/newsfirstlive-kannada/media/post_attachments/wp-content/uploads/2025/04/Siraj-kohli.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡುತ್ತಿದೆ. ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಕಣಕ್ಕೆ ಇಳಿಯುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಈ ನಡುವೆ ಗುಜರಾತ್ ತಂಡದ ಮೊಮ್ಮದ್ ಸಿರಾಜ್ ಅವರಿಗೆ ಇವತ್ತಿನ ಪಂದ್ಯ ತುಂಬಾನೇ ಸ್ಪೆಷಲ್ ಆಗಿದೆ. ಕಳೆದ ಸೀಸನ್ಗಳಲ್ಲಿ ಸಿರಾಜ್ ಆರ್ಸಿಬಿ ಫ್ರಾಂಚೈಸಿಯಲ್ಲಿ ಆಡಿದ್ದರು. ಏಳು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆರ್ಸಿಬಿ ವಿರುದ್ಧ ಬೌಲಿಂಗ್ ಮಾಡ್ತಿದ್ದಾರೆ.
ಇದನ್ನೂ ಓದಿ: GT ವಿರುದ್ಧ ಆರ್ಸಿಬಿಗೆ ಬಿಗ್ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!
ಈ ಸಂದರ್ಭದಲ್ಲಿ ಸಿರಾಜ್ ಮತ್ತೆ ವಿರಾಟ್ ಕೊಹ್ಲಿಯನ್ನು ನೆನಪಿಸಿಕೊಂಡಿದ್ದಾರೆ. ಕೊಹ್ಲಿಗೆ ಬೌಲಿಂಗ್ ಮಾಡುವ ವಿಚಾರಕ್ಕೆ ಮಾತನಾಡಿರುವ ಸಿರಾಜ್, ವಿರಾಟ್ ಕೊಹ್ಲಿ ನನ್ನ ಸಹೋದರ. ವಿರಾಟ್ ಕೊಹ್ಲಿ ವಿರುದ್ಧ ಅದೆಷ್ಟೋ ಸಲ ಬೌಲಿಂಗ್ ಮಾಡಿದ್ದೇನೆ. ಅದು ನೆಟ್ಸ್ನಲ್ಲಿ, ಪ್ರ್ಯಾಕ್ಟೀಸ್ ಸೆಷನ್ಗಳಲ್ಲಿ ಮಾತ್ರ. ಪಂದ್ಯಗಳಲ್ಲಿ ಯಾವತ್ತೂ ಬಾಲ್ ಹಾಕಿಲ್ಲ.
ಇದೇ ಮೊದಲ ಬಾರಿಗೆ ಕೊಹ್ಲಿಗೆ ಬಾಲ್ ಎಸೆಯುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಕೊಹ್ಲಿ ವಿರುದ್ಧ ಆಡುತ್ತಿದ್ದೇನೆ. ಇದು ನಿಜವಾಗಿಯೂ ಮಜವಾಗಿರುತ್ತೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ. ಇಂದು ಸಂಜೆ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಸಿರಾಜ್ ಅವರು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: RCB vs GT ಪಂದ್ಯಕ್ಕೆ ಮಳೆಯ ಆತಂಕ ಇದೆಯಾ? ಹವಾಮಾನ ಇಲಾಖೆ ಏನ್ ಹೇಳಿದೆ..?
From practicing together to facing each other! 😉🥹
Miyan is excited and so are we! 😁#PlayBold#ನಮ್ಮRCB#IPL2025pic.twitter.com/4GYjRd2EN8— Royal Challengers Bengaluru (@RCBTweets) April 2, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್