/newsfirstlive-kannada/media/post_attachments/wp-content/uploads/2025/03/mokshitha2.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಪಾರು ಧಾರಾವಾಹಿಯ ಮೂಲಕ ಕರುನಾಡ ಮನೆ ಮಾತಾಗಿದ್ದ ಮೋಕ್ಷಿತಾ ಅವರು ಬಿಗ್ಬಾಸ್ ಶೋ ಮತ್ತಷ್ಟು ಹೆಸರು ತಂದು ಕೊಟ್ಟಿದೆ.
ಇದನ್ನೂ ಓದಿ: ರಾಧಿಕಾ ಪಂಡಿತ್ಗಾಗಿ ರೊಮ್ಯಾಂಟಿಕ್ ಹಾಡು ಹಾಡಿದ ರಾಕಿಂಗ್ ಸ್ಟಾರ್ ಯಶ್; ವಿಡಿಯೋ ವೈರಲ್!
ಬಿಗ್ಬಾಸ್ ಬಳಿಕ ಮೋಕ್ಷಿತಾ ಪೈ ಹೊಸ ಸಿನಿಮಾದಲ್ಲಿ ನಟಿಸತ್ತಿದ್ದಾರೆ. ಈ ಮಧ್ಯೆ ತಮ್ಮ ಗಣಿ ಅಂದರೆ, ಗಗನ್ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲದೇ ಖಾಸಗಿ ಕಾರ್ಯಕ್ರಮದಲ್ಲಿ ನೂರಾರು ಜನರಿಂದ ವಿಶೇಷವಾಗಿ ವಿಶ್ ಮಾಡಿಸಿ ಸರ್ಪ್ರೈಸ್ ಕೊಟ್ಟಿದ್ದಾರೆ.
View this post on Instagram
ಹೌದು, ಬಿಗ್ಬಾಸ್ ಮುಕ್ತಾಯದ ಬಳಿಕ ನಟಿ ಮೋಕ್ಷಿತಾ ಪರ್ಸನಲ್ ಲೈಫ್ಗೆ ಸಮಯ ಕೊಡುತ್ತಿದ್ದಾರೆ. ಅದರಲ್ಲೂ ಶಿಶರ್, ಐಶ್ವರ್ಯಾ ಸಿಂಧೋಗಿ ಜೊತೆಗೆ ಸುತ್ತಾಡುತ್ತಾ ಇರುತ್ತಾರೆ. ಇದರ ಮಧ್ಯೆ ಈ ಮೂವರು ಗೆಳಯರು ಗಗನ್ ಹುಟ್ಟುವನ್ನು ಸಿಂಪಲ್ ಆಗಿ ಆಚರಣೆ ಮಾಡಿದ್ದಾರೆ.
View this post on Instagram
ಆ ವಿಡಿಯೋವನ್ನು ಗಗನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಐಶ್ವರ್ಯಾ ಸಿಂಧೋಗಿ, ಶಶಿರ್ ಹಾಗೂ ಮೋಕ್ಷಿತಾ ಪೈ ಅವರು ತಮ್ಮ ಗಣಿಗಾಗಿ ಕೇಕ್ ಕಂದು ರೂಂನಲ್ಲೇ ಕಟ್ ಮಾಡಿ ಖುಷಿ ಪಟ್ಟಿದ್ದಾರೆ. ಇದಾದ ಬಳಿಕ ನೂರಾರು ಮಂದಿ ನೆರೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ನನ್ನ ತಮ್ಮ ಗಣಿ ಬರ್ತ್ ಡೇ ಇತ್ತು ಎಲ್ಲರೂ ವಿಶ್ ಮಾಡಿ ಎಂದು ಹೇಳಿದ್ದರು. ಆಗ ನೆರೆದಿದ್ದ ಎಲ್ಲರೂ ಗಣಿಗೆ ಮನಃಪೂರ್ವಕ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ