ಗುಜರಾತ್​ ತಂಡ ಸೇರಿದ ಮೊಹಮ್ಮದ್ ಸಿರಾಜ್​; ಅಬ್ಬಬ್ಬಾ! ಎಷ್ಟು ಕೋಟಿಗೆ ಸೇಲಾದ್ರು ಗೊತ್ತಾ?

author-image
Ganesh Nachikethu
Updated On
ಟೆಸ್ಟ್​ ಸ್ಪೆಷಲಿಸ್ಟ್ಸ್​​ ಮೇಲೆ ಫ್ರಾಂಚೈಸಿ ಪ್ರೀತಿ.. ಆರ್​ಸಿಬಿಯದ್ದೂ ಅದೇ ಕತೆ.. ಯಾಕೆ ಹೀಗೆ..?
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು
  • ಆರ್​ಸಿಬಿ ಮಾಜಿ ಬೌಲರ್​ ಸಿರಾಜ್​ಗೆ ಗುಜರಾತ್​ ಟೈಟನ್ಸ್​ ಮಣೆ
  • ಕೋಟಿ ಕೋಟಿ ಸುರಿದು ಸಿರಾಜ್​ ಖರೀದಿ ಮಾಡಿದ ಗುಜರಾತ್​!

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜು ನಡೆಯುತ್ತಿದೆ. ಆರ್​ಸಿಬಿ ತಂಡದ ಸ್ಟಾರ್​ ಬೌಲರ್ ಮೊಹಮ್ಮದ್​ ಸಿರಾಜ್​ ಅವರನ್ನು ಬರೋಬ್ಬರಿ 12.25 ಕೋಟಿ ನೀಡಿ ಗುಜರಾತ್​ ಟೈಟನ್ಸ್​ ಖರೀದಿ ಮಾಡಿದೆ.

ಭರ್ಜರಿ ಪೈಪೋಟಿ

ಮೆಗಾ ಆಕ್ಷನ್​ಗೆ ಮುನ್ನ ಆರ್​​ಸಿಬಿ ತಂಡ ಮೊಹಮ್ಮದ್​ ಸಿರಾಜ್​ ಅವರನ್ನು ರಿಲೀಸ್ ಮಾಡಿತ್ತು. ಇವರಿಗಾಗಿ ಚೆನ್ನೈ, ರಾಜಸ್ಥಾನ್​ ರಾಯಲ್ಸ್​, ಪಂಜಾಬ್​​, ಗುಜರಾತ್​ ಮಧ್ಯೆ ಪೈಪೋಟಿ ನಡೆಯಿತು. 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಸಿರಾಜ್​ ಅವರು ಕೊನೆಗೂ 12.25 ಕೋಟಿಗೆ ಸೇಲಾದ್ರು.

ಸಿರಾಜ್​​ ಐಪಿಎಲ್​ ಸಾಧನೆ

ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಸಿರಾಜ್​​. ಇವರು ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ 93 ಪಂದ್ಯ ಆಡಿದ್ದು, 93 ವಿಕೆಟ್​ ಪಡೆದಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಸುದೀರ್ಘ ಕಾಲ ಆಡಿರೋ ಇವರು ಅನುಭವಿ ಬೌಲರ್​​ ಕೂಡ ಹೌದು. ಪವರ್​ ಪ್ಲೇ ಮತ್ತು ಡೆತ್​ ಓವರ್​​ನಲ್ಲಿ ಸಮರ್ಥವಾಗಿ ಬೌಲಿಂಗ್​ ಮಾಡಬಲ್ಲರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment