/newsfirstlive-kannada/media/post_attachments/wp-content/uploads/2025/04/Siraj-2.jpg)
ನಿನ್ನೆ ನಡೆದ ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಮೊಹ್ಮದ್ ಸಿರಾಜ್ ಅವರು ಗುಜರಾತ್ ಟೈಟನ್ಸ್ ಪರ ಅದ್ಭುತ ಆಟವಾಡಿದರು. ತಮ್ಮ ಕೋಟಾದ ನಾಲ್ಕು ಓವರ್​ಗಳಲ್ಲಿ 4.80 ಎಕನಾಮಿಕ್ ರೇಟ್​​ನಲ್ಲಿ ಕೇವಲ 19 ರನ್​ ನೀಡಿ, ಮೂರು ವಿಕೆಟ್ ಪಡೆದರು. ಪಂದ್ಯ ಮುಗಿದ ನಂತರ ವಿಶೇಷ ಗೌರವಕ್ಕೆ ಪಾತ್ರರಾದರು.
ಇದೇ ವೇಳೆ ಮಾತನಾಡಿರುವ ಸಿರಾಜ್, ಕಳೆದ ಏಳು ವರ್ಷಗಳಿಂದ ನಾನು ಆರ್​​ಸಿಬಿ ಪರ ಆಡುತ್ತಿದ್ದೆ. ಹಾಗಾಗಿ ಸಹಜವಾಗಿಯೇ ಭಾವುಕನಾದೆ. ಯಾವಾಗ ಗಿಲ್ ಅವರು ನನ್ನ ಕೈಗೆ ಬಾಲ್ ನೀಡಿದರೋ ಆಗ ಕಾಮನ್ ಆದೆ. ನಾನು ನಿರಂತರವಾಗಿ ಪಂದ್ಯಗಳನ್ನು ಆಡಿದೆ. ಆದ್ದರಿಂದ ಯಾವ ತಪ್ಪುಗಳನ್ನು ಮಾಡ್ತಿದ್ದೇನೆಂದು ಅರ್ಥವಾಗಲಿಲ್ಲ. ಬಿಡುವು ಸಿಕ್ಕಾಗ ಬೌಲಿಂಗ್ ಮತ್ತು ಫಿಟ್‌ನೆಸ್‌ನತ್ತ ಗಮನಹರಿಸಿದೆ.
ಇದನ್ನೂ ಓದಿ: ಆರ್​ಸಿಬಿಗೆ ತವರಿನಲ್ಲಿ ಮುಖಭಂಗ.. ಹೀನಾಯ ಸೋಲಿಗೆ ಕ್ಯಾಪ್ಟನ್ ಪಾಟೀದಾರ್ ಕೊಟ್ಟ ಕಾರಣ ಏನು..?
ಗುಜರಾತ್ ಟೈಟಾನ್ಸ್‌ಗೆ ಸೇರಿದಾಗ ಆಶಿಶ್ ನೆಹ್ರಾ ಭಾಯ್ ಜೊತೆ ಮಾತನಾಡಿದೆ. ನಿಮ್ಮ ಆಟವನ್ನು ಆನಂದಿಸಿ, ಮಾಡಬೇಕಾದ ಕೆಲಸ ಮಾಡಿ ಎಂದರು. ನಾನು ತಂಡದಲ್ಲಿರುವ ಇತರ ಬೌಲರ್‌ಗಳಾದ ರಬಾಡ, ಇಶಾಂತ್ ಮತ್ತು ಇತರೆ ಬೌಲರ್‌ಗಳೊಂದಿಗೆ ಮಾತನಾಡುತ್ತೇನೆ. ಅವರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇನೆ. ಅದು ನನಗೆ ನಿಜವಾಗಿಯೂ ಸಹಾಯಕ್ಕೆ ಬರುತ್ತಿದೆ. ಒಬ್ಬ ಬೌಲರ್ ಆಗಿ ಯಾವಾಗಲೂ ಆತ್ಮವಿಶ್ವಾಸ ಹೊಂದಲು ಬಯಸುತ್ತೇನೆ. ಇದು ಪ್ರಮುಖ ವಿಷಯ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ