/newsfirstlive-kannada/media/post_attachments/wp-content/uploads/2025/07/SIRAJ-3.jpg)
ಇಂಡೋ-ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್ನ ಅಂತಿಮ ದಿನದಾಟ ಯಾರೂ ನಿರೀಕ್ಷೆ ಮಾಡದ ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಯ್ತು. ಅಂತಿಮವಾಗಿ ಟೀಮ್ ಇಂಡಿಯಾ ವಿರೋಚಿತ ಸೋಲಿಗೆ ಶರಣಾಯ್ತು. ಒಂದು ಬ್ಯಾಡ್ಲಕ್ನಿಂದ ಗೆಲುವು ಜಸ್ಟ್ ಮಿಸ್ ಆಯ್ತು.
ಲಾರ್ಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಮುಂದಿದಿದ್ದು 193 ರನ್ಗಳ ಟಾರ್ಗೆಟ್. ಈ ಗುರಿ ಮುಟ್ಟೋಕೆ ಬರೋಬ್ಬರಿ 4 ಸೆಷನ್ಗಳು ಬಾಕಿ ಉಳಿದಿದ್ವು. ಚೇಸಿಂಗ್ನ ಮೊದಲ ಹೆಜ್ಜೆಯಲ್ಲೇ ಎಡವಿದ್ದ ಟೀಮ್ ಇಂಡಿಯಾ 4ನೇ ದಿನದ ಅಂತ್ಯಕ್ಕೆ 4 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು.
ಇದನ್ನೂ ಓದಿ: ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!
ಕೈಯಲ್ಲಿ 6 ವಿಕೆಟ್ಗಳನ್ನಿಟ್ಟುಕೊಂಡು ಅಂತಿಮ ದಿನ 135 ರನ್ಗಳ ಚೇಸಿಂಗ್ಗಿಳಿದ ಇಂಡಿಯಾ ಮತ್ತೆ ಎದುರಿಸಿದ್ದು ಆಘಾತ. ಜಸ್ಟ್ 82 ರನ್ಗಳಿಸುವಷ್ಟರಲ್ಲಿ ಟೀಮ್ ಇಂಡಿಯಾದ ಟಾಪ್ ಮತ್ತು ಮಿಡಲ್ ಆರ್ಡರ್ ಗಂಟುಮೂಟೆ ಕಟ್ಟಿತ್ತು. 7 ವಿಕೆಟ್ ಕಬಳಿಸಿದ್ದ ಆಂಗ್ಲರು ಅಟ್ಟಹಾಸ ಮರೆಯುತ್ತಿದ್ದರು.
ಆಂಗ್ಲರ ಹುಟ್ಟಡಗಿಸಿದ ತ್ರಿಮೂರ್ತಿಗಳು
ಟೀಮ್ ಇಂಡಿಯಾದ ಮೊದಲ 7 ವಿಕೆಟ್ ಕಬಳಿಸಿದ್ದೇ ತಡ ಆಂಗ್ಲ ಪಡೆ ಗೆಲುವು ನಮ್ಮದೆ ಅಂತಾ ಲಾರ್ಡ್ಸ್ ಮೆರೆದಾಡ್ತಿತ್ತು. ಅತಿಯಾದ ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್ ತಂಡವಿತ್ತು. ಭಾರತದ ತ್ರಿಮೂರ್ತಿಗಳು ಆಂಗ್ಲರ ಆತ್ಮವಿಶ್ವಾಸಕ್ಕೆ ಸರಿಯಾದ ಏಟು ಕೊಟ್ರು. ಜಡೇಜಾ, ಬೂಮ್ರಾ, ಸಿರಾಜ್ ಕೆಚ್ಚೆದೆಯ ಹೋರಾಟಕ್ಕೆ ಆಂಗ್ಲರು ಅಕ್ಷರಶಃ ಕಂಗಾಲಾದರು. ಅರ್ಚರ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಬ್ರೆಂಡನ್ ಕರ್ಸ್ ಘಟಾನುಘಟಿ ಬೌಲರ್ಸ್ ಬಳಲಿ ಬೆಂಡಾದರು.
54 ಎಸೆತ, 104 ನಿಮಿಷ, ಆಂಗ್ಲರಿಗೆ ಪೀಕಲಾಟ
ವಾಷಿಂಗ್ಟನ್ ಸುಂದರ್ ಹೋದ ಮೇಲೆ ಬ್ಯಾಟಿಂಗ್ಗೆ ಬಂದಿದ್ದು ಜಸ್ಪ್ರಿತ್ ಬೂಮ್ರಾ. ಆಗ ಬ್ಯಾಟಿಂಗ್ ಲೈನ್ಅಪ್ ಅನ್ನೇ ಚಿಂದಿ ಉಡಾಯಿಸಿದ ನಮಗೆ ಬೂಮ್ರಾ ಯಾವ ಲೆಕ್ಕ ಅನ್ನೋ ಮನಸ್ಥಿತಿಯಲ್ಲಿತ್ತು ಇಂಗ್ಲೆಂಡ್. ಆದರೆ ಬೂಮ್ರಾ ಕೊಟ್ಟ ಕಾಟ ಅಷ್ಟಿಷ್ಟಲ್ಲ. 104 ನಿಮಿಷಗಳ ಕಾಲ ಕ್ರಿಸ್ ಕಚ್ಚಿ ನಿಂತ ಬೂಮ್ರಾ 54 ಎಸೆತ ಎದುರಿಸಿದ್ರು. ಗಳಿಸಿದ್ದು 5 ಇರಬಹುದು. ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ರು. ಜಡೇಜಾ ಜೊತೆಗೆ 35 ಕ್ರೂಶಿಯಲ್ ಪಾರ್ಟನರ್ಶಿಪ್ ಕಟ್ಟಿದ್ರು.
ಇದನ್ನೂ ಓದಿ: ಟೆಸ್ಟ್ನಲ್ಲಿ ‘ವಿರಾಟ್’ರೂಪ ದರ್ಶನ.. ಇಂಗ್ಲೆಂಡ್ ಬ್ಯಾಟರ್ಗಳ ಮೇಲೆ ಕೆಂಡಕಾರಿದ ಕ್ಯಾಪ್ಟನ್ ಗಿಲ್!
30 ಎಸೆತ, 64 ನಿಮಿಷ, ಇಂಗ್ಲೆಂಡ್ ಬೌಲರ್ಸ್ ಬೆಂಡ್
ತಿಣುಕಾಡಿ ಬೂಮ್ರಾ ವಿಕೆಟ್ ಉರುಳಿಸಿದ ಇಂಗ್ಲೆಂಡ್ಗೆ ಮತ್ತೆ ಕಾನ್ಫಿಡೆನ್ಸ್ ಬಂದು ಬಿಡ್ತು. ಟೀ ಬ್ರೇಕ್ ಅನ್ನ ಮುಂದೂಡಿ ಕೆಲವೇ ಹೊತ್ತಲ್ಲಿ ಅಲೌಟ್ ಮಾಡ್ತಿವಿ ಅನ್ನೋ ಅತಿಯಾದ ಆತ್ಮವಿಶ್ವಾಸವನ್ನ ತೋರಿಸಿತು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸಿರಾಜ್ ಆಂಗ್ಲರ ಬೆಂಡೆತ್ತಿದ್ರು. ಫೈರಿ ಎಸೆತಗಳಲ್ಲ ದಿಟ್ಟವಾಗಿ ಎದುರಿಸಿ ಹೋರಾಡಿದ್ರು. ಬರೋಬ್ಬರಿ 64 ನಿಮಿಷ ಕ್ರಿಸ್ ಕಚ್ಚಿ ನಿಂತ ಸಿರಾಜ್ 30 ಎಸೆತ ಎದುರಿಸಿದ್ರು.
181 ಎಸೆತ, 266 ನಿಮಿಷ..
ಲಾರ್ಡ್ಸ್ ಅಂಗಳದಲ್ಲಿ ಇಡೀ ಭಾರತದ ಪಾಲಿಗೆ ಭರವಸೆಯಾಗಿ ನಿಂತಿದ್ದು ಜಡೇಜಾ ಮಾತ್ರ. ಬೂಮ್ರಾ, ಸಿರಾಜ್ ಅದ್ಭುತ ಆಟದ ಹಿಂದಿನ ಕಲೆಗಾರ ಈ ಜಡೇಜಾ. ಟೀಮ್ ಇಂಡಿಯಾ ಎಲ್ಲಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದಾಗ ರಣರಂಗದಲ್ಲಿ ವೀರ ಸೇನಾನಿಯಂತೆ ಹೋರಾಡಿದ್ದು ಸರ್ ರವೀಂದ್ರ ಜಡೇಜಾ.
ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ದಂಪತಿ.. ಫೋಟೋಸ್ ಇಲ್ಲಿವೆ
ತಂಡ ಸಂಕಷ್ಟಕ್ಕೆ ಸಿಲುಕಿದಾಗ ಕಣಕ್ಕಿಳಿದ ಜಡೇಜಾ ಅಂತಿಮ ಹಂತ ತಲುಪಿದ್ರೂ ಹೋರಾಟ ನಿಲ್ಲಿಸಲಿಲ್ಲ. ಸುದೀರ್ಘ 266 ನಿಮಿಷಗಳ ಕಾಲ ಹೋರಾಡಿದ್ರು. ಈ ಅವಧಿಯಲ್ಲಿ ಬರೋಬ್ಬರಿ 181 ಎಸೆತ ಎದುರಿಸಿದ್ರು. ಅಜೇಯ 61 ರನ್ಗಳಿಸಿದ್ದ ಜಡೇಜಾ ಗೆಲುವಿನ ದಡ ಸೇರಿಸೋ ಅಪ್ರತಿಮ ಗುರಿ ಹೊಂದಿದ್ರು. ಅಷ್ಟರಲ್ಲೇ ಕಾಡಿದ್ದು ಬ್ಯಾಡ್ಲಕ್.
74.5ನೇ ಓವರ್
ಜಡೇಜಾ, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅತ್ಯದ್ಭುತ ಹೋರಾಟ ಇಡೀ ಭಾರತದಲ್ಲಿ ಗೆಲುವಿನ ಭರವಸೆ ಹುಟ್ಟು ಹಾಕಿತ್ತು. ಒಂದು ಬ್ಯಾಡ್ಲಕ್ ಗೆಲುವನ್ನ ಕಿತ್ತು ಕೊಳ್ತು. ಶೋಯೆಬ್ ಬಶೀರ್ ಎಸೆದ 74.5ನೇ ಎಸೆತ ಸಿರಾಜ್ ಸಕ್ಸಸ್ಫುಲ್ ಆಗಿ ಡಿಫೆಂಡ್ ಮಾಡಿದ್ರು. ಆದ್ರೆ, ಕೆಳಗೆ ಬಿದ್ದ ಬಾಲ್ ತೆವಳುತ್ತಾ ಸಾಗಿ ಸ್ಟಂಪ್ಗೆ ಬಡೆದು ಬಿಡ್ತು. ಕೊಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಯ್ತು.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಕೈ ಕೊಟ್ಟ ಬ್ಯಾಟರ್ಸ್.. 193 ರನ್ ಚೇಸ್ ಮಾಡಲಾಗದ ಗಿಲ್ ಸೇನೆಗೆ ಭಾರೀ ಅವಮಾನ!
ಸ್ಟೋಕ್ಸ್, ವೋಕ್ಸ್, ಕರ್ಸ್, ಆರ್ಚರ್ರಂತ ಘಟಾನುಘಟಿಗಳೇ ಪಾರ್ಟನರ್ ಶಿಪ್ ಬ್ರೇಕ್ ಮಾಡೋಕೆ ತಿಣುಕಾದ್ರು. ಇಂತದ್ರಲ್ಲಿ ಡಿಫೆಂಡ್ ಮಾಡಿದ ಬಾಲ್ ತೆವಳುತ್ತಾ ಸಾಗಿ ಸ್ಟಂಪ್ ಬಡಿಯುತ್ತೆ ಅಂದ್ರೇನು ಹೇಳಿ. ಖಂಡಿತಾ ಇದು ಬ್ಯಾಡ್ಲಕ್ಕೆ. ಲಾರ್ಡ್ಸ್ ಅಂಗಳಲ್ಲಿ ಗೆಲುವು ಜಸ್ಟ್ ಮಿಸ್ ಆಗಿರಬಹುದು. ಟೀಮ್ ಇಂಡಿಯಾದ ಅದ್ರಲ್ಲೂ ಜಡೇಜಾ, ಬೂಮ್ರಾ, ಸಿರಾಜ್ ಹೋರಾಟವನ್ನ ಮಾತ್ರ ಇತಿಹಾಸ ಎಂದಿಗೂ ಮರೆಯಲ್ಲ.
It's Not A Wicket Ball At All. Siraj tried to Block the ball But Luck towards England Side. #INDvENGpic.twitter.com/GRRmYd64zu
— Rockz☜ (@Rockz055) July 14, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ