/newsfirstlive-kannada/media/post_attachments/wp-content/uploads/2024/11/BIG-BOSS-5.jpg)
‘ಬಿಗ್ಬಾಸ್ ಸಾಮ್ರಾಜ್ಯ’ದ ಆಟದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಜು ಸಾಮ್ರಾಜ್ಯ ಪತನದತ್ತ ಸಾಗುತ್ತಿದ್ದು, ಗದ್ದುಗೆ ಮೇಲೆ ಯುವರಾಣಿ ಮೋಕ್ಷಿತಾ ಕಣ್ಣು ಬಿದ್ದಿದೆ. ಸಾಮ್ರಾಜ್ಯದ ಮೇಲೆ ಯುವರಾಣಿ ಮೋಕ್ಷಿತಾರ ಕಣ್ಣು ಬಿದ್ದಿದೆ. ಮಂಜು ಮಹಾರಾಜರು ಅಲಂಕರಿಸಿರುವ ಖುರ್ಚಿ ಮೇಲೆ ಮೋಕ್ಷಿತಾ ಹೋಗಿ ಕೂತಿದ್ದಾರೆ.
ಕಲರ್ಸ್ ಕನ್ನಡ ಇವತ್ತು ರಾತ್ರಿ ಪ್ರಸಾರವಾಗುವ ಎಪಿಡೋಡ್ಗೆ ಸಂಬಂಧಿಸಿ ಹೊಸ ಪ್ರೊಮೋ ಹಂಚಿಕೊಂಡಿದೆ. ಬಿಗ್ಬಾಸ್ ಸಾಮ್ರಾಜ್ಯದ ಮಂಜಣ್ಣ ಅವರ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಅಂತಾ ಬಿಗ್ಬಾಸ್ ಧ್ವನಿ ಕೇಳಿಸಿದೆ. ಬೆನ್ನಲ್ಲೇ ಮಂಜು ಅಧಿಕಾರ ನಮ್ಮದೇ ಎಂದು ತೊಡೆ ತಟ್ಟಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್ನಲ್ಲಿ 56 ಲಕ್ಷ ಫಾಲೋವರ್ಸ್, ಬಿಗ್ಬಾಸ್ ಮಾಜಿ ಸ್ಪರ್ಧಿಗೆ ಜನ ಕೊಟ್ಟ ವೋಟು ಎಷ್ಟು?
ಇತ್ತ ಮೋಕ್ಷಿತಾ ಈ ಸಾಮ್ರಾಜ್ಯದ ಯುವರಾಣಿ ನಾನು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರಜೆಗಳಿಂದ ಯುವರಾಣಿ ಅವರಿಗೆ ಜಯವಾಗಲಿ ಎಂಬ ಘೋಷಣೆ ಕೂಡ ಮೊಳಗಿದೆ. ಅಷ್ಟರಲ್ಲೇ ಮೋಕ್ಷಿತಾ ಕ್ಯಾಪ್ಟನ್ಸಿ ರೂಮ್ ಒಳಗೆ ಹೋಗುವ ಅಧಿಕಾರ ನನಗೆ ಇದೆ ಎಂದು ನುಗ್ಗಿದ್ದಾರೆ. ಆಗ ಅಧಿಕಾರ ನಿಮಗೆ ಇಲ್ಲ. ಬಾಗಿಲು ಕ್ಲೋಸ್ ಮಾಡಿ ಎಂದು ಮಂಜು ಹೇಳಿದ್ದಾರೆ. ನಂತರ ಮತ್ತೆ ಖುರ್ಚಿ ವಿಚಾರಕ್ಕೆ ಮೋಕ್ಷಿತಾ ಮತ್ತು ಮಂಜು ನಡುವೆ ಹೋರಾಟ ನಡೆದಿದೆ. ಈ ಗದ್ದುಗೆ ಕಿತ್ತಾಟದಲ್ಲಿ ಯಾರು ಗೆದ್ದಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ:ಹ್ಯಾಪಿ ಮೂಡ್ನಲ್ಲಿ ಬಿಗ್ಬಾಸ್ ಖ್ಯಾತಿಯ ಚೈತ್ರಾ ಹಳ್ಳಿಕೇರಿ.. ಇಷ್ಟು ಜೋರಾದ ಸಂಭ್ರಮ ಯಾಕೆ ಗೊತ್ತಾ?
ಸಾಮ್ರಾಜ್ಯ ಅಂದ್ಮೇಲೆ ಯುವರಾಣಿ ಬೇಕಲ್ವಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa#BBKPromopic.twitter.com/XIqGF1L6ow— Colors Kannada (@ColorsKannada) November 27, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ