/newsfirstlive-kannada/media/post_attachments/wp-content/uploads/2025/02/DRISHYAM-PART-3.jpg)
ಮಲೆಯಾಳಂನಲ್ಲಿ ಸೂಪರ್​ ಹಿಟ್ ಕಂಡು, ಭಾರತದ ಇತರ ಭಾಷೆಗಳಲ್ಲಿಯೂ ರಿಮೇಕ್ ಆಗಿ ಸೂಪರ್ ಹಿಟ್ ಆಗಿದ್ದ ಚಿತ್ರಗಳೆಂದರೆ ಅದು ಮಲೆಯಾಳಂನ ದೃಶ್ಯಂ ಮತ್ತು ದೃಶ್ಯಂ-2. ಈ ಎರಡೂ ಸಿನಿಮಾ ಜಾಗತಿಕವಾಗಿ ದೊಡ್ಡ ಸದ್ದು ಮಾಡಿದ ಸಿನಿಮಾಗಳು. ಈಗ ಇದೇ ತಂಡ ಅಂತಹುದೇ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಇರುವ ಮತ್ತೊಂದು ಭಾಗವನ್ನು ಮಾಡಲು ಸಜ್ಜಾಗಿದೆ. ಸದ್ಯದಲ್ಲಿಯೇ ದೃಶ್ಯಂನ ಮೂರನೇ ಭಾಗ ತೆರೆಗೆ ಬರುವುದನ್ನು ಅಧಿಕೃತವಾಗಿ ಕನ್ಫರ್ಮ್ ಮಾಡಿದ್ದಾರೆ ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್​​ ಲಾಲ್​.
ದೃಶ್ಯಂ-2 ಬಂದು ಈಗಾಗಲೇ ಹಲವಾರು ವರ್ಷಗಳು ಕಳೆದಿವೆ. ದೃಶ್ಯಂ-3 ಬರುವ ಮುನ್ಸೂಚನೆಯನ್ನು ಕೂಡ ಆ ಸಿನಿಮಾ ಕೊಟ್ಟಿತ್ತು. ಜನರು ಕೂಡ ಇಷ್ಟು ವರ್ಷಗಳಿಂದ ಕಾಯುತ್ತಲೇ ಇದ್ದರು. ಗುರುವಾರದಂದು ನಟ ಮೋಹನ್ ಲಾಲ್​ ದೃಶ್ಯಂ 3 ಸಿನಿಮಾದ ಕೆಲಸಗಳು ಆರಂಭಗೊಂಡಿವೆ ಎಂದು ಅಧಿಕೃತವಾಗಿ ಸೂಚನೆ ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ನಿರ್ದೇಶಕ ಜೀತು ಜೋಸೆಫ್​ ಹಾಗೂ ನಿರ್ಮಾಪಕ ಆಂಟೋನಿ ಪೆರುಂಬವೂರ ಅವರೊಂದಿಗೆ ಫೋಟೋದಲ್ಲಿ ಪೋಸ್​ ಕೊಟ್ಟಿರುವ ಮೋಹನ್​ಲಾಲ್ ದಿ ಪಾಸ್ಟ್​ ನೆವರ್ ಸ್ಟೇ ಸೈಲೆಂಟ್ ಅಂದ್ರೆ ಭೂತಕಾಲ ಎಂದಿಗೂ ಮೌನದಿಂದ ಇರುವುದಿಲ್ಲ ಎಂ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಮೂಲಕ ಸದ್ಯದಲ್ಲಿಯೇ ದೃಶ್ಯಂ 3 ತೆರೆಗೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಕನ್ನಡ ಸೀರಿಯಲ್​ ನಟಿ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕೃತಿಕಾ ರವೀಂದ್ರ
ಮೋಹನ್​​ಲಾಲ್ ಅವರ ಈ ಒಂದು ಪೋಸ್ಟ್ ಅವರ ಅಭಿಮಾನಿಗಳಿಗೆ ರಸದದೌತಣ ನೀಡಿದಷ್ಟು ಖುಷಿ ಕೊಟ್ಟಿದೆ. ತುಂಬಾ ವರ್ಷದಿಂದ ಈ ಸಿನಿಮಾ ಬಗ್ಗೆ ನಿರೀಕ್ಷೆಯಿಟ್ಟುಕೊಂಡಿರುವ ಅಭಿಮಾನಿಗಳು ಕೊನೆಗೂ ಖುಷಿಯಾಗಿ ವಾವ್​.. ಸೂಪರ್ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.
The Past Never Stays Silent
Drishyam 3 Confirmed!#Drishyam3pic.twitter.com/xZ8R7N82un
— Mohanlal (@Mohanlal)
The Past Never Stays Silent
Drishyam 3 Confirmed!#Drishyam3pic.twitter.com/xZ8R7N82un— Mohanlal (@Mohanlal) February 20, 2025
">February 20, 2025
ದೃಶ್ಯಂನ ಸರಣಿ ಆರಂಭವಾಗಿದ್ದೆ 2013ರಲ್ಲಿ. ಇದು ಭಾರತ ಸಿನಿಮಾ ರಂಗದ ಅತ್ಯಂತ ಥ್ರಿಲ್ಲರ್​ ಹಾಗೂ ಫ್ರಾಂಚಿಸಿಸ್ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿತು. ಫಸ್ಟ್​ ಸಿನಿಮಾದಲ್ಲಿ ಮೋಹನ್​ಲಾಲ್ ಒಬ್ಬ ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು.ಅವರು ಅವನ ಕುಟುಂಬದ ರಕ್ಷಣೆಗೆ ಏನೆಲ್ಲಾ ಪ್ರಯತ್ನ ಪಡುತ್ತಾರೆ ಎಂಬುದನ್ನು ತೋರಿಸಲಾಗಿದೆ. ಅದೇ ರೀತಿ ಎರಡನೇ ಭಾಗವೂ ಕೂಡ ಅನೇಕ ಟ್ವಿಸ್ಟ್ ಟರ್ನ್​ಗಳೊಂದಿಗೆ ಹಿಂದಿನ ಸಿನಿಮಾ ಕೌತುಕವನ್ನೇ ತುಂಬಿಸಿತ್ತು. ಅಷ್ಟೇ ರೋಮಾಂಚನಕಾರಿ ಅನುಭವವನ್ನು ನೀಡಿತ್ತು.
ಇದನ್ನೂ ಓದಿ: ಸ್ಯಾಂಡಲ್​ವುಡ್​ನ ಖ್ಯಾತ ಹಿರಿಯ ನಿರ್ದೇಶಕ ಎಸ್ ಉಮೇಶ್ ನಿಧನ
ಈಗ ಅದೇ ಸಿನಿಮಾ ಮೂರನೇ ಭಾಗವಾಗಿ ಬರುತ್ತಿದೆ. ಇದು ಯಾವ ರೀತಿಯ ರೋಂಚಕತೆಯನ್ನು ಪ್ರೇಕ್ಷಕರಿಗೆ ನೀಡಲಿದೆ ಎಂಬುದರ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ದೃಶ್ಯಂ 3ನೇ ಭಾಗದ ಬಗ್ಗೆ ಮಾತನಾಡಿದ್ದರು. ಈಗಾಗಲೇ ಅದರ ಬಗ್ಗೆ ಕೆಲಸಗಳು ಶುರುವಾಗಿವೆ. ಹೊಸ ಸವಾಲುಗಳು ಕೂಡ ಇವೆ. ನಿರ್ದೇಶಕ ಜೀತು ಜೊಸೆಫ್​ ಹಾಗೂ ಇಡೀ ತಂಡಕ್ಕೆ ಹೊಸದಾಗಿ ಅದೇ ರೀತಿಯ ಥ್ರಿಲ್ಲರ್ ಫೀಲ್ ನೀಡುವುದು ಹೇಗೆ ಎಂಬುದೇ ಒಂದಿಷ್ಟು ದಿನ ತಲೆನೋವಾಗಿ ಕಾಡಿತ್ತು. ಈಗ ಅದು ಒಂದು ಹಂತಕ್ಕೆ ಬಂದಿದ್ದು ಸದ್ಯದಲ್ಲಿಯೇ ಶುರವಾಗಲಿದೆ ಎಂದು ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us