ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್‌ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?

author-image
Veena Gangani
Updated On
ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್‌ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?
Advertisment
  • ಬಿಗ್​ಬಾಸ್​ ಮೂಲಕವೇ ಮತ್ತಷ್ಟೂ ಗಟ್ಟಿಯಾಯ್ತು ಈ ಇಬ್ಬರ ಸ್ನೇಹ
  • ಗೆಳತಿಯನ್ನು ಭೇಟಿಯಾಗಲು ಆಕೆಯಿದ್ದ ಜಾಗಕ್ಕೆ ಭೇಟಿ ಕೊಟ್ಟ ಮೋಕ್ಷಿತಾ
  • ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಹೋಗೋದಕ್ಕೆ ಕಾರಣವೇನು?

ಕನ್ನಡದ ಬಿಗ್​ ರಿಯಾಲಿಟಿ ಶೋ ಸೀಸನ್ 11ರ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಈ ಗೆಳತಿಯರು ಎಷ್ಟೇ ಬ್ಯುಸಿ ಇದ್ದರು ಆಗಾಗ ಭೇಟಿಯಾಗುತ್ತಲೇ ಇರುತ್ತಾರೆ.

ಇದನ್ನೂ ಓದಿ:ಸಾಧು ಕೋಕಿಲಗೆ ತರಾಟೆ ತಗೊಂಡ ಸುದೀಪ್ ಮ್ಯಾನೇಜರ್‌ ಚಕ್ರವರ್ತಿ ಚಂದ್ರಚೂಡ್; ತಪ್ಪು ಮಾಡಿದ್ದು ಯಾರು?

publive-image

ಹೌದು, ಕನ್ನಡದ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳಾಗಿದ್ದ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಸಿಂಧೋಗಿ ಮತ್ತೆ ಒಂದಾಗಿದ್ದಾರೆ. ಬಿಗ್​​ಬಾಸ್​ನಿಂದಲೇ ಈ ಇಬ್ಬರ ಸ್ನೇಹ ಗಟ್ಟಿಯಾಗಿದ್ದು, ಇದೀಗ ಮೋಕ್ಷಿತಾ ಪೈ ದಿಢೀರ್ ಅಂತ ಐಶ್ವರ್ಯಾ ಸಿಂಧೋಗಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ.

publive-image

ಐಶ್ವರ್ಯಾ ಸಿಂಧೋಗಿ ಬ್ಯೂಟಿ ಪಾರ್ಲರ್​ನಲ್ಲಿ ನೇಲ್ ಆರ್ಟಿಂಗ್ ಮಾಡಿಸಿಕೊಳ್ಳುತ್ತಿದ್ದಾಗ ದಿಢೀರ್ ಅಂತ ಅಲ್ಲಿಗೆ ಮೋಕ್ಷಿತಾ ಎಂಟ್ರಿ ಕೊಟ್ಟು ಸರ್​ಪ್ರೈಸ್​ ನೀಡಿದ್ದಾರೆ. ಇದಾದ ಬಳಿಕ ಐಶ್ವರ್ಯಾ ಸಿಂಧೋಗಿ ಭೇಟಿಯಾಗೋದಕ್ಕೆ ಮುಖ್ಯ ಕಾರಣವೇ ಸಿಂಬಾ. ಮೋಕ್ಷಿತಾ ಅವರು ಐಶ್ವರ್ಯಾ ಅವರ ಪ್ರೀತಿಯ ಶ್ವಾನ ಸಿಂಬಾನನ್ನು ನೋಡಲು ಅವರ ಮನೆಗೆ ಬಂದಿದ್ದರು.

ಆಗ ​ಐಶ್ವರ್ಯಾ ಸಿಂಧೋಗಿ ಮೋಕ್ಷಿತಾ ಪೈಗೆ ಸೀರೆಯನ್ನು ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಮೋಕ್ಷಿತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಜೊತೆಗೆ ನಿಮ್ಮೊಂದಿಗೆ ಕಳೆದ ಸಣ್ಣ ಕ್ಷಣಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment