BBK11GrandFinale: ಅಮ್ಮನ ಕನಸು ನನಸಾಗದ ನೋವು.. ಬಿಗ್​ಬಾಸ್ ಮನೆಯಿಂದ ಮೋಕ್ಷಿತಾ ಔಟ್‌!

author-image
Veena Gangani
Updated On
BBK11GrandFinale: ಅಮ್ಮನ ಕನಸು ನನಸಾಗದ ನೋವು.. ಬಿಗ್​ಬಾಸ್ ಮನೆಯಿಂದ ಮೋಕ್ಷಿತಾ ಔಟ್‌!
Advertisment
  • ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಮೋಕ್ಷಿ
  • ಇನ್ನೂ ಕೆಲವೇ ಗಂಟೆಗಳಲ್ಲಿ ಬಿಗ್​ಬಾಸ್​ ವಿನ್ನರ್​ ಹೆಸರು ರಿವೀಲ್
  • ಮಂಜಣ್ಣನ ಬೆನ್ನಲ್ಲೇ ಸಹೋದರಿ ಮೋಕ್ಷಿತಾ ಕೂಡ ಬಂದ್ರು ಆಚೆಗೆ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 11 ಮುಕ್ತಾಯ ಹಂತ ತಲುಪಿದೆ. ಇಂದು ವಿನ್ನರ್‌ ಯಾರಾಗಲಿದ್ದಾರೆ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಮೋಕ್ಷಿತಾ ಪೈ ಆಚೆ ಬಂದಿದ್ದಾರೆ.

ಇದನ್ನೂ ಓದಿ: BBK11: ಬಿಗ್ ಬಾಸ್‌ ಕಟ್ಟ ಕಡೆಯ ಶೋ.. ಗ್ರ್ಯಾಂಡ್‌ ಫಿನಾಲೆಗೂ ಮುನ್ನ ಕಿಚ್ಚ ಸುದೀಪ್ ಭಾವುಕ! VIDEO

publive-image

ಹೌದು, ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ಮೋಕ್ಷಿತಾ ಪೈ ಕೊನೆಯ ಕ್ಷಣದಲ್ಲಿ ಬಿಗ್​ಬಾಸ್‌ ಮನೆಯಿಂದ ಆಚೆ ಬಂದು ಅಚ್ಚರಿ ಮೂಡಿಸಿದ್ದಾರೆ. ಈ ಬಾರಿಯ ಸೀಸನ್ 11ರ ವಿನ್ನರ್​ ಮಹಿಳಾ ಸ್ಪರ್ಧಿಯೇ ಆಗಲಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸಾಕಷ್ಟು ಮಂದಿ ಇದೆ ನಿಜ ಅಂತ ತಿಳಿದುಕೊಂಡಿದ್ದರು. ಇದೀಗ ಆ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

publive-image

ಈ ಹಿಂದೆ ಬಿಗ್​ಬಾಸ್​ ಟ್ರೋಫಿ ನೋಡುತ್ತಾ ಮಾತನಾಡಿದ್ದ ಮೋಕ್ಷಿತಾ, ಬಿಗ್​ಬಾಸ್​ ಯೋಚನೆನೇ ನನ್ನ ತಲೆಯಲ್ಲಿ ಇರಲಿಲ್ಲ. ನಟನೆ ಕಡೆ ನನಗೆ ಆಸಕ್ತಿ ಇತ್ತು. ಬಿಗ್​ಬಾಸ್​ಗೆ ಹೋಗಬೇಕು ಅನ್ನೋದು ಅಮ್ಮನ ಕನಸ್ಸಾಗಿತ್ತು. ಅವರ ಕನಸ್ಸನ್ನು ಈಡೇಸಬೇಕು ಅಂತ ನಾನು ಇಲ್ಲಿಗೆ ಬಂದಿದ್ದೀನಿ. ದೇವರ ಹಾಗೂ ಜನರ ಆರ್ಶೀವಾದದಿಂದ ನಾನು ಇಲ್ಲಿಗೆ ಬಂದಿದ್ದೀನಿ. ಫಿನಾಲೆ ಹಂತಕ್ಕೆ ಬಂದ ಮೇಲೆ ಟ್ರೋಫಿ ಬಗ್ಗೆ ಇರೋ ಆಸೆ ಜಾಸ್ತಿಯಾಗಿದೆ. ಈ ಟ್ರೋಫಿ ಗೆಲ್ಲಬೇಕು ಅಂದ್ರೆ, ಅಮ್ಮ, ದೇವರ ಹಾಗೂ ಜನರ ಪ್ರೀತಿ, ಆರ್ಶೀವಾದ ಇದ್ರೆ ಇದು ನನಗೆ ಸೇರುತ್ತೆ. 12 ವಾರ ನಾಮಿನೇಟ್​ ಆದ ನನ್ನನ್ನೂ ಜನ ಇಲ್ಲಿಗೆ ತನಕ ಕರೆದುಕೊಂಡು ಬಂದಿದ್ದಾರೆ ಅಂದ್ರೆ ಖಂಡಿತವಾಗಲು ಜನ ನನ್ನ ಕಾಪಾಡುತ್ತಾರೆ ಅಂತ ನಂಬಿಕೆ ಇದೆ ಎಂದಿದ್ದರು.

ಆದ್ರೆ ಇದೀಗ ಟಾಪ್ 3ನೇ ರನ್ನರ್ ಅಪ್​ ಆಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಇಷ್ಟು ದಿನ ತಾವು ತಾವಾಗಿಯೇ ಇದ್ದು ಎಲ್ಲಾ ಟಾಸ್ಕ್​ಗಳಲ್ಲೂ ಭಾಗಿಯಾಗಿದ್ದರು. ಕ್ಯಾಪ್ಟನ್​ ಹನುಮಂತ ಅವರಿಂದ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟು ಟಾಪ್ 3ನೇ ರನ್ನರ್ ಅಪ್​ ಆಗಿ ಆಚೆ ಬಂದಿದ್ದಾರೆ. ಸದ್ಯ ಮೋಕ್ಷಿತಾ ಪೈ ಅವರ ಅಭಿಮಾನಿಗಳ ಬಳಗ ದುಪ್ಪಟ್ಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment