/newsfirstlive-kannada/media/post_attachments/wp-content/uploads/2025/07/SIRAJ_KOHLI-1.jpg)
ಭಾರತದಲ್ಲಿ ಕ್ರಿಕೆಟರ್ಸ್​ಗೆ ಸಿಗೋ ಮಹತ್ವವೇ ಬೇರೆ. ಕ್ರಿಕೆಟರ್​ಗಳು ಕೇವಲ ಕ್ರಿಕೆಟರ್​​ಗಳಲ್ಲ. ಬಿಸಿನೆಸ್​ಮನ್​ಗಳು ಸಹ ಆಗಿದ್ದಾರೆ. ಅದ್ಯಾಕೆ ಈ ಮಾತು ಹೇಳ್ತಿದ್ದೀವಿ ಅಂತೀರಾ, ಇದಕ್ಕೆ ಕಾರಣ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್​.
ಭಾರತದಲ್ಲಿ ಕ್ರಿಕೆಟರ್​​ಗಳಿಗಿರುವ ಕ್ರೇಜ್, ಜನಪ್ರಿಯತೆ​ ಬಗ್ಗೆ ಹೇಳೋದೇ ಬೇಡ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ಸ್ ಆಗಿಬಿಟ್ರೆ, ದುಡ್ಡಿಗೆ ದುಡ್ಡು.. ಕ್ರೇಜ್​ಗೆ ಕ್ರೇಜ್​ ಜೊತೆ ಎಲ್ಲವೂ ಕ್ಯೂ ನಿಲ್ಲುತ್ತೆ. ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ಆಟಗಾರರು, ಸೈಡ್ ಬಿಸಿನೆಸ್ ಮಾಡ್ತಾ ನೂರಾರು ಕೋಟಿ ಗಳಿಸ್ತಾರೆ. ಬ್ಯುಸಿನೆಸ್​​ಮನ್​ ಆಗಿದ್ದಾರೆ. ಈ ಲಿಸ್ಟ್​ಗೆ ಈಗ ಹೊಸ ಸೇರ್ಪಡೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್​.
‘ಜೋಹರ್ಫಾ’ ಹೆಸರಲ್ಲಿ ರೆಸ್ಟೋರೆಂಟ್ ಓಪನ್!
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್, ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಮೈದಾನದಲ್ಲಿ ಅಲ್ಲ. ಮೈದಾನದ ಹೊರಗೆ ಜೋಹರ್ಫಾ ಹೆಸರಿನಲ್ಲಿ ಮೊದಲ ರೆಸ್ಟೋರೆಂಟ್ ಓಪನ್ ಮಾಡಿರುವ ಡಿಎಸ್​​ಪಿ ಸಿರಾಜ್​​, ಈಗ ಬ್ಯುಸಿನೆಸ್​ಮನ್ ಸಿರಾಜ್ ಆಗಿದ್ದಾರೆ. ಹೈದ್ರಾಬಾದ್​​ನ ಬಂಜಾರ ಹಿಲ್ಸ್​, ರೋಡ್​ ನಂಬರ್​ 3ರಲ್ಲಿ ಆರಂಭವಾದ ಈ ರೆಸ್ಟೋರೆಂಟ್, ಈಗ ಪ್ರಮುಖ ಆಕರ್ಷಣೆಯಾಗಿದೆ.
ಹೈದ್ರಾಬಾದ್​ ಸಂಸ್ಕೃತಿ, ರಾಜಮನತವನ್ನೇ ಜೋಹರ್ಫಾ ಪ್ರತಿನಿಧಿಸುವಂತಿದೆ. ರೆಸ್ಟೋರೆಂಟ್​ನ ಒಳಗೆ ಮೊಘಲ್ ಶೈಲಿಯ ಕಮಾನು, ವಿಂಟೇಜ್ ಲ್ಯಾಟಿನ್ಸ್​, ಅತಿಥಿ ಸತ್ಕಾರ ಎಲ್ಲರ ಗಮನ ಸೆಳೆಯುತ್ತೆ. ವೆಜ್, ನಾನ್​ವೆಜ್​ನಿಂದ ಕೂಡಿರುವ ಈ ರೆಸ್ಟೋರೆಂಟ್​ನಲ್ಲಿ ಬಿರಿಯಾನಿ, ಕಬಾಬ್​ ನೀರುರಿಸುತ್ತಂತೆ.
ಈ ಪ್ರಾಜೆಕ್ಟ್​ ಹಿಂದಿದೆ ಕುಟುಂಬಸ್ಥರ ಪ್ರೇರಣೆ..!
ಜೋಹರ್ಫಾ, ಮಾಲೀಕರು ಯಾರು ಅನ್ನೋದು ಗೊತ್ತಿಲ್ದೇ ಎಂಟ್ರಿ ನೀಡುವರಿಗೂ ಸಹ, ಇದು ಸಿರಾಜ್ ಆಪ್ತರದ್ದು ಎಂದ ಸಹಜವಾಗೇ ತಿಳಿಯುತ್ತೆ. ಇದಕ್ಕೆ ಕಾರಣ ಬಿಲ್ ಕೌಂಟರ್ ಬಳಿ ಇರೋ ಸಿರಾಜ್​ ಜರ್ಸಿ. ಇಂಟ್ರೆಸ್ಟಿಂಗ್ ಅಂದ್ರೆ, ಈ ರೆಸ್ಟೋರೆಂಟ್ ಆರಂಭಕ್ಕೆ ಕಾರಣ ಕುಟುಂಬಸ್ಥರು ಎಂಬ ಮಾತಿದೆ. ಕುಟುಂಬಸ್ಥರ ಸಲಹೆಯಂತೆ ಆರಂಭಿಸಿರುವ ಈ ರೆಸ್ಟೋರೆಂಟ್​​​ನ ಸಿರಾಜ್, ಅಣ್ಣ ಮೊಹಮ್ಮದ್ ಇಸ್ಮಾಯಲ್ ನೋಡಿಕೊಳ್ತಾರೆ.
ಸಿರಾಜ್ ಅಲ್ಲ.. ವಿವಿಧ ಕ್ರಿಕೆಟರ್ಸ್​ ನಡೆಸ್ತಿದ್ದಾರೆ ಉದ್ಯಮ!
ಸಿರಾಜ್​ ಮಾತ್ರವಲ್ಲ ವಿರಾಟ್ ಕೊಹ್ಲಿಯು ರೆಸ್ಟೋರೆಂಟ್​ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. 2022ರಲ್ಲಿ ONE8 ಹೆಸರಿನಲ್ಲಿ ಮುಂಬೈನಲ್ಲಿ ರೆಸ್ಟೋರೆಂಟ್ ಓಪನ್ ಮಾಡಿದ್ದ ಕೊಹ್ಲಿ, ಈಗ ಬೆಂಗಳೂರು, ದೆಹಲಿ, ಕೋಲ್ಕತ್ತಾ, ಪುಣೆ ಸೇರಿದಂತೆ ಇತರೆ ಮಹಾ ನಗರಗಳಿಗೂ ಬ್ಯುಸಿನೆಸ್ ವಿಸ್ತರಿಸಿದ್ದಾರೆ. ಈ ರೆಸ್ಟೊರೆಂಟ್​ನಲ್ಲಿ ವಿವಿಧ ದೇಶಗಳ ಪ್ರಸಿದ್ಧ ಖಾದ್ಯಗಳು, ಡ್ರಿಂಕ್ಸ್ ಸರ್ವ್ ಮಾಡಲಾಗುತ್ತೆ.
ಯಾರೆಲ್ಲಾ ನಡೆಸ್ತಿದ್ದಾರೆ ರೆಸ್ಟೋರೆಂಟ್ ಉದ್ಯಮ..?
ರಾಕ್​ ಸ್ಟಾರ್​ ರವೀಂದ್ರ ಜಡೇಜಾ ಸಹ ಹೋಟೆಲ್ ಉದ್ಯಮ ಹೊಂದಿದ್ದಾರೆ. ರಾಜ್​ಕೋಟ್​ನಲ್ಲಿ ಜಡ್ಡು ಫುಡ್ ಫೀಲ್ಡ್​ ಹೆಸರಲ್ಲಿ 2017ರಲ್ಲಿ ಆರಂಭವಾಗಿರುವ ಈ ರೆಸ್ಟೊರೆಂಟ್​​​ನಲ್ಲಿ, ಇಂಡಿಯನ್, ಮೆಕ್ಸಿಕನ್, ಥಾಯ್, ಪಂಜಾಬಿ ಡಿಶ್​ಗಳು ಸಿಗುತ್ತವೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ತೆಂಡುಲ್ಕರ್ಸ್, ಸಚಿನ್ಸ್​ ಹೆಸರಲ್ಲಿ ರೆಸ್ಟೋರೆಂಟ್ ನಡೆಸಿದ್ರೆ. ಧೋನಿ, ಹೋಮ್ ಟೌನ್ ರಾಂಚಿಯಲ್ಲಿ ಮಾಹಿ ರೆಸಿಡೆನ್ಸಿ ನಡೆಸ್ತಿದ್ದಾರೆ. ಆನ್​​ಫೀಲ್ಡ್​ನಲ್ಲಿ ಆಟದ ಮೂಲಕ ಕೋಟಿ, ಕೋಟಿ ಹಣ ಗಳಿಸೋ ಕ್ರಿಕೆಟರ್ಸ್, ಬಿಸಿನೆಸ್​ ಮೂಲಕವೂ ಮೈದಾನದ ಹೊರೆಗೂ ದುಡ್ಡು ಮಾಡ್ತಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ