/newsfirstlive-kannada/media/post_attachments/wp-content/uploads/2025/03/Soundarya.jpg)
ಏಪ್ರಿಲ್ 17 ಬಂದ್ರೆ 21 ವರ್ಷ ಆಯಿತು. ಆದ್ರೂ ನಟಿ ಸೌಂದರ್ಯದ್ದು ಮಾಸದ ಸೌಂದರ್ಯ. ಇದೇ ಬೆಂಗಳೂರಿನಿಂದ ಕೆಲ ಮೈಲಿ ದೂರದಲ್ಲೇ ಆಕೆಯ ಹೆಲಿಕಾಪ್ಟರ್ ಪತನ ಆಗಿ ಗುರುತೇ ಸಿಗದಷ್ಟು ಮಾಸುಗಟ್ಟಿದ್ದರು. ಸೌಂದರ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅವರು ಕೊನೆಯುಸಿರೆಳೆದಿದ್ದು ಅಪಘಾತದಲ್ಲಲ್ಲ, ಕೊಲೆ ಅಂತ ದೂರು ದಾಖಲಾಗಿದೆ. ಈ ಹೊಸ ಬೆಳವಣಿಗೆ ಇಡೀ ದಕ್ಷಿಣ ಭಾರತವನ್ನೇ ದಂಗು ಬಂಡಿಸಿದೆ.
ಸೌಂದರ್ಯ.. ಹೆಸರಿಗೆ ತಕ್ಕಂತ ಸ್ನಿಗ್ಧ ಚೆಂದುಳ್ಳಿ ಚೆಲುವೆ. ನಟನೆಗೆ ನಿಂತ್ರೆ ಆಕೆ ಅಭಿಜಾತ ಕಲಾವಿದೆ. ಬಹುಭಾಷಾ ನಟಿ ಸೌಂದರ್ಯ, ಅಗಲಿಕೆ ಎರಡು ದಶಕವೇ ಕಳೆದೋಗಿದೆ. ಆದ್ರೆ, ಅಭಿಮಾನಿಗಳ ಮನದಲ್ಲಿ ಸುಮಧುರ ನೆನಪು. ಅಚ್ಚಳಿಯದ ಬೆಳಕು. ಅಂದ್ಹಾಗೆ ಸೌಂದರ್ಯ ಸಾವಿನ ವಿಚಾರದಲ್ಲಿ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಆಪ್ತಮಿತ್ರನ ಗಂಗಾ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಅದು 2004 ಏಪ್ರಿಲ್ 17ನೇ ತಾರೀಖು. ಬೆಂಗಳೂರಿನಿಂದ ಹಾರಿದ್ದ ಲಘು ವಿಮಾನ ಕೆಲವೇ ನಿಮಿಷಗಳಲ್ಲಿ ಪತನ ಆಗಿ ಧಗ್ಗನೆ ಹೊತ್ತಿ ಉರಿದಿತ್ತು. ಜಸ್ಟ್ 31 ವಯಸ್ಸಷ್ಟೇ, ಸೌಂದರ್ಯ ಎಂಬ ಬೆಳದಿಂಗಳ ಬೆಳ್ಮುಗಿಲು ಶಾಶ್ವತವಾಗಿ ಮರೆಯಾಗಿತ್ತು. ಸೌಂದರ್ಯ ಸತ್ತ 21 ವರ್ಷಗಳ ಬಳಿಕ ಕೇಸ್ ಮತ್ತೆ ಎದ್ದು ಕೂತಿದೆ. ಸೌಂದರ್ಯ ಸಾವು ಅಪಘಾತವಲ್ಲ, ಅದೊಂದು ಕೊಲೆ ಅನ್ನೋ ಆರೋಪ ಮೋಡ ಕವಿಸಿದೆ. ಪೊಲೀಸ್ ಠಾಣೆಯಲ್ಲಿ ಟಾಲಿವುಡ್ನ ಸ್ಟಾರ್ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ.
ಕೆಲ ತಿಂಗಳಿಂದ ತೆಲುಗಿನ ಹಿರಿಯ ನಟ ಮೋಹನ್ ಬಾಬು, ತಮ್ಮ ಕೌಟುಂಬಿಕ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈಗ ಆಂಧ್ರದ ಖಮ್ಮಂ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ಊಹೆ ಮಾಡೋಕೆ ಆಗದೇ ಇರೋ ಕೇಸ್ ದಾಖಲಾಗಿದೆ. ಸೌಂದರ್ಯ ಜೀವ ಕಳೆದುಕೊಳ್ಳೋದ್ರ ಹಿಂದೆ ಮೋಹನ್ ಬಾಬು ಕೈವಾಡ ಇದೆ ಅಂತ ವ್ಯಕ್ತಿಯೊಬ್ಬರು ಆರೋಪ ಮಾಡ್ತಿದ್ದಾರೆ.
ಮಣ್ಣಿಗಾಗಿ ಮಣ್ಣಾದ ಹೆಣ್ಣು!
- ಜಲ್ಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿ ಖರೀದಿಸಿದ್ದ ಸೌಂದರ್ಯ
- ಜಮೀನು ಮಾರಾಟ ಮಾಡು ಅಂತ ಮೋಹನ್ ಬಾಬು ಒತ್ತಡ
- ಭೂಮಿ ಮಾರಾಟಕ್ಕೆ ನಿರಾಕರಿಸಿದ್ದ ಸೌಂದರ್ಯ & ಸೋದರ
- ‘ಈ ವಿಚಾರವೇ ಇಬ್ಬರ ನಡುವೆ ಕೋಪ, ಮುನಿಸಿಗೂ ಕಾರಣ’
- 17 ಏಪ್ರಿಲ್ 2004.. ಬೆಂಗಳೂರಿನಲ್ಲಿ ನಟಿ ಎಲೆಕ್ಷನ್ ಪ್ರಚಾರ
- ಪ್ರಚಾರ ಮುಗಿಸಿ ಹೋಗ್ತಿದ್ದ ಸೌಂದರ್ಯ ಹೆಲಿಕಾಪ್ಟರ್ ಪತನ
- ಈಗ 6 ಎಕರೆ ಭೂಮಿ ಮೋಹನ್ ಬಾಬು ಅಕ್ರಮವಾಗಿ ಬಳಕೆ
ಇದನ್ನೂ ಓದಿ: ಪಾಕಿಸ್ತಾನಕ್ಕೆ 48 ಗಂಟೆಗಳ ಡೆಡ್ಲೈನ್.. ಟ್ರೈನ್ ಹೈಜಾಕ್ಗೆ ಮುಖ್ಯ ಕಾರಣ?
ನಟ ಮೋಹನ್ ಬಾಬು ಅಕ್ರಮವಾಗಿ ವಶಪಡಿಸಿಕೊಂಡಿರೋ 6 ಎಕರೆ ಭೂಮಿಯನ್ನ ಸರ್ಕಾರ ಕಿತ್ತುಕೊಳ್ಳಬೇಕು ಅಂತ ಖಮ್ಮಂ ಎಸಿಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಚಿಟ್ಟಿಮಲ್ಲು ಅನ್ನೋ ವ್ಯಕ್ತಿ ದೂರು ಕೊಟ್ಟಿದ್ದಾರೆ. ಆ ಭೂಮಿಯನ್ನ ಅನಾಥಾಶ್ರಮ, ಸೇನೆ, ಅಥವಾ ಪೊಲೀಸರಿಗೋ ಕೊಡಬೇಕು ಅಂತ ಮನವಿ ಮಾಡಿದ್ದಾರೆ. ಮೋಹನ್ ಬಾಬು ಅವರಿಂದ ನನಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಕೇಳಿದ್ದಾರೆ.
ಆದ್ರೆ, ಸೌಂದರ್ಯ ಸಾವಿನ ಕುರಿತ ಈ ಆರೋಪಗಳು ವಾಸ್ತವಕ್ಕೆ ದೂರ ಅಂತ ಕೆಲವರು ಹೇಳ್ತಿದ್ದಾರೆ. ಈ ದೂರು, ಬರೀ ಪ್ರಚಾರದ ಗಿಮಿಕ್ ಅಂತ ಇನ್ನೂ ಕೆಲವರು ಆರೋಪಿಸ್ತಿದ್ದಾರೆ. ಸತ್ಯ ಅಸತ್ಯ ಒಂದೇ ನಾಣ್ಯದ ಎರಡು ಮುಖ. ಒಂದಲ್ಲ, ಒಂದು ದಿನ ಸತ್ಯ ಹೊರಗಡೆ ಬರಲೇಬೇಕು. ಅಷ್ಟಕ್ಕೂ ಇದು ಸತ್ಯನಾ? ಸುಳ್ಳಾ? ತನಿಖೆ ನಡೆಸಿದ್ರೆ ನಿಜ ಹೊರ ಬಂದ್ರೂ ಬರಬಹುದು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ