Advertisment

ಮಂಗಳೂರು: ಮಾಜಿ ಶಾಸಕ ಮೊಹಿದ್ದೀನ್​ ಬಾವಾ ಸಹೋದರ ಮುಮ್ತಾಜ್ ಅಲಿ ಮೃ*ತದೇಹ ಪತ್ತೆ!

author-image
AS Harshith
Updated On
ಮಂಗಳೂರು: ಮಾಜಿ ಶಾಸಕ ಮೊಹಿದ್ದೀನ್​ ಬಾವಾ ಸಹೋದರ ಮುಮ್ತಾಜ್ ಅಲಿ ಮೃ*ತದೇಹ ಪತ್ತೆ!
Advertisment
  • ಶನಿವಾರ ಮುಂಜಾನೆ 3 ಗಂಟೆಗೆ ಕಾಣೆಯಾಗಿದ್ದ ಮುಮ್ತಾಜ್
  • ಫ್ಯಾಮಿಲಿ ಗ್ರೂಪ್​ನಲ್ಲಿ ಮೆಸೇಜ್​​ ಹಾಕಿ ಕಾಣೆಯಾಗಿದ್ದ ಮುಮ್ತಾಜ್ ಅಲಿ
  • ಕೂಳೂರು ಸೇತುವೆಯ ಫಲ್ಗುಣಿ ನದಿ ಬಳಿ ಮುಮ್ತಾಜ್ ಅಲಿ ಕಾರು ಪತ್ತೆ

ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಹಿದ್ದೀನ್​ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ನಿನ್ನೆ ದಿಢೀರ್​ ನಾಪತ್ತೆಯಾಗಿದ್ದರು. ಕೂಳೂರು ಸೇತುವೆ ಮೇಲೆ ಕಾರು ನಿಲ್ಲಿಸಿ ಕಣ್ಮರೆಯಾಗಿದ್ದರು. ಆದರೀಗ ಇಪ್ಪೆತ್ತೆಂಟು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮುಮ್ತಾಜ್ ಮೃತದೇಹ ಸಿಕ್ಕಿದೆ.

Advertisment

ತಣ್ಣೀರುಬಾವಿ ಮುಳುಗುಗಾರರಿಂದ ಮೊಹಿದ್ದೀನ್​ ಬಾವಾ ಅವರ ಸಹೋದರನ ಮೃತದೇಹ ಪತ್ತೆಹಚ್ಚಿದ್ದಾರೆ. ಈ ವೇಳೆ ತಮ್ಮನ ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಣ್ಣೀರು ಸುರಿಸಿದ್ದಾರೆ.

28 ಗಂಟೆಗಳ ಬಳಿಕ ಸಿಕ್ತು ಮೃತದೇಹ

ಶನಿವಾರ ಮುಂಜಾನೆ 3 ಗಂಟೆಗೆ ಮುಮ್ತಾಜ್​ ಕಣ್ಮರೆಯಾಗಿದ್ದರು. ನಂತರ ಫ್ಯಾಮಿಲಿ ಗ್ರೂಪ್​ನಲ್ಲಿ ನಾನು ದೇವರ ಬಳಿ ತೆರಳುತ್ತಿದ್ದೇನೆ ಎಂದು ಮೆಸೇಜ್​ ಹಾಕಿದ್ದಾರೆ. ತಂದೆಯ ಮೆಸೇಜನ್ನು ಮಗಳು 4.30 ಗಂಟೆಗೆ ನೋಡಿದ್ದು ಕುಟುಂಬದವರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ಹಿಂದೂ ಯುವತಿಯನ್ನು ವಿವಾಹವಾಗಲಿದ್ದಾರೆ ಈ ಪಾಕ್​​ ಮಾಜಿ ಕ್ರಿಕೆಟಿಗ!

ಕುಟುಂಬದವರು ಗಾಬರಿಯಿಂದ ಹುಡುಕಾಡಿದಾಗ ಮುಮ್ತಾಜ್​ ಅಲಿ ಖಾನ್​​ ಕಾರು ಕೂಳೂರು ಸೇತುವೆಯ ಫಲ್ಗುಣಿ ನದಿ ಬಳಿ ಅಪಘಾತಕ್ಕೀಡಾದಂತೆ ಪತ್ತೆಯಾಗಿದೆ. ಕಾರಿನಲ್ಲಿ ಮೊಬೈಲ್​ ಮತ್ತು ಕಾರು ಕೀ ಪತ್ತೆಯಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment