/newsfirstlive-kannada/media/post_attachments/wp-content/uploads/2025/01/BBK11106.jpg)
ಬಿಗ್ ಬಾಸ್ ಸೀಸನ್ 11 ಅಂತಿಮ ಘಟ್ಟ ತಲುಪಿದ್ದು, ಇನ್ನೆರಡು ದಿನಗಳು ಕಳೆದರೆ ಸಾಕು ಯಾರ ಕೈಗೆ ಟ್ರೋಫಿ ಅನ್ನೋದು ಗೊತ್ತಾಗಲಿದೆ. ಒಂದೇ ಒಂದು ಟ್ರೋಫಿಗೆ 12 ಕೈಗಳು, 6 ಸ್ಪರ್ಧಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೋಟ್ಯಾಂತರ ಕನ್ನಡಿಗರು ಬಿಗ್ ಬಾಸ್ ಸೀಸನ್ 11 ಟ್ರೋಫಿ ಯಾರ ಮನೆಗೆ ಹೋಗುತ್ತೆ ಅಂತ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:VIDEO: ಒಂದೇ ಕಾಲಲ್ಲಿ ಕುಂಟುತ್ತ ವೇದಿಕೆಗೆ ಬಂದ ರಶ್ಮಿಕಾ; ಅಭಿಮಾನಿಗಳು ಆಕ್ರೋಶ.. ದಿಲ್ ಗೆದ್ದ ವಿಕ್ಕಿ ಕೌಶಲ್
ಬಿಗ್ ಬಾಸ್ ಫಿನಾಲೆಗೆ ವೇದಿಕೆ ರೆಡಿಯಾಗಿದ್ದು ಇದೇ ಶನಿವಾರ ಹಾಗೂ ಭಾನುವಾರ ಸೀಸನ್ 11ರ ಫಿನಾಲೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗುತ್ತಿದೆ. ಇನ್ನೂ ಬಿಗ್ಬಾಸ್ ಮನೆಯಲ್ಲಿ 6 ಮಂದಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಈ ಬಾರಿಯ ಬಿಗ್ಬಾಸ್ ಸೀಸನ್ 11ರ ಟ್ರೋಫಿಯನ್ನು ಮಹಿಳಾ ಸ್ಪರ್ಧಿಗಳು ವಿನ್ನರ್ ಆಗೋ ಚಾನ್ಸಸ್ ಇದ್ಯಾ ಎಂದು ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ.
ಇದೇ ವಿಚಾರವಾಗಿ ನ್ಯೂಸ್ಫಸ್ಟ್ ಸ್ಪೆಷಲ್ ಸಂದರ್ಶನದಲ್ಲಿ ಭಾಗಿಯಾಗಿದ್ದ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಧನರಾಜ್ ಆಚಾರ್, ರಂಜಿತ್, ಐಶ್ವರ್ಯಾ ಸಿಂಧೋಗಿ, ಅನುಷಾ ರೈ ಹಾಗೂ ಗೋಲ್ಡ್ ಸುರೇಶ್ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅದರಲ್ಲೂ ಈ ಬಾರಿಯ ಬಿಗ್ಬಾಸ್ ಟ್ರೋಫಿ ಮಹಿಳಾ ಸ್ಪರ್ಧಿಗೆ ದಕ್ಕುತ್ತಾ ಅಂತ ಎಂಬ ಪ್ರಶ್ನೆಗೆ ಸ್ಪರ್ಧಿಗಳು ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಸೀಸನ್ 11 ಕಪ್ ಗೆಲ್ಲೋದು ಯಾರು? ಹೊಸ ಡೆಡ್‌ಲೈನ್ ಫಿಕ್ಸ್!
ಮೊದಲು ಮಾತಾಡಿದ ಐಶ್ವರ್ಯಾ ಸಿಂಧೋಗಿ ಅವರ ಪ್ರಕಾರ ಮೋಕ್ಷಿತಾ ವಿನ್ ಆಗಬೇಕಂತೆ. ಏಕೆಂದರೆ, ಬಿಗ್ಬಾಸ್ ಮನೆಗೆ ಬರೋದಕ್ಕೂ ಮುನ್ನ ಮೋಕ್ಷಿತಾ ಗೊತ್ತಿದೆ. ನಮ್ಮ ಅಮ್ಮ ಕೂಡ ಮೋಕ್ಷಿತಾ ಅವರ ಫ್ಯಾನ್ಸ್. ಬಿಗ್ಬಾಸ್ ಮನೆಯಲ್ಲಿದ್ದಾಗ ಮೋಕ್ಷಿತಾರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ. ತುಂಬಾ ಚೆನ್ನಾಗಿ ಆಡಿದ್ದಾರೆ. ವಿನ್ ಆದ್ರೆ ಮೋಕ್ಷಿತಾನೇ ಆಗಬೇಕು ಎಂದಿದ್ದಾರೆ. ಅನುಷಾ ಅವರ ಪ್ರಕಾರ, ಭವ್ಯಾ ಗೌಡ ವಿನ್ ಆಗಬೇಕಂತೆ. ಭವ್ಯಾ ಗೌಡ ವಿನ್ ಆಂದ್ರೆ ತುಂಬಾ ಖುಷಿ ಆಗುತ್ತೆ ಎಂದಿದ್ದಾರೆ. ಧನರಾಜ್ ಆಚಾರ್ ಪ್ರಕಾರ ರನ್ನರ್ ಅಪ್ ಆದ್ರೆ ಭವ್ಯಾ ಗೌಡ ಆಗಬೇಕು ಎಂದಿದ್ದಾರೆ. ರಂಜಿತ್ ಅವರ ಪ್ರಕಾರ, ಮೋಕ್ಷಿತಾ ಹಾಗೂ ಭವ್ಯಾ ಇಬ್ಬರು ಚೆನ್ನಾಗಿ ಆಡಿದ್ದಾರೆ. ವಿನ್ ಆದ್ರೆ ಭವ್ಯಾ ಗೌಡ ಆಗಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ