/newsfirstlive-kannada/media/post_attachments/wp-content/uploads/2025/07/Fauja-Singh.jpg)
ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ (world's oldest marathoner) ಫೌಜಾ ಸಿಂಗ್ (Fauja Singh) ಮೇಲೆ ಕಾರು ಹರಿಸಿ ಹತ್ಯೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆನಡಾದ ಅನಿವಾಸಿ ಭಾರತೀಯ ಅಮೃತಪಾಲ್ ಸಿಂಗ್ ಧಿಲ್ಲೋನ್ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಫೌಜಾ ಸಿಂಗ್ ಸಾವಿನ ಸುದ್ದಿ ಹಾಗೂ ಅವರ ಗುರುತು ಅನ್ನು ಟಿವಿ ನೋಡೋವರೆಗೂ ತಿಳಿದಿರಲಿಲ್ಲ ಎಂದು ಆರೋಪಿ ಅಮೃತಪಾಲ್ ಸಿಂಗ್ ಧಿಲೋನ್ ಪೊಲೀಸರಿಗೆ ತಿಳಿಸಿದ್ದಾನೆ. ತಾನು ಕಾರ್ ಡಿಕ್ಕಿ ಹೊಡೆಸಿದ ಫೌಜಾ ಸಿಂಗ್ ಅವರು ಜಾಗತಿಕ ಕ್ರೀಡಾ ಐಕಾನ್ ಎಂಬುದು ಮಾಧ್ಯಮಗಳಲ್ಲಿ ವರದಿಯಾದ ನಂತರವೇ ತಿಳಿಯಿತು ಎಂದಿದ್ದಾರೆ.
ಇದನ್ನೂ ಓದಿ: ತಲೆ ಬೋಳಿಸಿ ಕೂಡಿ ಹಾಕಿದ್ರು, ಮಾವನ ಜೊತೆ ಮಲಗುವಂತೆ ಚಿತ್ರಹಿಂಸೆ.. ಮಗುವಿನ ಕತ್ತು ಹಿಸುಕಿ ಜೀವ ಬಿಟ್ಟ ಗೃಹಿಣಿ
ಪಂಜಾಬ್‌ನ ಜಲಂಧರ್ ಜಿಲ್ಲೆಯ ಭಯಾಸ್ ಗ್ರಾಮದಲ್ಲಿ ಸೋಮವಾರ ದುರಂತದ ಘಟನೆ ನಡೆದಿತ್ತು. ಜಲಂಧರ್-ಪಠಾಣಕೋಟ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೌಜಾಸಿಂಗ್ರಿಗೆ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ವೇಗವಾಗಿ ಬಂದ ಫಾರ್ಚೂನರ್ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಫೌಜಾ ಸಿಂಗ್, ಐದರಿಂದ ಏಳು ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರಿ ಹೋದರು. ಫೌಜಾ ಸಿಂಗ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ, ಚಿಕಿತ್ಸೆಯು ಫಲಕಾರಿಯಾಗದೆ, ಅಂದು ಸಂಜೆ ಫೌಜಾ ಸಿಂಗ್ ಸಾವನ್ನಪ್ಪಿದ್ದರು. ಫೌಜಾ ಸಿಂಗ್ ಸೆಂಚುರಿ ಬಾರಿಸಿದ್ದ ಮ್ಯಾರಥಾನ್ ಓಟಗಾರ. ಫೌಜಾಸಿಂಗ್ ಅವರಿಗೆ 114 ವರ್ಷ. ಹೀಗಾಗಿ ಫೌಜಾ ಸಿಂಗ್ ಅವರು ವಿಶ್ವದ ಅತ್ಯಂತ ಹಿರಿಯ ಮ್ಯಾರಾಥಾನ್ ಓಟಗಾರ ಎಂದೇ ಖ್ಯಾತರಾಗಿದ್ದರು.
ಈ ಹಿಟ್ ಅಂಡ್ ರನ್ ಕೇಸ್ನಲ್ಲಿ ಚಾಲಕ, ಕಾರನ್ನ ನಿಲ್ಲಿಸದೇ ವೇಗವಾಗಿ ಪರಾರಿಯಾಗಿದ್ದ. ಹೀಗಾಗಿ ಪೊಲೀಸರು ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರಿನ ನಂಬರ್ ಪಡೆದು ಪತ್ತೆ ಹಚ್ಚಿದ್ದಾರೆ. ಜೊತೆಗೆ ಅಪಘಾತದ ವೇಳೆ ಕಾರ್ ಚಲಾಯಿಸುತ್ತಿದ್ದ ಆರೋಪಿ ಅಮೃತಪಾಲ್ ಸಿಂಗ್ ಧಿಲ್ಲೋನ್ ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪಂಜಾಬ್‌ನ ಕರ್ತಾರಪುರದ ಮನೆಯಿಂದ ಆರೋಪಿ ಅಮೃತಪಾಲ್ ಸಿಂಗ್ ಧಿಲ್ಲೋನ್ ಬಂಧಿಸಲಾಗಿದೆ. ಆರೋಪಿ ಅಮೃತಪಾಲ್ ಸಿಂಗ್ ಧಿಲ್ಲೋನ್ ಅಪಘಾತಕ್ಕೂ ಮುನ್ನ ಕಾರಿನ ಟೈರ್ ಬದಲಾಯಿಸಿದ್ದ. ಕಾರು ಕೂಡ ಕೆಲವರ ಕೈಬದಲಾಗಿತ್ತು. ಈಗ ಪೊಲೀಸರು ಫೌಜಾಸಿಂಗ್ಗೆ ಡಿಕ್ಕಿ ಹೊಡೆದ ಫಾರ್ಚೂನರ್ ಕಾರನ್ನ ಜಫ್ತಿ ಮಾಡಿದ್ದಾರೆ.
ಇದನ್ನೂ ಓದಿ: ಲಾರಿಗೆ ಡಿಕ್ಕಿ.. ಹೊಸೂರಲ್ಲಿ ಮೂವರು ವಿದ್ಯಾರ್ಥಿಗಳು ದುರಂತ ಅಂತ್ಯ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಹರ್ವಿಂದರ್ ಸಿಂಗ್ ವಿರ್ಕ್, ಅಪಘಾತದ ಸಮಯದಲ್ಲಿ ಧಿಲ್ಲೋನ್ ‘‘ಕೆಲಸದ ನಿಮಿತ್ತ ಆತುರದಲ್ಲಿದ್ದ’’ ಕಾರಣ ವೇಗವಾಗಿ ವಾಹನ ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ. ಘಟನೆಯ ದಿನದಂದು ತನ್ನ ಎಸ್‌ಯುವಿಯ ಒಂದು ಟೈರ್ ಅನ್ನು ಬದಲಾಯಿಸಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ‘‘ಫೌಜಾ ಸಿಂಗ್‌ಗೆ ಡಿಕ್ಕಿ ಹೊಡೆದ ನಂತರ ಅವನು ಭಯಭೀತನಾದ. ಹೀಗಾಗಿ ಕಾರನ್ನು ಸ್ಥಳದಲ್ಲಿ ನಿಲ್ಲಿಸಲಿಲ್ಲ ಎಂದು ವಿರ್ಕ್ ಹೇಳಿದರು. ಅಪಘಾತದ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅವನ ಜವಾಬ್ದಾರಿಯಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಅಮೃತಪಾಲ್ ಸಿಂಗ್ ಧಿಲ್ಲೋನ್ ಜೂನ್ 23 ರಂದು ಕೆನಡಾದಿಂದ ಭಾರತಕ್ಕೆ ಬಂದಿದ್ದ ಎಂದು ಪೊಲೀಸರು ದೃಢಪಡಿಸಿದರು. ಧಿಲ್ಲೋನ್, ಆರಂಭದಲ್ಲಿ ಪ್ರವಾಸಿ ವೀಸಾದಲ್ಲಿ ವಿದೇಶಕ್ಕೆ ಹೋಗಿದ್ದ. ನಂತರ 2027 ರವರೆಗೆ ಮಾನ್ಯವಾಗಿರುವ ಕೆಲಸದ ಪರವಾನಗಿ ಪಡೆದಿದ್ದರು.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 281 (ದುಡುಕಿನ ಚಾಲನೆ) ಮತ್ತು 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್ ಫೇವರಿಟ್..!
ಟರ್ಬನ್ಡ್ ಟೊರ್ನಾಡೋ ಎಂದು ಪ್ರೀತಿಯಿಂದ ಕರೆಯಲ್ಪಡುವ ಫೌಜಾ ಸಿಂಗ್ ಅವರ ಸಾವು ದೇಶಾದ್ಯಂತ ಮತ್ತು ಜಾಗತಿಕ ಸಿಖ್ ಸಮುದಾಯದಲ್ಲಿ ದುಃಖದ ಮಹಾಪೂರ ಹರಿಸಿದೆ. ಪ್ರಧಾನಿ ನರೇಂದ್ರ ಮೋದಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಎಲ್ಲರೂ ದಂತಕಥೆಯ ಕ್ರೀಡಾಪಟುವಿಗೆ ಗೌರವ ಸಲ್ಲಿಸಿದರು. ಫೌಜಾ ಸಿಂಗ್ ಪರಂಪರೆ ಮತ್ತು ಸ್ಫೂರ್ತಿದಾಯಕ ಜೀವನವನ್ನು ಶ್ಲಾಘಿಸಿದರು. ಪಂಜಾಬ್ ವಿಧಾನಸಭೆಯು ತನ್ನ ವಿಶೇಷ ಅಧಿವೇಶನದ ಕೊನೆಯ ದಿನದಂದು ಫೌಜಾ ಸಿಂಗ್ ಅವರಿಗೆ ಸಂತಾಪ ಸೂಚಿಸುವ ಮೂಲಕ ಗೌರವ ಸಲ್ಲಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ರೌಡಿ ಬಿಕ್ಲು ಶಿವನ ಬರ್ಬರ ಹತ್ಯೆ; ಮನೆ ಮುಂದೆಯೇ ಅಡ್ಡಗಟ್ಟಿ ಕೊಚ್ಚಿ ಕೊಲೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ