/newsfirstlive-kannada/media/post_attachments/wp-content/uploads/2025/01/SIRAJ-1.jpg)
ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ? ಹೀಗಂತ ಸೋಶಿಯಲ್​​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಆ ಸ್ಟಾರ್​ಕಿಡ್​​ ಜೊತೆಗಿನ ಫೋಟೋ. ಅಷ್ಟಕ್ಕೂ ಸಿರಾಜ್​ ಮನಗೆದ್ದ ಚೆಲುವೆ ಯಾರು?.
ಮೊಹಮ್ಮದ್​ ಸಿರಾಜ್​ ಟೀಮ್​ ಇಂಡಿಯಾ ಸ್ಟಾರ್​​ ವೇಗಿ. ಟೆನ್ನಿಸ್​​ ಬಾಲ್​ ಕ್ರಿಕೆಟರ್​ ಆಗಿದ್ದ ಸಿರಾಜ್​ ಇಂದು ಟೀಮ್​​ ಇಂಡಿಯಾದ ಸೂಪರ್​ ಸ್ಟಾರ್​ ಪ್ಲೇಯರ್​​. ಇಷ್ಟು ದಿನ ಕ್ರಿಕೆಟ್​ ಫೀಲ್ಡ್​ನಲ್ಲಿ ಸದ್ದು ಮಾಡ್ತಿದ್ದ ಸಿರಾಜ್​ ಈಗ ಆಫ್​ ದಿ ಫಿಲ್ಡ್​​ನಲ್ಲೂ ಸಖತ್​​ ಸೌಂಡ್​ ಮಾಡ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/01/SIRAJ_LOVE_1.jpg)
ಆಶಾ ಭೋಸ್ಲೆ ಮೊಮ್ಮಗಳ ಜೊತೆ ಸಿರಾಜ್​ ಡೇಟಿಂಗ್​ ಸುದ್ದಿ
ಕಳೆದೆರೆಡು ದಿನಗಳಿಂದ ಮೊಹಮ್ಮದ್​ ಸಿರಾಜ್​ ಹೆಸರು ಸಖತ್​ ಸೌಂಡ್​ ಮಾಡುತ್ತಿದೆ. ಟೀಮ್​ ಇಂಡಿಯಾ ವೇಗಿ ಲೆಜೆಂಡರಿ ಸಿಂಗರ್​​​ ಆಶಾ ಭೋಸ್ಲೆ ಮೊಮ್ಮಗಳ ಜೊತೆ ಡೇಟಿಂಗ್​ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಂದ್ಹಾಗೆ ಸಿರಾಜ್​​ ಜೊತೆಗೆ ತಳುಕು ಹಾಕಿಕೊಂಡಿರೊ ಬೆಡಗಿಯ ಹೆಸರು ಜನೈ ಭೋಸ್ಲೆ (Zanai Bhosle).
ಇದೇ ಬೆಡಗಿಯ ಜೊತೆಗೆ ಸದ್ಯ ಸಿರಾಜ್​ ಹೆಸರು ಸುದ್ದಿಯಲ್ಲಿದೆ. ಈಕೆ ಭಾರತದ ಲೆಜೆಂಡರಿ ಸಿಂಗರ್​​ ಆಶಾ ಭೋಸ್ಲೆ ಮೊಮ್ಮಗಳು. ನಟಿ ಹಾಗೂ ಸಿಂಗರ್​ ಆಗಿರುವ ಜನೈ ಇತ್ತೀಚೆಗೆ ತಮ್ಮ ಬರ್ತಡೇಯನ್ನ ಅದ್ಧೂರಿಯಾಗಿ ಆಚರಿಸಿಕೊಂಡರು.. ಬರ್ತಡೇ ಪಾರ್ಟಿಯಲ್ಲಿ ಸಾಕಷ್ಟು ಸೆಲೆಬ್ರಿಟಿಸ್​ಗಳು ಭಾಗವಹಿಸಿದ್ದರು. ಆದ್ರೆ, ಜನೈ ಸಿರಾಜ್ ಜೊತೆಗಿನ ಫೋಟೋವನ್ನ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಟೀಂ ಇಂಡಿಯಾದ ಡಿಎಸ್​​ಪಿ ಸಾಬ್​ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಗಾಸಿಪ್​ ಜೋರಾಗಿ ಕೇಳಿ ಬರ್ತಿದೆ.
ಇದನ್ನೂ ಓದಿ: ದಳಪತಿ ವಿಜಯ್ ಫ್ಯಾನ್ಸ್‌ಗೆ ಖುಷಿ ಸುದ್ದಿ.. 69ನೇ ಸಿನಿಮಾ ‘ಜನ ನಾಯಗನ್’ ಸ್ಪೆಷಾಲಿಟಿ ಏನು?
/newsfirstlive-kannada/media/post_attachments/wp-content/uploads/2025/01/SIRAJ_LOVE_2.jpg)
ನಾವಿಬ್ರು ಅಣ್ಣ-ತಂಗಿ.. ವದಂತಿ ಬಗ್ಗೆ ಸಿರಾಜ್​​ ಸ್ಪಷ್ಟನೆ
ಇನ್ನು, ಜನೈ ಭೋಸ್ಲೆ ಜೊತೆ ಸಿರಾಜ್ ಇರುವ ಫೋಟೊವೊಂದು ವೈರಲ್ ಆಗ್ತಿದ್ದಂತೆ. ಸಿರಾಜ್​ ಹಾಗೂ ಜನೈ ಇಬ್ಬರು ಗಾಸಿಪ್​ಗಳಿಗೆ ಬ್ರೇಕ್​ ಹಾಕಿದ್ದಾರೆ. ನಾವಿಬ್ಬರು ಅಣ್ಣ-ತಂಗಿ ಇದ್ದಂತೆ ಅಂತ ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲಿ ಪೋಸ್ಟ್​​​ ಹಾಕಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸದ್ಯ, ಚಾಂಪಿಯನ್​ ಟ್ರೋಫಿಯಿಂದ ಹೊರಗುಳಿದಿರುವ ಸಿರಾಜ್​​, ಟೀಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಲು ಕಸರತ್ತು ನಡೆಸ್ತಿದ್ದಾರೆ. ಈ ನಡುವೆ ಗಾಸಿಪ್ ಬಗ್ಗೆ ಸಿರಾಜ್​ ಸ್ಪಷ್ಟನೆ ಕೊಟ್ಟು ತಮ್ಮ ಕರಿಯರ್​ ಮೇಲೆ ಫೋಕಸ್​​ ಮಾಡಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us