/newsfirstlive-kannada/media/post_attachments/wp-content/uploads/2025/07/Fake-officer-1.jpg)
ರಾಜಸ್ಥಾನದ ಪೊಲೀಸ್​ ಅಕಾಡೆಮಿಯಲ್ಲಿ ಒಂದು ಭಯಾನಕ ನಾಟಕ ಹೊರ ಬಿದ್ದಿದೆ. ಒಂದಲ್ಲ.. ಎರಡಲ್ಲ ಸುಮಾರು 24 ತಿಂಗಳು ಅವಳು ಪೊಲೀಸರಲ್ಲಿ ಪೊಲೀಸರಂತೆ ಇದ್ದು ಬೆಸ್ಟ್​ ಌಕ್ಟಿಂಗ್​ ಮಾಡಿದ್ದಾಳೆ. ವಿಚಾರ ಹೊರ ಬರುತ್ತಿದ್ದಂತೆ.. ಅಂದು ಮಿಸ್​ ಆಗಿದ್ದ ಮೇಡಂ ಎರಡು ವರ್ಷ ಕಳೆದ ಮೇಲೆ ಸಿಕ್ಕಿ ಬಿದ್ದಿದ್ದಾರೆ.
ಐನಾತಿ ಮಹಿಳೆ ಅಂದರ್!
ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಅಧಿಕಾರಿ ಆಗಬೇಕು ಅನ್ನೋದು ಅದೆಷ್ಟೋ ಜನರ ಕನಸು. ಇದಕ್ಕಾಗಿ ವರ್ಷಾನುಗಟ್ಟಲೆ ತಪಸ್ಸಿನಂತೆ ಕುಳಿತು ಓದುತ್ತಾರೆ.. ಪರೀಕ್ಷೆ ಬರೆದು.. ಸಂದರ್ಶನ ಎದುರಿಸಿ.. ಇನ್ನಿಲ್ಲದ ತರಬೇತಿ ಪಡೀತಾರೆ. ಆದ್ರೆ, ಇಲ್ಲೊಬ್ಬಳು ಐನಾತಿ ಹೆಣ್ಣು ಪರೀಕ್ಷೆಯಲ್ಲಿ ಫೇಲ್ ಆಗಿದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದಾಳೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿಯಲ್ಲೇ ಮತ್ತೊಂದು ಅಟ್ಯಾಕ್; ಮೆಸೇಜ್ ಮಾಡಿದ್ದಕ್ಕೆ ಅಪಹರಿಸಿ ಭಯಾನಕ ವಿಕೃತಿ..
ಪೊಲೀಸ್ ಸಬ್-ಇನ್ಸ್ಪೆಕ್ಟರ್ ಅಂತ ಹೇಳ್ಕೊಂಡು ರಾಜಸ್ಥಾನ ಪೊಲೀಸ್ ಅಕಾಡೆಮಿ ಟ್ರೈನಿಂಗ್‌ಗೆ ಹಾಜರಾಗಿದ್ದಾಳೆ. ಹಿರಿಯ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ತಾನು ಪೊಲೀಸ್ ಅಧಿಕಾರಿ ಅಂತಲೇ ಬಿಲ್ಡಪ್ ಕೊಡ್ತಿದ್ದ ಅಕ್ಕ ಈಗ ಸಿಕ್ಕಿಬಿದ್ದಿದ್ದಾಳೆ. ಅಕ್ಕನ ಹೆಸ್ರು ಮೋನಾ ಬುಗಾಲಿಯಾ ಅಲಿಯಾಸ್ ಮೂಲಿ ದೇವಿ. 2023ರಲ್ಲಿ ಈಕೆ ವಿರುದ್ಧ ದೂರು ದಾಖಲಾಗಿತ್ತು.. ಅವತ್ತೇ ಪರಾರಿಯಾಗಿದ್ದಳು. ಆದ್ರೆ ಪೊಲೀಸರು ಪಟ್ಟು ಬಿಡದೆ.. ಕೊನೆಗೂ ಅವಳ ಕೈಗೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಕೋಳ ತೊಡಿಸಿದ್ದಾರೆ.
ಮೋನಾ ಇದು ಸರಿನಾ?
- ರಾಜಸ್ಥಾನ ಪೊಲೀಸ್ ಅಕಾಡೆಮಿ ಪ್ರವೇಶಿಸಿ ತರಬೇತಿ
- ಆಕೆ ವಾಸವಿದ್ದ ಬಾಡಿಗೆ ಮನೆ ಶೋಧ, ದಾಖಲೆಗಳು ಪತ್ತೆ
- 7 ಲಕ್ಷ ಕ್ಯಾಶ್, 3 ಪೊಲೀಸ್ ಸಮವಸ್ತ್ರ, ಪ್ರಶ್ನೆಪತ್ರಿಕೆ ವಶಕ್ಕೆ
- ಇದೇ ವೇಳೆ ಮೋನಾ ಬಳಸಿದ್ದ ನಕಲಿ ದಾಖಲೆಗಳೂ ಪತ್ತೆ
- ಮೂಲಿ ದೇವಿ ನಾಗೌರ್ ಜಿಲ್ಲೆಯ ನಿಂಬಾಕೆಬಾಸ್ ಗ್ರಾಮಸ್ಥೆ
- 2021ರಲ್ಲಿ PSI ಪರೀಕ್ಷೆಯನ್ನ ಬರೆದಿದ್ದು, ಫೇಲ್ ಆಗಿದ್ದಳು
- ನಕಲಿ ದಾಖಲೆ ಸೃಷ್ಟಿಸಿ ಸಬ್-ಇನ್ಸ್ಪೆಕ್ಟರ್ ಅಂತ ಪೋಸ್ಟ್
- ಸ್ಫೋರ್ತಿದಾಯಕ ಭಾಷಣ, ಅಧಿಕಾರಿಗಳೊಂದಿಗೆ ಪೊಲೀಸ್
ಇದನ್ನೂ ಓದಿ: 336 ರನ್​ಗಳ ಭರ್ಜರಿ ಗೆಲುವು.. ಬೆನ್ನಲ್ಲೇ ಮೂವರು ಆಟಗಾರರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಕೊಹ್ಲಿ..!
ಸಬ್-ಇನ್ಸ್‌ಪೆಕ್ಟರ್ ವಾಟ್ಸಾಪ್ ಗ್ರೂಪ್‌ಗೆ ಸೇರಿಕೊಂಡು, ತಾನು ಕ್ರೀಡಾಕೋಟದಲ್ಲಿ ಆಯ್ಕೆಯಾಗಿರುವುದಾಗಿ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ತನ್ನನ್ನ ಪರಿಚಯಿಸಿಕೊಂಡಿದ್ದಳು. 2 ವರ್ಷಗಳ ಕಾಲ ಸಮವಸ್ತ್ರ ಧರಿಸಿಯೇ ಆರ್‌ಪಿಎಯ ಪೆರೇಡ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಳು. ಕೆಲ ಟ್ರೈನಿ ಪಿಎಸ್‌ಐಗಳು ಆಕೆಯ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಆಂತರಿಕ ವಿಚಾರಣೆ ಶುರುಮಾಡಲು ಪ್ರಾರಂಭಿಸಿದ್ದಾರೆ. ಆಗ ಪರಾರಿಯಾಗಿದ್ದ ಮೋನಾ ಈಗ ಸಿಕ್ಕಿಬಿದ್ದಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಆಕೆ ನಕಲಿ ಐಡಿ ಕಾರ್ಡ್, ದಾಖಲೆ ಸೃಷ್ಟಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ.
ತನ್ನ ಕುಟುಂಬದಲ್ಲಿನ ನಾಲ್ವರು ಸಹೋದರಿಯರನ್ನ ಮೆಚ್ಚಿಸಲು ಹಾಗೂ ಪೊಲೀಸರ ಅಧಿಕಾರ ಬಳಸಿಕೊಳ್ಳಲು ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕನ್ಫ್ಯೂಸ್ ಆಗಬೇಡಿ.. ದೃಷ್ಟಿಬೊಟ್ಟು ನಟಿ ಅರ್ಪಿತಾ ಸೌಂದರ್ಯಕ್ಕೆ ದಂಗಾದ ಫ್ಯಾನ್ಸ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ