/newsfirstlive-kannada/media/post_attachments/wp-content/uploads/2024/12/bbk11-mokshitha2.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ಕ್ಕೆ ಹಳೆಯ ಸ್ಪರ್ಧಿಗಳ ಆಗಮನವಾಗಿದೆ. ನಿನ್ನೆಯ ಎಪಿಸೋಡ್ನಲ್ಲಿ ಡ್ರೋನ್ ಪ್ರತಾಪ್ ಹಾಗೂ ತನಿಷಾ ಕುಪ್ಪಂಡ ಬಂದಿದ್ದರು.
ಇದನ್ನೂ ಓದಿ:ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ನಾಳೆ ರಜೆ ಇಲ್ಲ ಎಂದು BMRCL ಸ್ಪಷ್ಟನೆ; ಗೊಂದಲ ಯಾಕೆ?
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಗೆ ಕಳಿಸುವುದಕ್ಕೆ ಒಂದು ರೀಸನ್ ಕೂಡ ಇದೆ. ಅದುವೆ ಬಿಗ್ಬಾಸ್ ಮನೆಯ ಬಹು ಮುಖ್ಯವಾದ ಅಂಶವೇ ನಾಮಿನೇಷನ್ ಪ್ರಕ್ರಿಯೆ.
11ನೇ ವಾರಕ್ಕೆ ಕಾಲಿಟ್ಟ ಬಿಗ್ಬಾಸ್ ಮನೆಗೆ ಕಳೆಯ ಸೀಸನ್ ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಂಟ್ರಿ ಕೊಟ್ಟು ನಾಮಿನೇಷನ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಬೆಂಕಿ ಅಂತಲೇ ಖ್ಯಾತಿ ಪಡೆದುಕೊಂಡಿರೋ ತನಿಷಾ ಕುಪ್ಪಂಡ ಬಿಗ್ಬಾಸ್ ಮನೆಗೆ ಬಂದಿದ್ದರು.
ಇನ್ನೂ ನಾಮಿನೇಷನ್ ಪ್ರಕ್ರಿಯೆ ಶುರು ಮಾಡುವ ಮುನ್ನ, ಬಿಗ್ಬಾಸ್ ಮನೆಯಲ್ಲಿ ಹುಟ್ಟುಕೊಂಡು, ಮನಸ್ತಾಪದಿಂದ ಒಡೆದು ಹೋಗಿದ್ದ ಸ್ನೇಹವನ್ನು ಒಂದು ಮಾಡಲು ಪಯತ್ನಿಸಿದ್ದಾರೆ. ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ಅವರನ್ನು ಒಂದು ಕಡೆ ಕೂರಿಸಿ ನಿಮ್ಮಿಬ್ಬರ ಮಧ್ಯೆ ಏನಾಯ್ತು? ನೀವು ಒಬ್ಬರಿಗೊಬ್ಬರು ಮಾತಾಡಿ, ಏನೇ ಮನಸ್ತಾಪ ಇದ್ದರು ಇಲ್ಲೇ ಬಗೆಹರಿಸಿಕೊಳ್ಳಿ ಎಂಬೆಲ್ಲಾ ಮಾತುಗಳನ್ನು ಆಡಿದ್ದಾರೆ.
ತನಿಷಾ ಕುಪ್ಪಂಡ ಮಾತು ಕೇಳಿಸಿಕೊಂಡ ಮಂಜು ಮೋಕ್ಷಿತಾಗೆ ಅಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಜೊತೆಗೆ ಲವ್ ಯೂ ಮೋಕ್ಷಿ ಅಂತ ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮೂಲಕವಾದರೂ ಮುಂದಿನ ದಿನಗಳಲ್ಲಿ ಈ ಇಬ್ಬರು ಮುನಿಸನ್ನು ಮರೆತು ಒಂದು ಆಗ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ