/newsfirstlive-kannada/media/post_attachments/wp-content/uploads/2025/02/MOHAN_BABU.jpg)
ಟಾಲಿವುಡ್ ಕಲೆಕ್ಷನ್ ಕಿಂಗ್ ಅಂತಲೇ ಮೋಹನ್ ಬಾಬು ಸಕ್ಸಸ್ ಕಂಡವರು. ದುಡಿದ ಹಣವನ್ನ ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿ ಭಾರೀ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ಈಗ ಮಕ್ಕಳ ನಡುವೆ ಸಂಘರ್ಷ ಏರ್ಪಟ್ಟಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಮಂಚು ಫ್ಯಾಮಿಲಿಯಲ್ಲಿ ಕೌಟುಂಬಿಕ ಕಲಹ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡ್ತಿದೆ. ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದೆ.
ಕೆಳದ ಡಿಸೆಂಬರ್ 8 ರಂದು ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು ಮನೆಯಲ್ಲಿ ಜಟಾಪಟಿ ಶುರುವಾಗಿತ್ತು. ಸಹೋದರು ಕಿತ್ತಾಡಿಕೊಂಡಿದ್ದರು. ಆಸ್ತಿ ವಿವಾದಕ್ಕೆ ತಂದೆ ಮಗ ಬಡಿದಾಡಿಕೊಂಡಿದ್ರು. ಕುಟುಂಬದಲ್ಲೇ ಒಬ್ಬರ ಮೇಲೊಬ್ಬರು ದಾಳಿ ಮಾಡಿಕೊಂಡಿದ್ರು. 2 ತಿಂಗಳಿನಿಂದ ನಡೀತಿರೋ ಕೌಟುಂಬಿಕ ಕಲಹ ಇದೀಗ ಮತ್ತೊಮ್ಮೆ ಬೀದಿಗೆ ಬಂದಿದೆ.
ಮುಗಿಯದ ನಟ ಮೋಹನ್ ಬಾಬು ಕುಟುಂಬದ ಬೀದಿ ಜಗಳ
ಚಲನಚಿತ್ರ ನಟ ಮಂಚು ಮನೋಜ್ ಮತ್ತೊಮ್ಮೆ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಕೈಯಲ್ಲಿ ಸಿನಿಮಾಗಳ ಕೊರತೆ, ಎರಡನೇ ಮದುವೆ. ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ ಜಗಳ. ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ತಿರುಪತಿ ಪೊಲೀಸ್ ಠಾಣೆಯಲ್ಲಿ ಕೂರುವಂತಾಗಿದೆ.
ಮಂಚು ಮನೋಜ್‌ರನ್ನ ತಿರುಪತಿಯ ನಿವಾಸದಿಂದ ವಶಕ್ಕೆ
ಪೊಲೀಸರು ವಶಕ್ಕೆ ಪಡೆಯೋದಕ್ಕೆ ಕಾರಣ, ತಂದೆ ಮೋಹನ್ ಬಾಬು ಮಗನ ಮೇಲೆ ಕೊಟ್ಟಿರೋ ಕಂಪ್ಲೇಂಟ್. ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ಮೋಹನ್ ಬಾಬು ಸಲ್ಲಿಸಿದ ದೂರಿನ ಆಧಾರದ ಮೇಲೆಯೇ ಮಂಚು ಮನೋಜ್‌ರನ್ನ ತಿರುಪತಿಯ ನಿವಾಸದಿಂದ ವಶಕ್ಕೆ ಪಡೆದಿದ್ದು, ಭಕರಪೇಟೆ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ.
ನಟ ಮನೋಜ್ ಭಕರಪೇಟೆ ಘಾಟ್ ರಸ್ತೆಯಲ್ಲಿರುವ ಲೇಕ್ ವ್ಯಾಲಿ ರೆಸಾರ್ಟ್ಸ್‌ನಲ್ಲಿ ತಂಗಿದ್ದರು. ರಾತ್ರಿ 11 ಗಂಟೆಗೆ ತಮ್ಮ ಗಸ್ತಿನ ಭಾಗವಾಗಿ ಎಸ್‌ಐ ರಾಘವೇಂದ್ರ ರೆಸಾರ್ಟ್‌ಗೆ ಹೋಗಿ ಮನೋಜ್‌ರನ್ನ ವಶಕ್ಕೆ ಪಡೆದಿದ್ದಾರೆಂದು ನಟ ಮನೋಜ್ ಆರೋಪಿಸಿದ್ದಾರೆ.
ಇದನ್ನೂ ಓದಿ:ವೈಜ್ಞಾನಿಕವಾಗಿ ಜಾತಿ ಗಣತಿ ವರದಿ ತಯಾರಿ, ಅನುಷ್ಠಾನಕ್ಕೆ ಶತಸಿದ್ಧ- ಸಿಎಂ ಸಿದ್ದರಾಮಯ್ಯ ಭರವಸೆ
ನಾನಿಲ್ಲಿ ಗೊತ್ತಿದ್ದವರ ರೆಸಾರ್ಟ್ನಲ್ಲಿ ಇದ್ದಾಗ. ಇಲ್ಲಿ ಸುಮಾರು 15 ರಿಂದ 20 ಮನೆಗಳಿವೆ. ಇವುಗಳ ಮಧ್ಯೆ ಸೈರನ್ ಹಾಕಿಕೊಂಡು 10.30ಕ್ಕೆ ಬಂದು. ನಾನು, ನನ್ನ ಮುಂದಿನ ಸಿನಿಮಾದ ನಿರ್ದೇಶಕರು ಹಾಗೂ ನನ್ನ ಸಿಬ್ಬಂದಿ ಇಲ್ಲಿ ಕೂತು ಊಟ ಮಾಡು ಮುಂದಾದ ವೇಳೆ ಬಂದ್ರು. ನೀವೆಲ್ಲಾ ಇಲ್ಲಿ ಏನ್ ಮಾಡ್ತಾ ಇದ್ದೀರಾ..? ನಾನು ಸಿಎಂ ಕಡೆಯಿಂದ ನೇರವಾಗಿ ಇಲ್ಲಿಗೆ ಬರ್ತಾ ಇದ್ದೀನಿ. ನಿನ್ನ ಹೆಸರು ನಿನ್ನ ಹೆಸರು ಏನು, ಯಾವ ಊರು, ಇಲ್ಯಾಕೆ ಇದ್ದೀರಾ ಅಂತಾ ರಾತ್ರಿ 10.30 ವೇಳೆಗೆ ಒಬ್ಬರು ಎಸ್‌ಐ, ಕಾನ್ಸ್ಟೇಬಲ್ ಇದ್ರು. ಏನ್ ಸರ್ ಸಿಎಂ ಬಳಿಯಿಂದ ಬರ್ತಾ ಇದ್ದೀನಿ ಅಂತೀರಾ. ನಾವ್ ಏನ್ ತಪ್ಪು ಮಾಡಿದ್ದೀವಿ. ಯಾರ್ ಹೇಳಿದ್ರು ಅಂತಾ ಹೇಳಿ. ನಾನು ಬಂದು ಮೀಟ್ ಆಗ್ತೀನಿ ಅಂದೆ. ಇಲ್ಲ ಇಲ್ಲ ಸಿಎಂ ಅಲ್ಲ. ನಾನು ಸಿಎಂ ಅವರ ಬಂದೋಬಸ್ತ್ ಮುಗಿಸಿ ಬಂದೆ ಅಂತಾ ಮಾತು ಚೇಂಜ್ ಮಾಡಿದ್ರು.
ಮಂಚು ಮನೋಜ್, ತೆಲುಗು ನಟ
ಮಧ್ಯರಾತ್ರಿ 12.50ಕ್ಕೆ ಮನೋಜ್‌ರನ್ನ ಪೊಲೀಸರು ಠಾಣೆಯಿಂದ ಕಳುಹಿಸಿಕೊಟ್ಟಿದ್ದಾರಂತೆ. ಮನೋಜ್ ಇದನ್ನೆಲ್ಲಾ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಅಂತಾ ಆರೋಪಿಸಿದ್ದಾರೆ. ಅದ್ಹೇನೆ ಇರಲಿ, ಅತ್ತ ಕೋಲು ಮುರೀತಿಲ್ಲ. ಇತ್ತ ಹಾವು ಸಾಯ್ತಾ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ಸಿಲುಕಿದೆ ಮೋಹನ್ ಬಾಬು ಕೌಟುಂಬಿಕ ಕಲಹ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ