂಡಿಯಾ ಒಟ್ಟು 244 ರನ್​ಗಳ ಲೀಡ್​ ಪಡೆದು ಬ್ಯಾಟಿಂಗ್ ಮಾಡುತ್ತಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment