ಬಿಗ್​ಬಾಸ್​ ಗೆಳತಿಯರ ಸಖತ್ ಫಾರಿನ್​ ಟ್ರಿಪ್; ಐಶ್ವರ್ಯ, ಮೋಕ್ಷಿತಾ ಹೋಗಿದ್ದು ಎಲ್ಲಿಗೆ?

author-image
Veena Gangani
Updated On
ಬಿಗ್​ಬಾಸ್​ ಗೆಳತಿಯರ ಸಖತ್ ಫಾರಿನ್​ ಟ್ರಿಪ್; ಐಶ್ವರ್ಯ, ಮೋಕ್ಷಿತಾ ಹೋಗಿದ್ದು ಎಲ್ಲಿಗೆ?
Advertisment
  • ಎಲ್ಲಿಗೆ ಹೋದರು ಒಟ್ಟಾಗಿ ಹೋಗ್ತಾರೆ ಮೂರು ಸ್ನೇಹಿತರು
  • ಬಿಗ್​ಬಾಸ್​ ಮನೆಯಲ್ಲಿ ಬೆಳೆದ ಈ ಮೂವರ ಮಧ್ಯೆ ಸ್ನೇಹ
  • ಮೋಕ್ಷಿತಾ, ಐಶ್ವರ್ಯ ಹಾಗೂ ಶಿಶಿರ್ ಹೋಗಿದ್ದು ಎಲ್ಲಿಗೆ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಅದರಲ್ಲೂ ಬಿಗ್​ಬಾಸ್​ ಮನೆಯಲ್ಲಿ ಇಬ್ಬರ ಮಧ್ಯೆ ಗಾಢವಾದ ಸ್ನೇಹ ಬೆಳೆದಿದೆ.

publive-image

ಅದಕ್ಕೆ ಸಾಕ್ಷಿ ಎಂಬಂತೆ ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದರಂತೆ ದೇಶ ವಿದೇಶ ಸುತ್ತುವಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಹೌದು, ಐಶ್ವರ್ಯ ಸಿಂಧೋಗಿ ಹಾಗೂ ಮೋಕ್ಷಿತಾ ಪೈ ಇಬ್ಬರ ಸ್ನೇಹವು ಬಿಗ್​ಬಾಸ್​ ಮೂಲಕ ಗಟ್ಟಿಯಾಗಿದೆ.

ಇದನ್ನೂ ಓದಿ:Breaking: ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ

publive-image

ಇದಕ್ಕೆ ಸಾಕ್ಷಿಯಂತೆ ಬಿಗ್​ಬಾಸ್​ನಿಂದ ಆಚೆ ಬಂದ ಮೇಲೆಯೂ ಇಬ್ಬರು ಸಖತ್​ ಕ್ಲೋಸ್​ ಆಗಿದ್ದಾರೆ.

publive-image

ಈ ಇಬ್ಬರ ಜೊತೆಗೆ ಶಿಶಿರ್​ ಕೂಡ ಸೇರಿಕೊಂಡಿದ್ದಾರೆ. ಎಲ್ಲಿಗೆ ಹೋದರು ಈ ಮೂವರು ಜೊತೆಗೆಯಾಗೇ ಹೋಗುತ್ತಾರೆ.

publive-image

ಇದೀಗ ಶಿಶರ್, ಐಶೂ ಹಾಗೂ ಮೋಕ್ಷಿತಾ ವಿದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. ಅಜೆರ್ಬೈಜಾನ್ ರಾಜಧಾನಿಯಾಗೊರೋ ಬಾಕುಗೆ ಈ ಮೂವರು ಹೋಗಿದ್ದಾರೆ.

publive-image

ಬಾಕು ಕೊಲ್ಲಿಯ ವಿಶಾಲವಾದ ಪ್ರದೇಶಗಳನ್ನು ಎಕ್ಸಪ್ಲೋರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರಪಂಚದ ಅತಿದೊಡ್ಡ ಒಳನಾಡಿನ ಜಲರಾಶಿಯಾಗಿರೋ ಕ್ಯಾಸ್ಪಿಯನ್ ಸಮುದ್ರಕ್ಕೆ ಭೇಟಿ ಕೊಟ್ಟಿದ್ದಾರೆ.

publive-image

ಜೊತೆಗೆ ಸೇಮ್​ ಜಾಗದಲ್ಲಿ ನಿಂತುಕೊಂಡು ಪೋಸ್​ ಕೊಟ್ಟ ಮೂವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ಸದ್ಯ ಇದೇ ಫೋಟೋಗಳು ವೈರಲ್​ ಆಗುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಇದ್ದರೆ ನಿಮ್ಮ ತರ ಇರಬೇಕು ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment