/newsfirstlive-kannada/media/post_attachments/wp-content/uploads/2025/02/Bigg-boss-MOkshitha-pai.jpg)
ಬಿಗ್ ಬಾಸ್ ಸೀಸನ್ 11ರಲ್ಲಿ ಅಪಾರ ಅಭಿಮಾನಿಗಳ ಹೃದಯ ಗೆದ್ದ ಮೋಕ್ಷಿತಾ ಪೈ ಮತ್ತೊಮ್ಮೆ ತಾನು ಎಷ್ಟು ಸಿಂಪಲ್ ಅನ್ನೋದಕ್ಕೆ ಸಾಕ್ಷಿಯಾಗಿದ್ದಾರೆ. ತಾನು ಇರೋದು ಹೀಗೆ. ನಾನು ಎಂದು ಬದಲಾಗೋದಿಲ್ಲ ಎಂದು ಬಿಗ್ ಬಾಸ್ ಶೋನಲ್ಲಿ ಮೋಕ್ಷಿತಾ ಎಲ್ಲರಿಗೂ ತೋರಿಸಿಕೊಟ್ಟಿದ್ದರು.
ಬಿಗ್ ಬಾಸ್ ಸೀಸನ್ 11ರಲ್ಲಿ ಕಪ್ ಗೆಲ್ಲದಿದ್ರೂ ಮೋಕ್ಷಿತಾ ಪೈ ಕೋಟ್ಯಾಂತರ ಕನ್ನಡಿಗರ ಪ್ರೀತಿ ಗೆದ್ದಿದ್ದರು. 3ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಮೋಕ್ಷಿತಾ ಪೈ ಬಿಗ್ ಬಾಸ್ ಮುಗಿದ ಮೇಲೂ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ತನ್ನ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಮೋಕ್ಷಿತಾ ಅವರು ತನ್ನ ಆಪ್ತ ಸ್ನೇಹಿತೆ ಮಾನ್ಸಿ ಜೋಶಿ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಗೆಳತಿ ಮದುವೆ ಖುಷಿಯಲ್ಲಿ ಮಿಂದೆದ್ದು ಸ್ವಲ್ಪ ಕಣ್ಣೀರು ಸಹ ಹಾಕಿದ್ದರು. ಇದೀಗ ಮೋಕ್ಷಿತಾ ಮತ್ತೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳು ಭಾವುಕರಾಗುವಂತೆ ಮಾಡಿದ್ದಾರೆ.
View this post on Instagram
ಮೋಕ್ಷಿತಾ ಪೈ ಮುಗ್ಧ ಮನಸ್ಸಿನ ಮಕ್ಕಳ ಜೊತೆ ಬೆರೆತು ಕಾಲ ಕಳೆದಿದ್ದಾರೆ. ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡಿರುವ ಮೋಕ್ಷಿತಾ ಇನ್ಸ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ. ಮುಗ್ಧ ಮನಸ್ಸಿನ ಮಕ್ಕಳು ದೇವರ ಸಮಾನ. ಅಂತ ಮಕ್ಕಳು ನನ್ನನ್ನು ಇಷ್ಟ ಪಡ್ತಾ ಇರೋದು ನನ್ನ ಪುಣ್ಯ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: BBK11: ವೀಲ್‌ಚೇರ್‌ನಲ್ಲಿ ಬಂದ ತಮ್ಮ.. ‘ಅವನೇ ನನ್ನ ಪ್ರಪಂಚ’ ಎಂದು ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ ಪೈ
ಬಿಗ್ ಬಾಸ್ ಮನೆಯಲ್ಲಿದ್ದಾಗ ಮೋಕ್ಷಿತಾ ಅವರು ತಮ್ಮ ವೀಲ್‌ಚೇರ್‌ನಲ್ಲಿ ಬಂದು ಸರ್‌ಪ್ರೈಸ್ ಕೊಟ್ಟಿದ್ದರು. ಆಗ ಬಿಕ್ಕಿ, ಬಿಕ್ಕಿ ಅತ್ತಿದ್ದ ಮೋಕ್ಷಿತಾ ನನ್ನ ತಮ್ಮ.. ‘ಅವನೇ ನನ್ನ ಪ್ರಪಂಚ’ ಎಂದು ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ