/newsfirstlive-kannada/media/post_attachments/wp-content/uploads/2025/07/siraj_KOHLI.jpg)
ಮೊಹಮ್ಮದ್ ಸಿರಾಜ್ ಈತನ ಹೆಸರಲ್ಲೇ ರಾಜನಿದ್ದಾನೆ. ಆದ್ರೆ, ಟೀಮ್ ಇಂಡಿಯಾಗೆ ಮಾತ್ರ ಈತ ರಾಜನಲ್ಲ. ಟೀಮ್ ಇಂಡಿಯಾಗಿರಲಿ ಬೌಲಿಂಗ್ ಅಟ್ಯಾಕ್​ನ ರಾಜನಾಗಬೇಕಿದ್ದವ, ಬರ್ತಾ ಬರ್ತಾ, ರಾಜನ ಕುದುರೆ ಕತ್ತೆಯಾಯ್ತು ಎಂಬ ಗಾದೆ ಮಾತಿನಂತಾಗ್ತಿದ್ದಾನೆ. ಅದ್ಯಾಕೆ ಈ ಮಾತು ಅಂತೀರಾ?.
ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಸಿಡಿಗುಂಡು. ಜಸ್​ಪ್ರೀತ್ ಬೂಮ್ರಾ ಅಲಭ್ಯತೆಯಲ್ಲಿ ಈತನೇ ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್​​ನ ಪ್ರಬಲ ಅಸ್ತ್ರ. ಕಿಂಗ್ ಕೊಹ್ಲಿಯ ನಾಯಕತ್ವದಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ನೀಡಿದ್ದ ಈ ಹೈದ್ರಾಬಾದ್ ಎಕ್ಸ್​ಪ್ರೆಸ್​, ಆಸ್ಟ್ರೇಲಿಯಾದಲ್ಲಿ ಮಿಂಚಿನ ದಾಳಿ ನಡೆಸಿದ್ದರು. ಡೆಡ್ಲಿ ಬೌಲಿಂಗ್​ನಿಂದ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಪೇಸರ್.
ಅಗ್ರೆಸ್ಸಿವ್ ಅಟಿಟ್ಯೂಡ್​.. ಮಾರಕ ದಾಳಿಯಿಂದಲೇ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್​ ಆಗಿದ್ದ ಸಿರಾಜ್, ನೋಡ ನೋಡ್ತಾನೇ ಸೂಪರ್ ಸ್ಟಾರ್​ ಆಗಿ ಬೆಳೆದಾತ. ಇದೀಗ ಅದೇ ಬೌಲರ್​, ಫೇವರ್ ಕಂಡೀಷನ್ಸ್​ನಲ್ಲೇ ವಿಕೆಟ್ ಪಡೆಯಲು ಪರದಾಡ್ತಿದ್ದಾನೆ. ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ.
ಇಂಗ್ಲೆಂಡ್​ನಲ್ಲಿ ಮೊಹಮ್ಮದ್ ಸಿರಾಜ್ ಪರದಾಟ..!
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಮುಗಿದಿದೆ. ಆದ್ರೆ, ಇವತ್ತಿಗೂ ಮೊಹಮ್ಮದ್​​​​​​​ ಸಿರಾಜ್​​ ಪರ್ಫಾಮೆನ್ಸ್​ ಎಲ್ಲರನ್ನು ಕಾಡ್ತಿದೆ. ಇಂಗ್ಲೆಂಡ್​ನಲ್ಲಿ ಎದುರಾಳಿ ಪಾಲಿಗೆ ವಿಲನ್ ಆಗಬೇಕಿದ್ದ ಸಿರಾಜ್, ಟೀಮ್ ಇಂಡಿಯಾ ಪಾಲಿಗೆ ಮಾರಕವಾಗಿದ್ದಾರೆ. ಇದಕ್ಕೆ ಕಾರಣ ಲೀಡ್ಸ್​ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್​ರ ಪ್ರದರ್ಶನ.
ಲೀಡ್ಸ್​ ಟೆಸ್ಟ್​ನ 41 ಓವರ್ ಬೌಲಿಂಗ್ ಮಾಡಿದ್ದ ಸಿರಾಜ್, 4.21 ಎಕಾನಮಿಯಲ್ಲಿ ಬರೋಬ್ಬರಿ ನೀಡಿದ್ದು 173 ರನ್​ ಈ ಪೈಕಿ ಪಡೆದಿದ್ದು ಕೇವಲ ಎರಡೇ ಎರಡು ವಿಕೆಟ್. ಇದೇ ಪ್ರದರ್ಶನವೇ ಈಗ ಸಿರಾಜ್​ ವೈಫಲ್ಯಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ. ಅಷ್ಟೇ ಅಲ್ಲ, ಸಿರಾಜ್​ಗೆ ವಿರಾಟ್​ ಕೊಹ್ಲಿಯ ಲಭ್ಯತೆ ಕಾಡ್ತಿದೆಯಾ ಎಂಬ ಅನುಮಾನ ಕಾಡುವಂತೆಯೂ ಮಾಡಿದೆ.
ವಿರಾಟ್​ ಕೊಹ್ಲಿಯ ಅಲಭ್ಯತೆ ಸಿರಾಜ್​​ಗೆ ಕಾಡ್ತಿದೆಯಾ
ವಿರಾಟ್ ಕೊಹ್ಲಿ ತಂಡದಲ್ಲಿದ್ರೆ ಸಾಕು. ಒಂದು ರೀತಿಯ ಕರೆಂಟ್ ಪಾಸ್ ಆಗುತ್ತೆ. ಹೈ ಎನರ್ಜಿ ಇರುತ್ತೆ. ಅದೇ ರೀತಿ ವಿರಾಟ್​​ ತಂಡದಲ್ಲಿದ್ದಾಗ ಸಿರಾಜ್ ಎನರ್ಜಿ ಡಬಲ್ ಆಗುತ್ತೆ. ಇದೇ ಎನರ್ಜಿಯಲ್ಲೇ ಸಿಡಿಗುಂಡಿನ ದಾಳಿ ನಡೆಸುವ ಸಿರಾಜ್, ಫೈರಿ ಸ್ಪೆಲ್​ಗಳ ಮೂಲಕ ಎದುರಾಳಿಗಳನ್ನ ಆಕ್ಷರಶಃ ಕಾಡ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಟ್ರ್ಯಾಕ್ ರೆಕಾರ್ಡ್​.
ಕೊಹ್ಲಿ ಲಭ್ಯತೆಯಲ್ಲಿ ಸಿರಾಜ್ ಪ್ರದರ್ಶನ
ವಿರಾಟ್​ ಕೊಹ್ಲಿ ತಂಡದಲ್ಲಿದ್ದಾಗ ಸಿರಾಜ್, 51 ಇನ್ನಿಂಗ್ಸ್​​ಗಳಿಂದ 81 ವಿಕೆಟ್ ಬೇಟೆಯಾಡಿದ್ದಾರೆ. 29. 04ರ ಸರಾಸರಿ ಹೊಂದಿದ್ದಾರೆ. ಆದ್ರೆ, ವಿರಾಟ್ ಇಲ್ಲದ ಸಿರಾಜ್ ಕಥೆಯೇ ಬೇರೆ.
ಕಿಂಗ್​ ಕೊಹ್ಲಿ ಇಲ್ಲದ ಸಿರಾಜ್ ಅಟ್ಟರ್​ ಫ್ಲಾಪ್..!
ವಿರಾಟ್​ ಕೊಹ್ಲಿ ತಂಡದಲ್ಲಿದ್ದಾಗ ಎದುರಾಳಿ ಮೇಲೆ ಸಿಡಿಗುಂಡಿನಂತೆ ಎರಗ್ತಿದ್ದ ಸಿರಾಜ್, ಡೆಡ್ಲಿ ಸ್ಪೆಲ್ಸ್​ ಮೂಲಕ ಕಾಡಿದ್ದ ಸಿರಾಜ್, ಈಗ ಮಂಕು ಬಡಿದಿದೆ. ಅದು ಯಾವ ಮಟ್ಟಕ್ಕಂತೆ ವಿರಾಟ್​, ಉಪಸ್ಥಿತಿಯ ವೇಳೆ ನೀಡ್ತಿದ್ದ ಪ್ರದರ್ಶನದ ಅರ್ಧದಷ್ಟು ನೀಡಲು ಸಹ ಹರಸಾಹಸ ಮಾಡ್ತಿದ್ದಾರೆ.
ಇದನ್ನೂ ಓದಿ: RSS ಬ್ಯಾನ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ.. ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂದ ಬಿಜೆಪಿ
ಕೊಹ್ಲಿ ಅಲಭ್ಯತೆಯಲ್ಲಿ ಸಿರಾಜ್ ಪ್ರದರ್ಶನ
ವಿರಾಟ್​ ಕೊಹ್ಲಿ ಇಲ್ದೇ 17 ಇನ್ನಿಂಗ್ಸ್​ಗಳನ್ನಾಡಿರುವ ಮೊಹಮ್ಮದ್ ಸಿರಾಜ್​, ಕೇವಲ 19 ವಿಕೆಟ್ ಕಬಳಿಸಿದ್ದಾರೆ. 39.89ರ ಬೌಲಿಂಗ್ ಆ್ಯವರೇಜ್ ಹೊಂದಿದ್ದಾರೆ. ಈ ದಾಖಲೆ ನೋಡಿದ್ರೆ ಸಾಕು. ವಿರಾಟ್ ಇಲ್ದೇ ಸಿರಾಜ್, ಎಫೆಕ್ಟ್​ ಲೆಸ್ ಅನ್ನೋದು ಅರ್ಥವಾಗುತ್ತೆ.
ಸಿರಾಜ್ ಯಶಸ್ಸಿನ ಹಿಂದಿನ ಗುರುವೇ ಕಿಂಗ್ ಕೊಹ್ಲಿ..!
ಸಿರಾಜ್ ಸಕ್ಸಸ್​ ಹಿಂದಿನ ಗುರುವೇ ವಿರಾಟ್​ ಕೊಹ್ಲಿ ಅನ್ನೋದು ಜಗಜ್ಜಾಹೀರು. ಪ್ರತಿ ಹಂತದಲ್ಲಿ ಮೊಹಮ್ಮದ್​ ಸಿರಾಜ್​ ಬೆನ್ನಿಗೆ ನಿಂತವ ವಿರಾಟ್ ಕೊಹ್ಲಿ ಅನ್ನೋದ್ರಲ್ಲಿ ನೋ ಡೌಟ್. ಇದು ಕೇವಲ ನಾಯಕನಾಗಿ ಹೆಚ್ಚು ಅವಕಾಶ ನೀಡಿ ಬೆಂಬಲಕ್ಕೆ ನಿಂತಿದ್ದಲ್ಲ. ಆನ್​ಫೀಲ್ಡ್​ನಲ್ಲಿ ಪ್ರತಿ ಓವರ್​​ ನೀಡ್ತಿದ್ದ ಇನ್​ಪುಟ್ಸ್​, ವಿರಾಟ್ ಕೊಹ್ಲಿ ನೀಡ್ತಿದ್ದ ಬೆಂಬಲ. ಉರಿದುಂಬಿಸುವ ಪರಿಯೂ ಸಿರಾಜ್ ಸಕ್ಸಸ್​ಗೆ ಕಾರಣವಾಗಿತ್ತು. ಇದೀಗ ಆ ಮಾಸ್ಟರ್ ಮೈಂಡ್ ಕೊಹ್ಲಿಯೇ ಇಲ್ಲ. ಅದು ಸಹಜವಾಗೇ ಸಿರಾಜ್, ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗಿದೆ.
ವಿರಾಟ್ ಆಡದ ಪಂದ್ಯಗಳಲ್ಲಿ ಎಫೆಕ್ಟ್ ಲೆಸ್ ಆಗಿರುವ ಸಿರಾಜ್​ಗೆ, ಪ್ರತಿ ಮ್ಯಾಚ್ ಅಗ್ನಿಪರೀಕ್ಷೆಯಾಗಿದ್ದು, ಹೇಗೆ ಓವರ್ ಕಮ್ ಮಾಡ್ತಾರೆ ಅನ್ನೋದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ